11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ Online Desk
ರಾಜ್ಯ

ಕಾವೇರಿ ಕದನದಲ್ಲಿ ಕರ್ನಾಟಕಕ್ಕೆ ಬಿಗ್ ರಿಲೀಫ್! 11 ಟಿಎಂಸಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿ ಸುಪ್ರೀಂನಲ್ಲಿ ವಜಾ

ಕರ್ನಾಟಕದಿಂದ ಹೆಚ್ಚುವರಿಯಾಗಿ ಸುಮಾರು 11 ಟಿಎಂಸಿ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಹೆಚ್ಚುವರಿ ನೀರು ಬಿಡುಗಡೆ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಮೂಲಕ ಕರ್ನಾಟಕಕ್ಕೆ ದೊಡ್ಡ ಕಾನೂನು ಜಯ ಸಿಕ್ಕಿದೆ. ಹೌದು, ಕರ್ನಾಟಕದಿಂದ ಹೆಚ್ಚುವರಿಯಾಗಿ 11 ಟಿಎಂಸಿ ನೀರು ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಮೂರನೇ ಬಾರಿಗೆ ಅರ್ಜಿ ಸಲ್ಲಿಸಿದರೂ ಆ ಅರ್ಜಿಯನ್ನೂ ವಜಾಗೊಳಿಸಲಾಗುವುದು ಸ್ಪಷ್ಟಪಡಿಸಿದರು. ಆ ಕುರಿತ ವರದಿ ಇಲ್ಲಿದೆ:

ತಮಿಳುನಾಡಿನ ವಾದವೇನಾಗಿತ್ತು?

ಅಂತರರಾಜ್ಯ ಗಡಿ ಮಾಪನ ಕೇಂದ್ರವಾದ ಬಿಳಿಗುಂಡ್ಲುವಿನಲ್ಲಿ ಅಕ್ಟೋಬರ್ 6 ರವರೆಗೆ ತಮಗೆ ಬರಬೇಕಿದ್ದ ನೀರಿನಲ್ಲಿ 11.719 ಟಿಎಂಸಿ ಕೊರತೆಯಾಗಿದೆ ಎಂದು ತಮಿಳುನಾಡು ದೂರಿತ್ತು. ಇದರೊಂದಿಗೆ, ಕರ್ನಾಟಕದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಸುಮಾರು 49 ಟಿಎಂಸಿ ನೀರಿನ ಸಂಗ್ರಹವಿದ್ದರೂ (ಆಗಸ್ಟ್ ವೇಳೆಗೆ 77.5 ಟಿಎಂಸಿ ಇತ್ತು), ಕರ್ನಾಟಕವು ಉದ್ದೇಶಪೂರ್ವಕವಾಗಿ ನೀರನ್ನು ತಡೆಹಿಡಿದಿದೆ, ಇದರಿಂದ ತಮ್ಮ ರಾಜ್ಯದ ರೈತರು ಮತ್ತು ಬೆಳೆಗಳಿಗೆ ತೀವ್ರ ನಷ್ಟವಾಗುತ್ತಿದೆ ಎಂದು ಆರೋಪಿಸಿತ್ತು. ಈ ಮೂಲಕ ಕಾವೇರಿ ನ್ಯಾಯಮಂಡಳಿಯ ತೀರ್ಪಿನಂತೆ ಮಳೆ ಕೊರತೆಯ ವರ್ಷದಲ್ಲೂ ತಮಗೆ ಶೇ. 55.29 ರಷ್ಟು ಪ್ರಮಾಣಾನುಗುಣ ಪಾಲು ಸಿಗಬೇಕು ಹಾಗೂ ಹಿಂದಿನ ಬಾಕಿಯನ್ನು ಕರ್ನಾಟಕ ಸರಿದೂಗಿಸಬೇಕು ಎಂದು ಒತ್ತಾಯಿಸಿತ್ತು.

ಹಾಗಾದ್ರೆ, ಕರ್ನಾಟಕದ ಪ್ರತಿವಾದವೇನಾಗಿತ್ತು?

ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಜನರ ಕುಡಿಯುವ ನೀರಿಗೇ ಅಭಾವ ಎದುರಾಗಿದೆ ಎಂದು ಕರ್ನಾಟಕ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಜೊತೆಗೆ, ಬಿಳಿಗುಂಡ್ಲುವಿನವರೆಗೆ ಲಭ್ಯವಿರುವ 483 ಟಿಎಂಸಿ ನೀರಿನಲ್ಲಿ ತಮಿಳುನಾಡಿಗೆ 404.25 ಟಿಎಂಸಿ ಹಂಚಿಕೆಯಾಗಿದ್ದರೆ, ಕರ್ನಾಟಕದ ಬರಪೀಡಿತ ಪ್ರದೇಶಗಳನ್ನು ಪರಿಗಣಿಸದೆ ಕೇವಲ 284.75 ಟಿಎಂಸಿ ಮಾತ್ರ ನೀಡಲಾಗಿದೆ ಎಂದು ಕರ್ನಾಟಕ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿತ್ತು. ಇದರೊಂದಿಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ವಾಸ್ತವಿಕ ಸ್ಥಿತಿಗತಿ ಆಧರಿಸಿ ಆದೇಶ ನೀಡುತ್ತಿವೆ. ಪ್ರಾಧಿಕಾರ ಸೂಚಿಸಿದಂತೆ ಈಗಾಗಲೇ ನೀರು ಹರಿಸಲಾಗಿದೆ ಎಂದು ಕರ್ನಾಟಕ ವಾದಿಸಿತ್ತು.

ಮುಂದುವರೆದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಬಾಕಿ ಇರುವ ನೀರಿನ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳನ್ನು ತಿರಸ್ಕರಿಸಿದೆ. ಏತನ್ಮಧ್ಯೆ, ತೀರ್ಪು ಪ್ರಕಟಿಸುವ ಮುನ್ನ ತಮಿಳುನಾಡು ಪರ ವಕೀಲರು ಇಂದು (ನವೆಂಬರ್ 20) ಮತ್ತೊಂದು ಹೊಸ ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಪೀಠದ ಗಮನಕ್ಕೆ ತಂದರು. ಆದರೆ, ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು "ಆ ಅರ್ಜಿಯನ್ನೂ ವಜಾಗೊಳಿಸಲಾಗುವುದು" ಎಂದು ಮೌಖಿಕವಾಗಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಅಕ್ವಾನ್ ಚಂಡಮಾರುತ': ಒಡಿಶಾದ ಗೋಪಾಲಪುರ ಸಮೀಪ ಪ್ರವೇಶ ಪ್ರಕ್ರಿಯೆ ಆರಂಭ; 3 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ

35 ವರ್ಷದ ಬಳಿಕ ' ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

21,900 ಕೋಟಿ ರೂ.ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ, ಸಾಲಗಾರರಿಗೆ ಬಿಗ್ ರಿಲೀಫ್..!

ಉಗ್ರರಿಗೆ ಕುಮ್ಮಕ್ಕು ನಿಲ್ಲಿಸದೆ ಹೊರತು ನಿಮ್ಮ ಜೊತೆ ಸಂಧಾನ ಅಸಾಧ್ಯ: ಪಾಕ್‌ ಜೊತೆಗಿನ ಮಾತುಕತೆಗೆ ಲಕ್ಷ್ಮಣರೇಖೆ ಎಳೆದ ರಾಹುಲ್ ಗಾಂಧಿ

EPFO ನಿಯಮಗಳಲ್ಲಿ 3 ಮಹತ್ವದ ಬದಲಾವಣೆಗಳಿಗೆ ಅನುಮೋದನೆ: ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು...