ಎಐ ಸೃಷ್ಟಿತ ಚಿತ್ರ 
ರಾಜ್ಯ

ಸರ್ಕಾರಿ ಅಧಿಕಾರಿಗಳಿಗೆ ಶಾಕ್: ಖಾಸಗಿ ಬಳಕೆಯ ಸರ್ಕಾರಿ ವಾಹನದ ಪ್ರಯಾಣ ದರ ಹೆಚ್ಚಳ; ಪ್ರತಿ ಕಿ.ಮೀ ಗೆ ₹1 ಏರಿಕೆ..!

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆಯಲ್ಲಿ, ಅಧಿಕಾರಿಗಳ ಖಾಸಗಿ ಬಳಕೆಯ ಸರ್ಕಾರಿ ವಾಹನಗಳ ಪ್ರಯಾಣ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಪ್ರತಿ ಕಿಲೋಮೀಟರ್‌ಗೆ ₹1 ರಷ್ಟು ಹೆಚ್ಚಳ ಮಾಡಿದೆ.

ಬೆಂಗಳೂರು: ಸರ್ಕಾರಿ ವಾಹನಗಳನ್ನು ತಮ್ಮ ವೈಯಕ್ತಿಕ (ಖಾಸಗಿ) ಕೆಲಸಗಳಿಗೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಇನ್ನು ಮುಂದೆ ಪ್ರಯಾಣ ತುಸು ದುಬಾರಿಯಾಗಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆಯಲ್ಲಿ, ಅಧಿಕಾರಿಗಳ ಖಾಸಗಿ ಬಳಕೆಯ ಸರ್ಕಾರಿ ವಾಹನಗಳ ಪ್ರಯಾಣ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಪ್ರತಿ ಕಿಲೋಮೀಟರ್‌ಗೆ ₹1 ರಷ್ಟು ಹೆಚ್ಚಳ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿರುವುದನ್ನು ಉಲ್ಲೇಖಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌-ಶಿಷ್ಟಾಚಾರ), ಸರ್ಕಾರಿ ವಾಹನಗಳನ್ನು 500 ಕಿ.ಮೀ.ವರೆಗೆ ವೈಯಕ್ತಿಕ ಬಳಕೆಗೆ ಬಳಸಲು ವಿಧಿಸಲಾಗುತ್ತಿದ್ದ ಮಾಸಿಕ ಶುಲ್ಕವನ್ನು ಈಗಿನ 1,000 ರೂ.ಗಳಿಂದ 1,600 ರೂ.ಗಳಿಗೆ ಹೆಚ್ಚಿಸಿದೆ.

ಇದರಂತೆ 500 ಕಿ.ಮೀ. ಮಿತಿಯನ್ನು ಮೀರಿದ ಪ್ರತಿ ಕಿ.ಮೀ. ಪ್ರಯಾಣಕ್ಕೆ ಈ ಹಿಂದೆ ವಿಧಿಸಲಾಗುತ್ತಿದ್ದ 5 ರೂ. ಬದಲಿಗೆ ಇನ್ನು ಮುಂದೆ 6 ರೂ. ಪಾವತಿಸಬೇಕಾಗಿದೆ.

ಈ ಮೂಲಕ ಪ್ರತಿ ಹೆಚ್ಚುವರಿ ಕಿ.ಮೀ.ಗೆ ಒಂದು ರೂಪಾಯಿ ಹೆಚ್ಚಳ ಮಾಡಿದಂತಾಗಿದೆ. ಐಎಎಸ್, ಕೆಎಎಸ್ ಸೇರಿದಂತೆ ಸಚಿವಾಲಯದ ಇತರ ಅಧಿಕಾರಿಗಳಿಗೆ ನಿಗದಿತ ಶುಲ್ಕ ಪಾವತಿಸಿ ಸರ್ಕಾರಿ ವಾಹನಗಳನ್ನು ವೈಯಕ್ತಿಕ ಕೆಲಸಗಳಿಗೂ ಬಳಸಲು ಅವಕಾಶವಿದೆ.

2016ರಲ್ಲಿ ಕೊನೆಯ ಬಾರಿ ಶುಲ್ಕ ಪರಿಷ್ಕರಣೆ ಮಾಡಲಾಗಿತ್ತು ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ. ಆಗ ಪ್ರತಿ ಕಿ.ಮೀ.ಗೆ ಒಂದು ರೂಪಾಯಿ ಇದ್ದ ಶುಲ್ಕವನ್ನು 5 ರೂ.ಗಳಿಗೆ ಹೆಚ್ಚಿಸಲಾಗಿತ್ತು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.

ಪೆಟ್ರೋಲ್, ಡೀಸೆಲ್ ಮತ್ತು ಚಾಲಕರ ವೇತನದ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಅಧಿಕಾರಿಗಳು ಮಾಸಿಕವಾಗಿ ಪಾವತಿಸಬೇಕಿರುವುದು ಅಲ್ಪ ಮೊತ್ತ ಮಾತ್ರ ಎಂದು ಮೂಲಗಳು ತಿಳಿಸಿವೆ.

ಆದೇಶದ ಪ್ರಕಾರ, 2016ರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇ.60ಕ್ಕೂ ಹೆಚ್ಚು ಏರಿಕೆಯಾಗಿವೆ. ಹೀಗಾಗಿ ಎಲ್ಲ ಮಾದರಿಯ ಸರ್ಕಾರಿ ಕಾರುಗಳ ಖಾಸಗಿ ಬಳಕೆಗೆ 500 ಕಿ.ಮೀ.ವರೆಗೆ ಮಾಸಿಕ 1,600 ರೂ. ಹಾಗೂ ಆ ಮಿತಿಯನ್ನು ಮೀರಿದ ಪ್ರತಿ ಕಿ.ಮೀ.ಗೆ 6 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪರಿಷ್ಕೃತ ದರಗಳು ಈ ಕುರಿತು ಜ್ಞಾಪನಾ ಪತ್ರ ಹೊರಡಿಸಿದ ದಿನದಿಂದಲೇ ಜಾರಿಗೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಹಶೀಲ್ದಾರರು, ಸಹಾಯಕ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಂಟಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಬಳಸುವ ಸರ್ಕಾರಿ ವಾಹನಗಳಿಗೂ ಈ ದರ ಅನ್ವಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

'ಅಕ್ವಾನ್' ಚಂಡಮಾರುತ: ಒಡಿಶಾದಲ್ಲಿ 1.2 ಲಕ್ಷ ಜನರನ್ನು ಸ್ಥಳಾಂತರ, 69 ರೈಲು ಸೇವೆ ರದ್ದು

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!

ಉಗ್ರರಿಗೆ ಕುಮ್ಮಕ್ಕು ನಿಲ್ಲಿಸದೆ ಹೊರತು ನಿಮ್ಮ ಜೊತೆ ಸಂಧಾನ ಅಸಾಧ್ಯ: ಪಾಕ್‌ ಜೊತೆಗಿನ ಮಾತುಕತೆಗೆ ಲಕ್ಷ್ಮಣರೇಖೆ ಎಳೆದ ರಾಹುಲ್ ಗಾಂಧಿ

EPFO ನಿಯಮಗಳಲ್ಲಿ 3 ಮಹತ್ವದ ಬದಲಾವಣೆಗಳಿಗೆ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು...