'ಡಿ ಕೆ ಶಿವಕುಮಾರ್ ಒಬ್ಬ ಹೋರಾಟಗಾರ, ನೋಡ್ತಿರಿ...2028ಕ್ಕೆ ಮತ್ತೆ ಬರುತ್ತಾರೆ': ಜಪಾನ್ ಅನಿವಾಸಿ ಕನ್ನಡಿಗರ ಅಭಿಮಾನದ ಮಾತು; Video
ಮೊನ್ನೆ ನವೆಂಬರ್ 23 ರಿಂದ ನಿನ್ನೆ 25ರವರೆಗೆ ನಡೆದ ಜಪಾನ್ ಪ್ರವಾಸದಲ್ಲಿ, ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೊ ಕನ್ನಡ ಬಳಗದ ಸದಸ್ಯರು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು.
ಜಪಾನ್ ಪ್ರವಾಸದ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಟೋಕಿಯೊದ ಅನಿವಾಸಿ ಕನ್ನಡಿಗರು ಹಾಗೂ ಅಭಿಮಾನಿಗಳಿಂದ ಆತ್ಮೀಯ ಸ್ವಾಗತ ಮತ್ತು ಪ್ರೀತಿಯ ಗೌರವ ದೊರೆಯಿತು.
ಮೊನ್ನೆ ನವೆಂಬರ್ 23 ರಿಂದ ನಿನ್ನೆ 25ರವರೆಗೆ ನಡೆದ ಜಪಾನ್ ಪ್ರವಾಸದಲ್ಲಿ, ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೊ ಕನ್ನಡ ಬಳಗದ ಸದಸ್ಯರು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು.
ಮೊನ್ನೆ 23ರಂದು ಟೋಕಿಯೊಗೆ ಬಂದಿಳಿದ ಡಿಕೆ ಶಿವಕುಮಾರ್ ಅವರನ್ನು ಟೋಕಿಯೊ ಕನ್ನಡ ಸಂಘದ ಸದಸ್ಯರು ಆತ್ಮೀಯವಾಗಿ ಬರಮಾಡಿಕೊಂಡಿದ್ದರು.
ಜಪಾನ್ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಉಪಹಾರ ಸವಿಯುತ್ತಾ, ಅವರ ಜೀವನಶೈಲಿ, ಉದ್ಯೋಗ ಹಾಗೂ ಅಲ್ಲಿನ ಕನ್ನಡ ಸಂಘಟನೆಗಳ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಡಿ ಕೆ ಶಿವಕುಮಾರ್ ಆತ್ಮೀಯವಾಗಿ ಮಾತುಕತೆ ನಡೆಸಿದರು.
ವಿದೇಶದಲ್ಲಿದ್ದರೂ ತಾಯ್ನಾಡಿನ ನಂಟು ಮತ್ತು ಕನ್ನಡದ ಕಂಪನ್ನು ಉಳಿಸಿಕೊಂಡಿರುವ ಕನ್ನಡಿಗರು, ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ, ಉಡುಗೊರೆಗಳನ್ನು ನೀಡಿ ಗೌರವಿಸಿದರು.
ಕನ್ನಡಿಗರು ತಮ್ಮ ನೆಚ್ಚಿನ ನಾಯಕನೊಂದಿಗೆ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಸಂಭ್ರಮಿಸಿದರು. ತಾಯ್ನಾಡಿನ ಅಭಿವೃದ್ಧಿ ಮತ್ತು ಜಪಾನ್-ಕರ್ನಾಟಕ ಬಾಂಧವ್ಯದ ಕುರಿತು ಸಂತಸ ಹಂಚಿಕೊಂಡರು.
2028ಕ್ಕೆ ಮತ್ತೆ ಡಿ ಕೆ ಶಿವಕುಮಾರ್ ಸಿಎಂ
ಕೃಷಿ ಕುಟುಂಬದಲ್ಲಿ ಜನಿಸಿ ನಂತರ ವ್ಯಾಪಾರವನ್ನು ವೃತ್ತಿಯಾಗಿ ತೆಗೆದುಕೊಂಡು ನಂತರ ಹವ್ಯಾಸವಾಗಿ ರಾಜಕೀಯದಲ್ಲಿ ತೊಡಗಿ ಪಳಗಿ ಇಂದು ಜನನಾಯಕನಾಗಿ ಬೆಳೆದಿರುವ ಡಿ ಕೆ ಶಿವಕುಮಾರ್ ಅವರು ಶಾಲೆಯಿಂದಲೇ ನಾಯಕನಾಗಿ ಬೆಳೆದಿದ್ದರು, ಇನ್ನು ಮುಂದೆ ಅವರೊಬ್ಬ ಹೋರಾಟಗಾರ 2028ರಲ್ಲಿ ಮತ್ತೆ ಅಧಿಕಾರಕ್ಕೆ ಮರಳುತ್ತಾರೆ ಎಂದು ಅನಿವಾಸಿ ಕನ್ನಡಿಗರು ಹೇಳಿದರು.