ಯು ಟಿ ಖಾದರ್  
ರಾಜ್ಯ

ಆಶಾ ಕಾರ್ಯಕರ್ತೆಯರ ಗೌರವ ಧನ ಕೇಂದ್ರ ಸರ್ಕಾರ ಹೆಚ್ಚಳ ಮಾಡಬೇಕು: ಯು ಟಿ ಖಾದರ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಆಶಾ ಕಾರ್ಯಕರ್ತೆಯರು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕೇಂದ್ರ ಸರ್ಕಾರ ನೇಮಕ ಮಾಡಿರುವುದು ಎಂದರು.

ಬೆಂಗಳೂರು: ಆಶಾ ಕಾರ್ಯಕರ್ತೆಯರ ಗೌರವ ಧನ ಕೇಂದ್ರ ಸರ್ಕಾರ ಹೆಚ್ಚಳ ಮಾಡಬೇಕು ಎಂದು ಆರೋಗ್ಯ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಆಶಾ ಕಾರ್ಯಕರ್ತೆಯರು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅಡಿಯಲ್ಲಿ ಕೇಂದ್ರ ಸರ್ಕಾರ ನೇಮಕ ಮಾಡಿರುವುದು.

2014ರಲ್ಲಿ ನಾನು ಸಚಿವ ಆಗಿದ್ದಾಗ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡುತ್ತದೆಯೋ ಅಷ್ಟು ರಾಜ್ಯ ಮಾಡಬೇಕು ಎಂದು ಕಾನೂನು ತಂದಿದ್ದೆವು. ಕೇಂದ್ರ ಎಷ್ಟು ಜಾಸ್ತಿ ಮಾಡುತ್ತದೋ ನಾವು ಅಷ್ಟೇ ಮಾಡಬೇಕು. ಕಾನೂನು ಮಾಡಿದ್ರೂ ಕೇಂದ್ರ ಸರ್ಕಾರ ಜಾಸ್ತಿ ಅನುದಾನ ಕೊಡಲಿಲ್ಲ. ಆದರೂ ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ಕೊಡುತ್ತಿದೆ. ಕೇಂದ್ರ ಸರ್ಕಾರ 2 ಸಾವಿರ ರೂ. ಕೊಡುತ್ತಿದೆ. ಇನ್ಸೆಂಟೀವ್ 1 ಸಾವಿರ ರೂ. ಸಿಕ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆರೋಪಿಸಿದರು.

ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಬೇಕು. ನಾನು ಹಿಂದೆ ಸಚಿವ ಆಗಿದ್ದಾಗ ಕೇಂದ್ರದ ಸಚಿವರಿಗೆ ಜಾಸ್ತಿ ಮಾಡಲು ಒತ್ತಾಯ ಮಾಡಿದ್ದೆ. ಪ್ರೊತ್ಸಾಹ ಧನ ಜಾಸ್ತಿ ಕೊಡಬೇಕು ಅಂತ ಒತ್ತಾಯ ಮಾಡಿದ್ವಿ. ಅದಕ್ಕೆ ‌ಕೇಂದ್ರ ಒಪ್ಪಿದೆ. ಕೇಂದ್ರದ ಜೊತೆ ನಾವು ಚರ್ಚೆ ಮಾಡ್ತೀವಿ. ರಾಜ್ಯ ಸರ್ಕಾರ, ಸಿಎಂ ಆಶಾ ಕಾರ್ಯಕರ್ತೆಯರ ಜೊತೆ ಇದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತಾಡ್ತೀವಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅವರಿಗೆ ಸಹಕಾರ ಮಾಡುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

1962ರ ಅವಮಾನಕ್ಕೆ ಕ್ಷಮೆ ಕೇಳುತ್ತಾ? 'ಬಡ ರಾಷ್ಟ್ರ'ವಾಗಿ ಕಾಂಗ್ರೆಸ್ ಏಕೆ ಇರಿಸಿತ್ತು; ಭಾರತವನ್ನು 'ಹಾವು ಹಿಡಿಯುವವರ ನಾಡು' ಎಂದು ಏಕೆ ಕರೆಯಲಾಗುತ್ತಿತ್ತು?

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

20 ವರ್ಷಗಳ ಹಿಂದೆಯೇ 'ಜಗತ್ತಿನ ಅತ್ಯಂತ ಸುಂದರ ಮಹಿಳೆ' ಸೋನಿಯಾ ಗಾಂಧಿ ಪಾತ್ರ ನಿರ್ವಹಿಸಬೇಕಿತ್ತು: ತೆರೆಕಾಣದ ಬಯೋಪಿಕ್, ಯಾರೀ ಸ್ನಿಗ್ಧ ಸುಂದರಿ?

ಶಾಸಕರ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ತಮಿಳುನಾಡು CM: ವಿ.ಎಸ್ ಬಾಬು ಶವಯಾತ್ರೆಯಲ್ಲಿ ಬರಿಗಾಲಿನಲ್ಲಿ ನಡೆದ ವಿಜಯ್!

ನಮ್ಮದೇ ಪಕ್ಷದ ಕೆಲವರಿಗೆ ಹುಚ್ಚು ನಾಯಿ ಕಚ್ಚಿದೆ: ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸ್ತಾರೆ; ಸಿಎಂ ರೇವಂತ್ ರೆಡ್ಡಿ ಆಕ್ರೋಶ