ಇಂದುಶೇಖರ್  
ರಾಜ್ಯ

ಬೆಂಗಳೂರು ಸರಣಿ ಹತ್ಯೆ ಪ್ರಕರಣ: ನಾನ್-ವೆಜ್ ಊಟಕ್ಕೆ ಕರೆದು ಮೂಸಂಬಿ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ 7 ಮಂದಿ ಕಥೆ ಮುಗಿಸಿದ ಪಾಪಿ..!

ಹತ್ಯೆ ವೇಳೆ ಸಂತ್ರಸ್ತರು ಕಿರುಚಾಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಬಾರದು ಎಂಬ ಉದ್ದೇಶದಿಂದ ಆರೋಪಿ ಈ ವಿಧಾನ ಅನುಸರಿಸಿದ್ದಾನೆ ಎನ್ನಲಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ 7 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಮಹತ್ವದ ಹಾಗೂ ಭಯಾನಕ ಸಂಗತಿಗಳು ಬಯಲಾಗಿವೆ.

ಆರೋಪಿ ಕ್ಯಾಬ್ ಚಾಲಕ ಎಸ್. ಇಂದುಶೇಖರ್ (52) ಸಂಬಂಧಿಕರನ್ನು ಮನೆಗೆ ಕರೆಸಿಕೊಂಡು, ನಿದ್ದೆ ಮಾತ್ರೆ ಬೆರೆಸಿದ ಜ್ಯೂಸ್ ನೀಡಿ ಪ್ರಜ್ಞೆ ತಪ್ಪಿಸಿದ ನಂತರ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ಹತ್ಯೆ ವೇಳೆ ಸಂತ್ರಸ್ತರು ಕಿರುಚಾಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಬಾರದು ಎಂಬ ಉದ್ದೇಶದಿಂದ ಆರೋಪಿ ಈ ವಿಧಾನ ಅನುಸರಿಸಿದ್ದಾನೆ ಎನ್ನಲಾಗಿದೆ.

ಸಂತ್ರಸ್ತರಿಗೆ ನಾನ್-ವೆಜ್ ಊಟ ನೀಡಿದ ಬಳಿಕ ಆತನ ಅಪ್ರಾಪ್ತ ಪುತ್ರಿ ನಿದ್ರೆ ಮಾತ್ರೆ ಬೆರೆಸಿದ ಸಿಹಿ ನಿಂಬೆ ಹಣ್ಣಿನ ರಸವನ್ನು ನೀಡುತ್ತಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ನಿ ಮತ್ತು ಆಕೆಯ ಸಂಬಂಧಿಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇಂದೂಶೇಖರ್, ಇದಕ್ಕಾಗಿ ತನ್ನ ಅಪ್ರಾಪ್ತ ಪುತ್ರಿಯ ಸಹಾಯ ಪಡೆದಿದ್ದ ಎನ್ನಲಾಗಿದೆ.

ಹತ್ಯೆಗಳನ್ನು ನಡೆಸುವ ಮೊದಲು ಸುಮಾರು 50 ನಿದ್ರೆ ಮಾತ್ರೆಗಳು, ಗೋಣಿ ಚೀಲಗಳು, ಹಗ್ಗಗಳು ಹಾಗೂ ಇತರ ಸಾಮಗ್ರಿಗಳನ್ನು ಖರೀದಿಸಿದ್ದ. ಹತ್ಯೆ ವೇಳೆ ಸಂತ್ರಸ್ತರು ಕಿರುಚಾಡಿ ನೆರೆಹೊರೆಯವರಿಗೆ ಎಚ್ಚರಿಕೆ ನೀಡಬಹುದು ಎಂಬ ಭೀತಿಯಿಂದ ಅವರನ್ನು ಮೊದಲೇ ಪ್ರಜ್ಞಾಹೀನರನ್ನಾಗಿಸಲು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ತನ್ನ ಮನೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ, ಬೇರೆ ಬೇರೆ ದಿನಗಳಲ್ಲಿ ಇತರ ಸಂತ್ರಸ್ತರನ್ನು ಮನೆಗೆ ಕರೆಸಿಕೊಳ್ಳಲು ಪುತ್ರಿಯ ಮೂಲಕ ಫೋನ್ ಮಾಡಿಸಿದ್ದ. ಮಾಂಸಾಹಾರ ಊಟದ ನೆಪದಲ್ಲಿ ಅವರನ್ನು ಆಹ್ವಾನಿಸಲಾಗಿತ್ತು. ಊಟದ ಬಳಿಕ ನಿದ್ರೆ ಮಾತ್ರೆ ಬೆರೆಸಿದ ಸಿಹಿ ನಿಂಬೆ ಹಣ್ಣಿನ ರಸವನ್ನು ಅವರಿಗೆ ನೀಡಲಾಗುತ್ತಿತ್ತು.

ಸಂತ್ರಸ್ತರು ಪ್ರಜ್ಞೆ ಕಳೆದುಕೊಂಡ ಬಳಿಕ ಇಂದೂಶೇಖರ್ ಒಬ್ಬೊಬ್ಬರನ್ನಾಗಿ ಸ್ನಾನಗೃಹಕ್ಕೆ ಎಳೆದುಕೊಂಡು ಹೋಗಿ, ಅವರ ಬಟ್ಟೆಗಳನ್ನು ತೆಗೆದು ಹತ್ಯೆ ಮಾಡುತ್ತಿದ್ದ ಎನ್ನಲಾಗಿದೆ.

ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆಯುವಾಗ ರಕ್ತದ ಕಲೆಗಳು ಬಟ್ಟೆಗಳ ಮೇಲೆ ಬೀಳಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಹತ್ಯೆಯ ಬಳಿಕ ಅಪ್ರಾಪ್ತ ಬಾಲಕಿ ಸ್ನಾನಗೃಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಿದ್ದಳು. ನಂತರ ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಎಸೆಯಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇಂದೂಶೇಖರ್‌ನ ಪೊಲೀಸ್ ಕಸ್ಟಡಿ ಬುಧವಾರ ಅಂತ್ಯಗೊಳ್ಳಲಿದ್ದು, ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು, ಶರಣಾಗುವಂತೆ ಮನವಿ, Video ವೈರಲ್..!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ನಿವಾಸ ಸೇರಿ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ; Video

IPLಗೆ ಧೋನಿ ವಿದಾಯ: 'ಮೆಂಟರ್ ಆಗಿ ಮಾಹಿ ಉಪಸ್ಥಿತಿ ಯುವ ಆಟಗಾರರಿಗೆ ವರದಾನ': ಪಾಕ್ ಮಾಜಿ ಕ್ರಿಕೆಟಿಗನ ಮೆಚ್ಚುಗೆ!

ಐಪಿಎಲ್ 2027: ಎಲ್ಲಾ 10 ತಂಡಗಳ ಆಟಗಾರರ ರಿಲೀಸ್ ಪಟ್ಟಿ ಪ್ರಕಟ; 18 ಕೋಟಿ ರೂಗೆ ಖರೀದಿಸಿದ್ದ ಆಟಗಾರನಿಗೇ ಗೇಟ್`ಪಾಸ್ ಕೊಟ್ಟ ಕೆಕೆಆರ್, RCB ಕಥೆ ಏನು?

Kulgam ದಾಳಿ ಎಫೆಕ್ಟ್: CRPF ಯೋಧರಿಗೆ Bulletproof jackets ಕಡ್ಡಾಯ; ಭದ್ರತಾ ಕ್ರಮ ಮತ್ತಷ್ಟು ಬಿಗಿ..!