ಸಾಂದರ್ಭಿಕ ಚಿತ್ರ 
ರಾಜ್ಯ

ಗೃಹಪ್ರವೇಶವಾದ ಎರಡೇ ತಿಂಗಳಿಗೆ ಮನೆ ದೋಚಿದ ಖದೀಮರು: ಚಾಕು ತೋರಿಸಿ ಚಿನ್ನ, ನಗದು ಕಸಿದು ಪರಾರಿ..!

ದಂಪತಿ ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿದ್ದು, ಕೇವಲ ಎರಡು ತಿಂಗಳ ಹಿಂದಷ್ಟೇ ಗೃಹಪ್ರವೇಶ ನೆರವೇರಿಸಿದ್ದರು. ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ಈ ಮನೆಗೆ ಮುಸುಕುಧಾರಿ ದರೋಡೆಕೋರರು ನುಗ್ಗಿದ್ದಾರೆ.

ಬೆಂಗಳೂರು: ಹೊಸದಾಗಿ ಗೃಹಪ್ರವೇಶ ಮಾಡಿದ್ದ ಮನೆಗೆ ನುಗ್ಗಿದ ಮೂವರು ಮುಸುಕುಧಾರಿ ದುಷ್ಕರ್ಮಿಗಳು, ದಂಪತಿಗೆ ಚಾಕು ತೋರಿಸಿ ಬೆದರಿಸಿ 117 ಗ್ರಾಂ ಚಿನ್ನಾಭರಣ ಮತ್ತು ರೂ.8,000 ನಗದು ದೋಚಿರುವ ಘಟನೆ ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ನಡೆದಿದೆ.

ಪುರ ಗ್ರಾಮದ ನಿವಾಸಿಗಳಾದ ಮಾಲೆ ಸೋನಪ್ಪ ಮತ್ತು ಮಂಜುಳಾ ದಂಪತಿ ಕೇವಲ ಎರಡು ತಿಂಗಳ ಹಿಂದಷ್ಟೇ ತಮ್ಮ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು.

ದಂಪತಿ ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿದ್ದು, ಕೇವಲ ಎರಡು ತಿಂಗಳ ಹಿಂದಷ್ಟೇ ಗೃಹಪ್ರವೇಶ ನೆರವೇರಿಸಿದ್ದರು. ಗ್ರಾಮದ ನಿರ್ಜನ ಪ್ರದೇಶದಲ್ಲಿರುವ ಈ ಮನೆಗೆ ಮುಸುಕುಧಾರಿ ದರೋಡೆಕೋರರು ನುಗ್ಗಿದ್ದಾರೆ.

ಮುಖಕ್ಕೆ ಮಾಸ್ಕ್ ಮತ್ತು ಮಂಕಿ ಕ್ಯಾಪ್ ಧರಿಸಿದ್ದ ಮೂವರು ದುಷ್ಕರ್ಮಿಗಳು ಸಿಮೆಂಟ್‌ನ ಟೊಳ್ಳು ಬ್ಲಾಕ್ ಬಳಸಿ ಮನೆಯ ಮುಖ್ಯ ಬಾಗಿಲನ್ನು ಒಡೆದು ಒಳನುಗ್ಗಿದ್ದರು. ಶಬ್ದ ಕೇಳಿ ಎಚ್ಚರಗೊಂಡ ದಂಪತಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ ಆರೋಪಿಗಳು, ಚಿನ್ನಾಭರಣ ಮತ್ತು ಹಣ ನೀಡುವಂತೆ ಒತ್ತಾಯಿಸಿದ್ದಾರೆ.

ಬ್ಯಾಂಕ್‌ನಿಂದ ಚಿನ್ನಾಭರಣ ತಂದು ಮನೆಯಲ್ಲಿ ಇಟ್ಟಿರುವುದಾಗಿ ಶಂಕಿಸಿ ಅದರ ಬಗ್ಗೆಯೂ ದಂಪತಿಯನ್ನು ಪ್ರಶ್ನಿಸಿದ್ದಾರೆ. ಲಂಡನ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ದಂಪತಿಯ ಮಗಳು ರೂ.2 ಲಕ್ಷ ಕಳುಹಿಸಿದ್ದಾಳೆ, ಆ ಹಣವನ್ನೂ ನೀಡಬೇಕು ಎಂದು ಪೀಡಿಸಿದ್ದಾರೆ.

ಹಣವನ್ನು ಎಲ್ಲಿ ಇಟ್ಟಿದ್ದೀರಿ ಎಂದು ಕೇಳಿದರು. ಬೀರುಗಳನ್ನು ತೆರೆಯುವಂತೆ ಒತ್ತಾಯಿಸಿದರು. ಬ್ಯಾಂಕ್‌ನಿಂದ ಯಾವುದೇ ಚಿನ್ನ ತಂದಿಲ್ಲ, ಮಗಳು ಕೂಡ ಹಣ ಕಳುಹಿಸಿಲ್ಲ ಎಂದು ಹೇಳಿದರೂ ಅವರು ನಂಬಲಿಲ್ಲ. ಈಗಾಗಲೇ ಸಾಲದಲ್ಲಿದ್ದೇವೆ, ನಮ್ಮ ಬಳಿ ಹಣವಿಲ್ಲ ಎಂದು ತಿಳಿಸಿದರೂ ಬೆದರಿಕೆ ನಿಲ್ಲಿಸಲಿಲ್ಲ. ಬೀಗ ಹಾಕಿದ್ದ ಬೀರುಗಳನ್ನು ಬಲವಂತವಾಗಿ ತೆರೆಸಿ, ಮನೆಯಲ್ಲಿದ್ದ ವಸ್ತುಗಳನ್ನು ಹುಡುಕಾಡಿ ಸಿಕ್ಕ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋದರು ಎಂದು ದಂಪತಿ ತಿಳಿಸಿದ್ದಾರೆ.

ಆದರೆ, ಆರೋಪಿಗಳು ದಂಪತಿಯ ಮೇಲೆ ಹಲ್ಲೆ ನಡೆಸಿಲ್ಲ ಎಂದು ತಿಳಿದುಬಂದಿದೆ. ಘಟನೆಯ ವೇಳೆ ದಂಪತಿಯ ಮಗ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದನು.

ತಕ್ಷಣವೇ ಯಾರಿಗೂ ಮಾಹಿತಿ ನೀಡದಂತೆ ತಡೆಯಲು ಮನೆಯಿಂದ ಪರಾರಿಯಾಗುವ ಮೊದಲು ದಂಪತಿಯ ಮೊಬೈಲ್ ಫೋನ್‌ಗಳನ್ನೂ ಆರೋಪಿಗಳು ಕಿತ್ತುಕೊಂಡಿದ್ದಾರೆ. ಬಳಿಕ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು, ಶರಣಾಗುವಂತೆ ಮನವಿ, Video ವೈರಲ್..!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ನಿವಾಸ ಸೇರಿ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ; Video

IPLಗೆ ಧೋನಿ ವಿದಾಯ: 'ಮೆಂಟರ್ ಆಗಿ ಮಾಹಿ ಉಪಸ್ಥಿತಿ ಯುವ ಆಟಗಾರರಿಗೆ ವರದಾನ': ಪಾಕ್ ಮಾಜಿ ಕ್ರಿಕೆಟಿಗನ ಮೆಚ್ಚುಗೆ!

ಐಪಿಎಲ್ 2027: ಎಲ್ಲಾ 10 ತಂಡಗಳ ಆಟಗಾರರ ರಿಲೀಸ್ ಪಟ್ಟಿ ಪ್ರಕಟ; 18 ಕೋಟಿ ರೂಗೆ ಖರೀದಿಸಿದ್ದ ಆಟಗಾರನಿಗೇ ಗೇಟ್`ಪಾಸ್ ಕೊಟ್ಟ ಕೆಕೆಆರ್, RCB ಕಥೆ ಏನು?

Kulgam ದಾಳಿ ಎಫೆಕ್ಟ್: CRPF ಯೋಧರಿಗೆ Bulletproof jackets ಕಡ್ಡಾಯ; ಭದ್ರತಾ ಕ್ರಮ ಮತ್ತಷ್ಟು ಬಿಗಿ..!