ರಾಜ್ಯ

ರೈತರಿಗೆ ಬೆಳೆ ವಿಮೆಯಲ್ಲೂ ತಾರತಮ್ಯ! ಶಿವಮೊಗ್ಗದಲ್ಲಿ ಕಟ್ಟಿದ ಹಣಕ್ಕಿಂತ ಕಡಿಮೆ ಪರಿಹಾರಕ್ಕೆ ಸಿಡಿದೆದ್ದ ಅನ್ನದಾತರು

ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿದೆ ಎಂದು ಆರೋಪಿಸಿ, ಸಾವಿರಾರು ರೈತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿದೆ ಎಂದು ಆರೋಪಿಸಿ, ಶಿವಮೊಗ್ಗ ಬೆಳೆ ವಿಮೆ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. "ನಾವು ಕಟ್ಟಿದ ಸಾವಿರಾರು ರೂಪಾಯಿ ವಿಮೆ ಕಂತಿನ ಹಣ ಕೂಡ ವಾಪಸ್ ಬಂದಿಲ್ಲ" ಎಂದು ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪರಿಹಾರ ಹಂಚಿಕೆಯಲ್ಲಿ ಭಾರಿ ವ್ಯತ್ಯಾಸ

"ಬೆಳೆ ನಷ್ಟ ಅನುಭವಿಸಿದ್ದರೂ ಅತ್ಯಲ್ಪ ಪರಿಹಾರ ನೀಡಲಾಗಿದೆ; ನಾವು ಪ್ರೀಮಿಯಂ ರೂಪದಲ್ಲಿ ಕಟ್ಟಿದ ಸಾವಿರಾರು ರೂಪಾಯಿ ಹಣ ಕೂಡ ವಾಪಸ್ ಬರುತ್ತಿಲ್ಲ" ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ರೈತರು, 2024-25 ಮತ್ತು 2025-26ನೇ ಸಾಲಿನ ಬೆಳೆ ವಿಮೆ ವಿತರಣೆಯಲ್ಲಿ ಪಂಚಾಯತ್‌ನಿಂದ ಪಂಚಾಯತ್‌ಗೆ ಸಾವಿರಾರು ರೂಪಾಯಿ ವ್ಯತ್ಯಾಸ ಕಂಡುಬಂದಿದೆ. ಅಷ್ಟೇ ಅಲ್ಲದೆ, ಒಂದೇ ಗ್ರಾಮದ ಮತ್ತು ಒಂದೇ ಸರ್ವೇ ನಂಬರ್‌ನಲ್ಲಿರುವ ರೈತರ ಪರಿಹಾರ ಮೊತ್ತದಲ್ಲೂ ಭಾರಿ ವ್ಯತ್ಯಾಸವಾಗಿದೆ ಎಂದು ದೂರಿದ್ದಾರೆ. ಅದರಲ್ಲೂ, ವಿಶೇಷವಾಗಿ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳ ಅಡಿಕೆ ಬೆಳೆಗಾರರು ಕೊಳೆ ರೋಗ ಮತ್ತು ಎಲೆಚುಕ್ಕಿ ರೋಗದಿಂದ ತೀವ್ರ ನಷ್ಟ ಅನುಭವಿಸಿದ್ದಾರೆ. ಆದರೆ, ರೈತರು ವಿಮೆಗಾಗಿ ಕಟ್ಟಿದ ಪ್ರೀಮಿಯಂ ಹಣಕ್ಕಿಂತಲೂ ಕಡಿಮೆ ಪರಿಹಾರ ಬಂದಿದ್ದು, ಕೆಲವರಿಗೆ ಕೇವಲ ₹14 ಸಾವಿರ ಜಮೆಯಾದರೆ, ಪಕ್ಕದ ಗ್ರಾಮದವರಿಗೆ ₹72 ಸಾವಿರದವರೆಗೆ ಪರಿಹಾರ ಸಿಕ್ಕಿದೆ.

ಮಳೆಮಾಪನ ಕೇಂದ್ರಗಳ ಯಡವಟ್ಟು

ಅತಿವೃಷ್ಟಿ ಹಾಗೂ ಎಲೆಚುಕ್ಕಿ, ಕೊಳೆ ರೋಗಗಳಿಂದ ಅಡಿಕೆ ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದರೂ, ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮಳೆಮಾಪನ ಕೇಂದ್ರಗಳ ದೋಷಪೂರಿತ ಅಂಕಿಅಂಶಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅನ್ಯಾಯಕ್ಕೆ ಕಾರಣ ಎಂದು ರೈತರು ದೂರಿದ್ದಾರೆ. ಹಾಗಾಗಿ, ವಿಮಾ ಕಂಪನಿಗಳ ಲೆಕ್ಕಾಚಾರವನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು ಹಾಗೂ ಬಾಕಿ ಇರುವ ನ್ಯಾಯಯುತ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಡಿಕೆ, ಕಾಳುಮೆಣಸು, ಶುಂಠಿ ಬೆಳೆಗಾರ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ, ನ್ಯಾಯಯುತ ಪರಿಹಾರ ಸಿಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಬೆಳ್ಳಕ್ಕ ಎಚ್ಚರಿಕೆ ನೀಡಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾದಲ್ಲಿ ಐತಿಹಾಸಿಕ ತ್ರಿಪಕ್ಷೀಯ ಸಭೆ ಮುಕ್ತಾಯ; ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್- ಕ್ಸಿ ಜಿನ್ ಪಿಂಗ್ ಸಹಿ

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!

ನಮ್ಮ ಹಳೇ ಬಾಸ್​​ ಭಸ್ಮಾಸುರನಂತೆ, NDA ಕಥೆ ಏನಾಗುತ್ತೋ: ಮತ್ತೆ ಎಚ್​​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ