ಗೌರಮ್ಮ ಹಾಗೂ ಅವರ ವೃದ್ಧ ತಾಯಿ 
ರಾಜ್ಯ

ದಾವಣಗೆರೆ: ಸಾಲ ಮರುಪಾವತಿಸದ ಕಾರಣ ಕುಟುಂಬವನ್ನು ಮನೆಯಿಂದ ಹೊರಹಾಕಿದ ಮೈಕ್ರೋಫೈನಾನ್ಸ್ ಸಂಸ್ಥೆ!

ದೈನಂದಿನ ಕೂಲಿ ಕಾರ್ಮಿಕರಾದ ಗೌರಮ್ಮ ಮತ್ತು ಅವರ ಕುಟುಂಬವು, ಮನೆಗೆ ಜಪ್ತಿ ನೋಟಿಸ್ ಅಂಟಿಸಿದ ನಂತರ ಬೀಗ ಹಾಕಲಾದ ಮನೆಯ ಹೊರಗೆ ವಾಸಿಸುತ್ತಿದ್ದಾರೆ.

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಸಾಲ ಮರುಪಾವತಿಸದ ಕಾರಣ ಖಾಸಗಿ ಮೈಕ್ರೋಫೈನಾನ್ಸ್ (ಸಣ್ಣ ಹಣಕಾಸು) ಸಂಸ್ಥೆಯೊಂದು ವೃದ್ಧ ಮಹಿಳೆ ಹಾಗೂ ಅವರ ಕುಟುಂಬವನ್ನು ಮನೆಯಿಂದ ಹೊರಹಾಕಿದೆ. ಇದರಿಂದಾಗಿ ಕಳೆದ 15 ದಿನಗಳಿಂದ ಈ ಕುಟುಂಬವು ಆಶ್ರಯವಿಲ್ಲದೆ ಬೀದಿಯಲ್ಲಿದೆ.

ದೈನಂದಿನ ಕೂಲಿ ಕಾರ್ಮಿಕರಾದ ಗೌರಮ್ಮ ಮತ್ತು ಅವರ ಕುಟುಂಬವು, ಮನೆಗೆ ಜಪ್ತಿ ನೋಟಿಸ್ ಅಂಟಿಸಿದ ನಂತರ ಬೀಗ ಹಾಕಲಾದ ಮನೆಯ ಹೊರಗೆ ವಾಸಿಸುತ್ತಿದ್ದಾರೆ. ಗೌರಮ್ಮ ಮತ್ತು ಅವರ ವೃದ್ಧ ತಾಯಿ ಮನೆಯ ಮುಂದೆಯೇ ದಿನ ಕಳೆಯುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.

ತಾನು ಆರಂಭದಲ್ಲಿ ಸಾಲ ಪಡೆಯಲು ನಿರಾಕರಿಸಿದ್ದೆ. ಆದರೆ, ಕಡಿಮೆ ಬಡ್ಡಿ ದರ ನೀಡುವುದಾಗಿ ಮತ್ತು ಈ ಹಣವು ತಮ್ಮ ಮಕ್ಕಳ ವ್ಯವಹಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿ ಸಂಸ್ಥೆಯವರು ತಮ್ಮನ್ನು ಒಪ್ಪಿಸಿದರು. ಸಂಸ್ಥೆಯ ಸಿಬ್ಬಂದಿ ಕಮಿಷನ್ ಗಳಿಸುವ ಉದ್ದೇಶದಿಂದಲೇ 6.80 ಲಕ್ಷ ರೂಪಾಯಿ ಸಾಲ ನೀಡಿದರು ಎಂದು ಗೌರಮ್ಮ ಆರೋಪಿಸಿದ್ದಾರೆ.

ಗೌರಮ್ಮ ಮೂರು ವರ್ಷ ಮೂರು ತಿಂಗಳ ಕಾಲ ಯಾವುದೇ ಲೋಪವಿಲ್ಲದೆ ಸಾಲದ ಕಂತುಗಳನ್ನು ಪಾವತಿಸಿದ್ದಾರೆ. ಸಾಲ ಮರುಪಾವತಿಗಾಗಿ, ಅವರು ಸ್ವತಃ ಕೂಲಿ ಕೆಲಸ ಮಾಡುವುದರ ಜೊತೆಗೆ, ತಮ್ಮ ಇಬ್ಬರು ಮಕ್ಕಳನ್ನೂ ಇತರರ ಮನೆಗಳಲ್ಲಿ ಕೆಲಸಕ್ಕೆ ಕಳುಹಿಸಿದ್ದರು. ಆದರೆ, ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಹದಗೆಟ್ಟಿದ್ದರಿಂದ ಗೌರಮ್ಮ ಕೆಲಸ ಮಾಡಲು ಅಸಮರ್ಥರಾದರು.

ಇದರಿಂದಾಗಿ ಸಾಲ ಮರುಪಾವತಿಸುವ ಕುಟುಂಬದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು. ಅನಾರೋಗ್ಯ ಮತ್ತು ಆದಾಯದ ನಷ್ಟವನ್ನು ಉಲ್ಲೇಖಿಸಿ ಹಣಕಾಸು ಸಂಸ್ಥೆಯ ಬಳಿ ಹೆಚ್ಚಿನ ಸಮಯ ಕೋರಿದರೂ, ಸಂಸ್ಥೆಯು ಕಾನೂನು ಕ್ರಮ ಕೈಗೊಂಡು, ನ್ಯಾಯಾಲಯದ ಆದೇಶದ ಮೇರೆಗೆ ಮನೆಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ರೈತರಿಂದ ಸಾಲ ವಸೂಲಾತಿ ಮಾನವೀಯವಾಗಿರಲಿ: ಪ್ರಭಾ ರೈತರು ಆರ್ಥಿಕತೆಯ ಬೆನ್ನೆಲುಬು ಎಂದು ಹೇಳಿರುವ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕೃಷಿ ಸಂಕಷ್ಟದ ಸಮಯದಲ್ಲಿ ರೈತರಿಗೆ ಬೆಂಬಲ ನೀಡುವುದು ಸಹಕಾರಿ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ಶನಿವಾರ ತಿಳಿಸಿದ್ದಾರೆ. ಸಹಕಾರಿ ಸಂಸ್ಥೆಗಳು ರೈತರ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ತಪ್ಪಿಸಿ, ಸಾಲ ವಸೂಲಾತಿಯಲ್ಲಿ ಮಾನವೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕ್ಯಾನ್ಸರ್ ರೋಗಿಗಳಿಗೆ ಗುಡ್‌ನ್ಯೂಸ್: ಕಿದ್ವಾಯಿಯಲ್ಲಿ 200 ಹಾಸಿಗೆಗಳ ಹೊಸ ಘಟಕ, 5 ಜಿಲ್ಲೆಗಳಲ್ಲಿ ಆಸ್ಪತ್ರೆ: ಸಿಎಂ ಡಿಕೆಶಿ ಘೋಷಣೆ

ಭ್ರಷ್ಟಾಚಾರ ಆರೋಪ: HK ಪಾಟೀಲ್`ಗೆ ಲೋಕಾಯುಕ್ತ ಕಂಟಕ, ದಾಖಲೆ ನೀಡುವಂತೆ ಕೋರ್ಟ್ ಸೂಚನೆ

ಸರ್ಕಾರಿ ಶಾಲೆಯಲ್ಲೂ AI, ರೋಬೋಟ್ ಪಾಠ; 6ನೇ ತರಗತಿಯಿಂದ ಕೋಡಿಂಗ್, ಮೈಸೂರಿನ ಶಿಕ್ಷಕರ ಹೊಸ ಪ್ರಯೋಗ!

PCMB ಓದುವ ಕನಸು, 93% ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ ಕೊಲೆಗಾರನಾದ ಕಥೆ: ಪಿಯು ವಿಷಯ ಆಯ್ಕೆಯೇ ದುರಂತಕ್ಕೆ ಕಾರಣವಾಯಿತೇ?

ಪ್ರಧಾನಿ ಅಮುಲ್ ಹಾಲಿನ ಬೆಲೆ ಕಡಿಮೆ ಮಾಡಿದ್ರೆ, ನಾವೂ ಅದೇ ರೀತಿ ಮಾಡ್ತೀವಿ; ಶೋಭಾ ಕರಂದ್ಲಾಜೆಗೆ ಹಸುಗಳ ಸಗಣಿ, ಮೂತ್ರದ ವಾಸನೆಯ ಪರಿಚಯವಿದೆಯೇ? ಸಿಎಂ ಡಿಕೆಶಿ!