ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಅರಣ್ಯ ಖಾತೆಯನ್ನೇ ಬಿಟ್ಟುಕೊಡುತ್ತೇನೆ; ಸ್ವಪಕ್ಷದ ಶಾಸಕರ ರಾಜೀನಾಮೆ ರಾಜಕೀಯಕ್ಕೆ ರಾಮಲಿಂಗಾರೆಡ್ಡಿ ಕೆಂಡಾಮಂಡಲ!

ಕಾಡಾನೆಗಳ ಸ್ಥಳಾಂತರಕ್ಕೆ ಆಡಳಿತಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ ಹಾಗೂ ತಮ್ಮಯ್ಯ ಅವರು ರಾಜೀನಾಮೆಗೆ ಮುಂದಾಗಿದ್ದರು.

ರಾಮಲಿಂಗಾರೆಡ್ಡಿ
Lingaraj Badiger
Updated On : 25 Nov 2026, 5:02 pm

ಬೆಂಗಳೂರು: ಕಾಡಾನೆಗಳನ್ನು ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ 'ಆಪರೇಷನ್ ಗಜ' ಕಾರ್ಯಾಚರಣೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕಾಡಾನೆಗಳ ಸ್ಥಳಾಂತರಕ್ಕೆ ಆಡಳಿತಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ ಹಾಗೂ ತಮ್ಮಯ್ಯ ಅವರು ರಾಜೀನಾಮೆಗೆ ಮುಂದಾಗಿದ್ದರು.

ಸ್ವಪಕ್ಷದ ಶಾಸಕರ ನಡೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕೆಂಡಾಮಂಡಲರಾಗಿದ್ದು, ಅರಣ್ಯದಲ್ಲೇ ಹುಟ್ಟಿ ಬೆಳೆದವರು ಯಾರಾದ್ರೂ ಇದ್ರೆ ಅವರಿಗೆ ಅರಣ್ಯ ಖಾತೆ ನೀಡಿ. ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Advertisement

Also Read

ಆನೆ ಸ್ಥಳಾಂತರಕ್ಕೆ ಬ್ರೇಕ್ ? ಉಲ್ಟಾ ಹೊಡೆದ ಶಾಸಕರು; ರಾಜೀನಾಮೆ ಮುಖ್ಯನಾ, ಸಮಸ್ಯೆಗೆ ಪರಿಹಾರ ಮುಖ್ಯನಾ?- ನಯನಾ ಮೋಟಮ್ಮ

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಏನೂ ಗೊತ್ತಿಲ್ಲ ಎಂದ ಎಚ್ ಡಿ ತಮ್ಮಯ್ಯ ಹೇಳಿದ್ದಾರೆ. ನಮ್ಮದು ಆನೇಕಲ್, ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶ ಇದೆ. ಅಲ್ಲಿ ನಮ್ಮ ತೋಟ ಕೂಡ ಇದೆ, ಅಲ್ಲಿಗೆ ಕಾಡಾನೆಗಳು ಕೂಡ ಬರುತ್ತವೆ. ಅರಣ್ಯದಲ್ಲಿ ಹುಟ್ಟಿ, ಅರಣ್ಯದಲ್ಲಿ ಬೆಳೆದವರೇ ಮಂತ್ರಿಯಾದರೆ ಅಭ್ಯಂತರವಿಲ್ಲ. ನಾನು ಅರಣ್ಯ ಇಲಾಖೆ ಬಿಟ್ಟುಕೊಡ್ತೀನಿ. ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ. ಅರಣ್ಯ ಮಂತ್ರಿಯಾಗಿ ಜನರಿಗೆ ತೊಂದರೆ ಆಗದಂತೆ ಗಮನ ಹರಿಸಿದ್ದೇನೆ. ಇವಾಗ ಆಗುತ್ತಿರುವ ಸಾವು ನೋವು ಕಡಿಮೆ ಆಗಬೇಕೆಂದು ನಮ್ಮ ಗುರಿ ಎಂದು ಸ್ವಪಕ್ಷದ ಶಾಸಕ ತಮ್ಮಯ್ಯಗೆ ತಿರುಗೇಟು ನೀಡಿದರು.

ಇದು ಕಾಡಿನಲ್ಲಿರೋ ಆನೆಗಳಿಗೆ ಸಂಬಂಧಿಸಿದ ವಿಚಾರ, 1978ರಲ್ಲಿ 1950 ಆನೆಗಳು ಮಾತ್ರ ಇದ್ವು. ಇವಾಗ 6500 ಆನೆಗಳು ರಾಜ್ಯದಲ್ಲಿವೆ. ಹುಲಿಗಳ ಸಂಖ್ಯೆ 653 ಇವೆ. ಚಿರತೆ, ಕರಡಿಗಳಿಂದ ದಾಳಿ ನಡೆಯುತ್ತಿದ್ದು, ಆನೆಗಳಿಂದ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಬೇಲೂರಲ್ಲಿ ಎರಡು ಸಾವು ಸಂಭವಿಸಿದ್ದು, ಇಲ್ಲಿ ಕಾಡು ಇರೋದು 13000 ಎಕರೆ ಅಷ್ಟೇ, ಅದು ಒಂದು ಕಡೆಗೇ ಇಲ್ಲ, 9 ಕಡೆ ಇದೆ. ಅದಕ್ಕಾಗಿ ಆನೆಗಳು ಅಲ್ಲಿ ಇಲ್ಲಿ ಓಡಾಡ್ತಿದ್ವು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement