'ನೀವು ಇಂಥ ಪ್ರಶ್ನೆ ಕೇಳಿ ಕಾಂಗ್ರೆಸ್ ಪಾರ್ಟಿಯನ್ನು ಡಿವೈಡ್ ಮಾಡೋಕೆ ನೋಡ್ತಿದ್ದೀರಿ; ಮಹದೇವಪ್ಪ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ': ಸಿದ್ದರಾಮಯ್ಯ ಗರಂ; Video
ನವೆಂಬರ್ 26, 1949ರಲ್ಲಿ ಸಂವಿಧಾನ ಅಂಗೀಕಾರವಾಯಿತು. ಈ ಬಾರಿ ಮೈಸೂರಿನಲ್ಲಿ ಆಚರಿಸುವ ತೀರ್ಮಾನ ಮಾಡಿದೆವು. ನಾವು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಮಾಡುತ್ತಿದ್ದರೆ, ದಲಿತ ಸಂಘರ್ಷ ಸಮಿತಿಯವರು ಸಾಯಂಕಾಲ ಮಾಡುತ್ತಿದ್ದಾರೆ, ಅದರಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದರು.
ಬೆಂಗಳೂರು: ಇಂದು ನವೆಂಬರ್ 26 ಸಂವಿಧಾನ ಅಂಗೀಕಾರ ದಿನ, ಪ್ರತಿವರ್ಷ ರಾಜ್ಯ ಸರ್ಕಾರ ವತಿಯಿಂದ ವಿಧಾನಸೌಧ ಮುಂದೆ ಕಾರ್ಯಕ್ರಮ ಏರ್ಪಡುತ್ತದೆ. ಆದರೆ ಈ ವರ್ಷ ರಾಜ್ಯ ಸರ್ಕಾರ ಮೈಸೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಿದೆ. ಇಂದು ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಸರ್ಕಾರದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು 1 ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ.
ಈ ಬಗ್ಗೆ ನಿನ್ನೆ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ನವೆಂಬರ್ 26, 1949ರಲ್ಲಿ ಸಂವಿಧಾನ ಅಂಗೀಕಾರವಾಯಿತು. ಈ ಬಾರಿ ಮೈಸೂರಿನಲ್ಲಿ ಆಚರಿಸುವ ತೀರ್ಮಾನ ಮಾಡಿದೆವು. ನಾವು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಮಾಡುತ್ತಿದ್ದರೆ, ದಲಿತ ಸಂಘರ್ಷ ಸಮಿತಿಯವರು ಸಾಯಂಕಾಲ ಮಾಡುತ್ತಿದ್ದಾರೆ, ಅದರಲ್ಲಿ ನಾನು ಭಾಗವಹಿಸುತ್ತಿದ್ದೇನೆ ಎಂದರು.
ಗರಂ ಆದ ಸಿದ್ದರಾಮಯ್ಯ
ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪನವರು ಕಾರ್ಯಕ್ರಮಕ್ಕೆ ಬರುತ್ತಾರೆಯೇ ಎಂದು ಸುದ್ದಿಗಾರರು ಕೇಳಿದಾಗ ಗರಂ ಆದ ಸಿದ್ದರಾಮಯ್ಯ, ಮಹದೇವಪ್ಪ ಬಗ್ಗೆ ವಿಶೇಷವಾಗಿ ಏಕೆ ಕೇಳುತ್ತೀರಿ, ಅವರು ಕಾಂಗ್ರೆಸ್ ಪಕ್ಷದವರಲ್ಲವೇ ಅವರು ಬರುತ್ತಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆಯೇ ಎಂದು ಕೇಳಿದ್ದಕ್ಕೆ, ಹಾಗಾದರೆ ಎಲ್ಲಾ ಶಾಸಕರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆಯೇ ಎಂದು ಕೇಳಿದರು.
ನೀವ್ಯಾಕೆ ಇಂಥ ಪ್ರಶ್ನೆಗಳನ್ನೇ ಕೇಳುತ್ತೀರಿ, ಅವರು ನಮ್ಮ ಪಕ್ಷದಲ್ಲಿವೇ, ಅವರು ಬರುತ್ತಾರೆ ಎಂದರು. ಅವರು ಪ್ರತ್ಯೇಕ ಸಮಾವೇಶ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆಯಲ್ಲವೇ ಎಂದು ಕೇಳಿದ್ದಕ್ಕೆ, ಅವರು ಪ್ರತ್ಯೇಕ ಸಂಘಟನೆಯಡಿ ಸಮಾವೇಶ ಮಾಡುತ್ತಿಲ್ಲ, ದಲಿತ ಸಂಘರ್ಷ ಸಮಿತಿ ಮಾಡುತ್ತಿರುವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸುತ್ತಿದ್ದಾರೆ ಅಷ್ಟೆ ಎಂದರು.
ಕಾಂಗ್ರೆಸ್ ಪಾರ್ಟಿಯನ್ನು ಡಿವೈಡ್ ಮಾಡ್ತಿದ್ದೀರಿ
ನೀವು ಇಂತಹ ಪ್ರಶ್ನೆಗಳನ್ನು ಕೇಳಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಮಾಡುತ್ತಿದ್ದೀರಿ, ಕಾಂಗ್ರೆಸ್ ಪಕ್ಷ ಇಬ್ಭಾಗವಾಗಲು ನೀವು ಪ್ರಯತ್ನಿಸುತ್ತಿದ್ದೀರಿ, ಅವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯ ಸದಸ್ಯರಲ್ಲವೇ, ಅವರು ಟಿ ನರಸೀಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ, ಅವರು ಕೂಡ ಭಾಗವಹಿಸುತ್ತಾರೆ,ಅವರ ಪುತ್ರ ಲೋಕಸಭಾ ಸದಸ್ಯ ಅವರು ಕೂಡ ಭಾಗವಹಿಸುತ್ತಾರೆ ಹಾಗಿರುವಾಗ ನೀವು ಯಾಕೆ ಕೇಳುತ್ತೀರಿ ಎಂದು ಸಿಟ್ಟಿನಿಂದ ಪ್ರಶ್ನಿಸಿದರು.