ಸಂಗ್ರಹ ಚಿತ್ರ Online Desk
ರಾಜ್ಯ

Cyber ದಾಳಿಗೆ ಕಡಿವಾಣ ಹಾಕಲು KPTCL ಮಹತ್ವದ ಹೆಜ್ಜೆ; ವಿದ್ಯುತ್ ಜಾಲಕ್ಕೆ 'ಸೈಬರ್ ರಕ್ಷಣೆ'; ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ ಜಾರಿ..!

ಆಧುನಿಕ ವಿದ್ಯುತ್ ಉಪಕೇಂದ್ರಗಳು ಮೇಲ್ವಿಚಾರಣೆ, ನಿಯಂತ್ರಣ ಮತ್ತು ಕಾರ್ಯಾಚರಣೆಗಾಗಿ ಡಿಜಿಟಲ್ ವ್ಯವಸ್ಥೆಗಳನ್ನು ಹೆಚ್ಚಾಗಿ ಅವಲಂಬಿಸಿವೆ. ಹೀಗಾಗಿ ಸೈಬರ್ ದಾಳಿಗಳು ಇನ್ನು ಮುಂದೆ ಕಂಪ್ಯೂಟರ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಜಾಲಗಳಿಗೆ ಮಾತ್ರ ಸೀಮಿತವಾಗಿಲ್ಲ.

ಬೆಂಗಳೂರು: ರಾಜ್ಯದ ವಿದ್ಯುತ್ ಪ್ರಸರಣ ಜಾಲ ಮತ್ತು ಗ್ರಿಡ್ ವ್ಯವಸ್ಥೆಯನ್ನು ಸೈಬರ್ ದಾಳಿಗಳಿಂದ ರಕ್ಷಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮಹತ್ವದ ಹೆಜ್ಜೆ ಇಟ್ಟಿದೆ.

ದೇಶದಲ್ಲೇ ಮೊದಲ ಬಾರಿಗೆ ಕಾರ್ಯಾಚರಣಾ ತಂತ್ರಜ್ಞಾನ (OT) ಆಧಾರಿತ ಸಮಗ್ರ ಸೈಬರ್ ಭದ್ರತಾ ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.

ಸಂಯೋಜಿತ ಸುರಕ್ಷಿತ ಮೂಲಸೌಕರ್ಯ ಪರಿಹಾರ ಯೋಜನೆಯಡಿ ಕೆಪಿಟಿಸಿಎಲ್‌ನ 1,474 ವಿದ್ಯುತ್ ಉಪಕೇಂದ್ರಗಳು ಮತ್ತು ಆರು ಪ್ರಾದೇಶಿಕ ಲೋಡ್ ವಿತರಣಾ ಕೇಂದ್ರಗಳನ್ನು ಸಮಗ್ರ ಸೈಬರ್ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧುನಿಕ ವಿದ್ಯುತ್ ಉಪಕೇಂದ್ರಗಳು ಮೇಲ್ವಿಚಾರಣೆ, ನಿಯಂತ್ರಣ ಮತ್ತು ಕಾರ್ಯಾಚರಣೆಗಾಗಿ ಡಿಜಿಟಲ್ ವ್ಯವಸ್ಥೆಗಳನ್ನು ಹೆಚ್ಚಾಗಿ ಅವಲಂಬಿಸಿವೆ. ಹೀಗಾಗಿ ಸೈಬರ್ ದಾಳಿಗಳು ಇನ್ನು ಮುಂದೆ ಕಂಪ್ಯೂಟರ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಜಾಲಗಳಿಗೆ ಮಾತ್ರ ಸೀಮಿತವಾಗಿಲ್ಲ. ಇವು ಪ್ರಮುಖ ವಿದ್ಯುತ್ ಗ್ರಿಡ್‌ಗಳ ಕಾರ್ಯಾಚರಣೆಯನ್ನೂ ಅಸ್ತವ್ಯಸ್ತಗೊಳಿಸಬಲ್ಲವು. ವಿದ್ಯುತ್ ಪ್ರಸರಣ ಮೂಲಸೌಕರ್ಯವನ್ನು ಇಂತಹ ಬೆದರಿಕೆಗಳಿಂದ ರಕ್ಷಿಸುವುದೇ ಕೆಪಿಟಿಸಿಎಲ್‌ನ ಹೊಸ ಒಟಿ ಸೈಬರ್ ಭದ್ರತಾ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಡಿಜಿಟಲ್ ನಿಯಂತ್ರಣ ವ್ಯವಸ್ಥೆಗಳು ಆಧುನಿಕ ವಿದ್ಯುತ್ ಗ್ರಿಡ್‌ಗಳ ಕಾರ್ಯಾಚರಣೆಯ ಅವಿಭಾಜ್ಯ ಅಂಗವಾಗಿವೆ. ದಿನದಿಂದ ದಿನಕ್ಕೆ ಸಂಪರ್ಕಿತವಾಗುತ್ತಿರುವ ಈ ವ್ಯವಸ್ಥೆಯಲ್ಲಿ ಸೈಬರ್ ಭದ್ರತೆಯನ್ನು ವಿದ್ಯುತ್ ಮೂಲಸೌಕರ್ಯದ ಅತ್ಯಗತ್ಯ ಭಾಗವೆಂದೇ ಪರಿಗಣಿಸಬೇಕು.

ದೇಶದಲ್ಲೇ ಮೊದಲ ಬಾರಿಗೆ ಇಂತಹ ಉಪಕ್ರಮ ಕೈಗೊಳ್ಳಲಾಗುತ್ತಿದ್ದು, ಇದು ವಿದ್ಯುತ್ ಪ್ರಸರಣ ಜಾಲದ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಈ ಯೋಜನೆಯಡಿ ಒಟಿ ಫೈರ್‌ವಾಲ್‌ಗಳು, ಜಾಲ ವಿಭಜನೆ ವ್ಯವಸ್ಥೆ, ಶೂನ್ಯ ನಂಬಿಕೆ ಆಧಾರಿತ ಪ್ರವೇಶ ನಿಯಂತ್ರಣ ಮತ್ತು ಅತ್ಯಾಧುನಿಕ ಬೆದರಿಕೆ ತಡೆ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಯುಎಸ್‌ಬಿ ಡ್ರೈವ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ ಇತರ ತೆಗೆಯಬಹುದಾದ ಸಾಧನಗಳು ಸೇರಿದಂತೆ ಎಲ್ಲ ಉಪಕರಣಗಳ ಭದ್ರತಾ ತಪಾಸಣೆಯನ್ನೂ ಕೈಗೊಳ್ಳಲಾಗುತ್ತದೆ.

ಕೆಪಿಟಿಸಿಎಲ್‌ನ ದತ್ತಾಂಶ ಕೇಂದ್ರ ಮತ್ತು ವಿಪತ್ತು ನಿರ್ವಹಣಾ ಕೇಂದ್ರಗಳಿಂದ ಇಡೀ ವ್ಯವಸ್ಥೆಯ ಕೇಂದ್ರೀಕೃತ ಮೇಲ್ವಿಚಾರಣೆ ನಡೆಸಲಾಗುತ್ತದೆ.

ನಮ್ಮ ವಿದ್ಯುತ್ ಪ್ರಸರಣ ಜಾಲವನ್ನು ನೇರವಾಗಿ ನಿಯಂತ್ರಿಸುವ ಕಾರ್ಯಾಚರಣಾ ತಂತ್ರಜ್ಞಾನ ವ್ಯವಸ್ಥೆಗೆ ಇದು ಬಹುಹಂತದ ರಕ್ಷಣಾ ಕವಚವಾಗಿದೆ. 1,474 ಉಪಕೇಂದ್ರಗಳು ಮತ್ತು ಆರು ಪ್ರಾದೇಶಿಕ ಲೋಡ್ ವಿತರಣಾ ಕೇಂದ್ರಗಳನ್ನು ಏಕೀಕೃತ ಒಟಿ ವ್ಯವಸ್ಥೆಯಡಿ ತರುವುದರಿಂದ ಭಾರತದ ವಿದ್ಯುತ್ ಪ್ರಸರಣ ವಲಯದಲ್ಲಿ ಸೈಬರ್ ದಾಳಿಗಳನ್ನು ಎದುರಿಸುವ ಸಾಮರ್ಥ್ಯಕ್ಕೆ ಹೊಸ ಮಾನದಂಡ ಸ್ಥಾಪನೆಯಾಗಲಿದೆ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವು ಹಿಡಿಯುವವರ ನಾಡು' ಎಂದು ಏಕೆ ಕರೆಯಲಾಗುತ್ತಿತ್ತು?

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

20 ವರ್ಷಗಳ ಹಿಂದೆಯೇ 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಬೇಕಿತ್ತು: ತೆರೆಕಾಣದ ಬಯೋಪಿಕ್, ಯಾರೀ ಸ್ನಿಗ್ಧ ಸುಂದರಿ?

ಶಾಸಕರ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ತಮಿಳುನಾಡು CM: ವಿ.ಎಸ್ ಬಾಬು ಶವಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆದ ವಿಜಯ್!

ನಮ್ಮದೇ ಪಕ್ಷದ ಕೆಲವರಿಗೆ ಹುಚ್ಚು ನಾಯಿ ಕಚ್ಚಿದೆ: ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸ್ತಾರೆ; ಸಿಎಂ ರೇವಂತ್ ರೆಡ್ಡಿ ಆಕ್ರೋಶ