ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ 
ರಾಜ್ಯ

ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ!

ಕಾಡಾನೆಗಳ ಸ್ಥಳಾಂತರ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿದ್ದು ನನಗೆ ಸರ್ಕಾರ ಮುಖ್ಯ ಅಲ್ಲ, ಜನ ಮುಖ್ಯ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು: ಕಾಡಾನೆಗಳ ಸ್ಥಳಾಂತರ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿದ್ದು ನನಗೆ ಸರ್ಕಾರ ಮುಖ್ಯ ಅಲ್ಲ, ಜನ ಮುಖ್ಯ ಎಂದು ಹೇಳಿದ್ದಾರೆ.

ಹಾಸನದಲ್ಲಿ ಕಾಡಾನೆಗಳ ದಾಳಿಗಳ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಆನೆಗಳ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿತ್ತು. ಹಾಸನದಿಂದ ಭದ್ರಾಕ್ಕೆ ಸ್ಥಳಾಂತರ ಮಾಡುವುದಕ್ಕೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸನದಲ್ಲಿ ಇಬ್ಬರ ಸಾವನ್ನಪ್ಪಿದ ಬಳಿಕ ಹಾಸನ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು, ಕಾಡಾನೆಗಳನ್ನು ಭದ್ರಾಕ್ಕೆ ಓಡಿಸಲು ಕಾರ್ಯಚರಣೆ ನಡೆಸುವುದಾಗಿ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ನವೆಂಬರ್ 25ಕ್ಕೆ ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು.

ಆದರೆ ಸಭೆಗೂ ಮುನ್ನವೇ ಯಾವುದೇ ಮಾಹಿತಿ ನೀಡದೆ ಕಾಡಾನೆ ಓಡಿಸಿದ್ದಾರೆ. ACCF ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಸಮ್ಮತಿ ಇಲ್ಲದೆ ಕಾರ್ಯಚರಣೆ ಮಾಡಿದ್ದಾರೆ ಎಂದರದು. ರಾಜೀನಾಮೆ ಪತ್ರ ಸಿದ್ದವಿದೆ. ನಾನು ರಾಜೀನಾಮೆ ನೀಡಲು ಸಿದ್ದ. ಈ ಕಾರ್ಯಚರಣೆ ನಿಲ್ಲಿಸಬೇಕು, ಇಲ್ಲವೇ ರಾಜೀನಾಮೆ ನೀಡುತ್ತೇನೆ. ಚಿಕ್ಕಮಗಳೂರು ಜನರ ಜೀವಕ್ಕೆ ಬೆಲೆ ಇಲ್ವಾ? ನನಗೆ ಜನ ಮುಖ್ಯ, ಸರ್ಕಾರವಲ್ಲ. ಭದ್ರಗೆ ಆನೆಗಳನ್ನು ಓಡಿಸಿದರೇ ನಾಳೆ ಬೆಳಗ್ಗೆ ರಾಜೀನಾಮೆ ನೀಡುವುದಾಗಿ ಪತ್ರವನ್ನು ಪ್ರದರ್ಶಿಸಿ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್‌ಕೋಟ್ ಮುಂದು; ಮಾತುಕತೆಗೆ ಆಹ್ವಾನ!

ಬಸವಣ್ಣನವರು ಇಲ್ಲದೇ ಇದ್ದಿದ್ದರೆ ಕನ್ನಡ ಭಾಷೆ ಸಂಸ್ಕೃತಿ ಉಳೀತಿತ್ತಾ?: ರವಿ ಹಂಜ್‌ ಕಲಿಸುವ ಪಾಠ ಅವಿವೇಕಿಗಳಿಗೆ ಎಚ್ಚರಿಕೆಯಾಗಲಿ- ಪ್ರತಾಪ್ ಸಿಂಹ ಕಿಡಿ

ಶಬರಿಮಲೆ ಯಾತ್ರಾರ್ಥಿಗಳ ಗಮನಕ್ಕೆ: ವಿಮಾನದಲ್ಲಿ ಕ್ಯಾಬಿನ್ ಬ್ಯಾಗೇಜ್ ನಲ್ಲಿ ಇರುಮುಡಿ ಸಾಗಿಸಲು ಕೇಂದ್ರದ ಅನುಮತಿ

ಕತ್ತಲಲ್ಲಿ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಬರುವ ರಾಜಕಾರಣಿ ನಾನಲ್ಲ: ವಿಜಯೇಂದ್ರಗೆ ಜನಾರ್ದನ ರೆಡ್ಡಿ ಪರೋಕ್ಷ ಟಾಂಗ್!

ವಾಯು ಮಾಲಿನ್ಯದಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಚೆನ್ನೈ: ದೇಶದಲ್ಲೇ ಅತ್ಯಂತ ಕಲುಷಿತ ನಗರವಾದ ಗುಮ್ಮಿಡಿಪೂಂಡಿ; ವಾಯು ಗುಣಮಟ್ಟ ಸೂಚ್ಯಂಕ 342ಕ್ಕೆ ಏರಿಕೆ..!