ಬೆಂಗಳೂರು: ಚುನಾವಣಾ ಆಯೋಗದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR)ಯಲ್ಲಿನ ಫಾರಂ-7 ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹೌದು.. ಫಾರಂ-7 ದುರ್ಬಳಕೆ ಖಂಡಿಸಿ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಧರಣಿ ನಡೆಸಿದ ಬೆನ್ನಲ್ಲೇ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಿಇಒ ಅನ್ಬುಕುಮಾರ್ ಸೂಚಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸಿಗರ ಪ್ರತಿಭಟನೆ ಹಿನ್ನೆಲೆ ಸಿಇಸಿ ಜ್ಞಾನೇಶ್ ಕುಮಾರ್ ಸೇರಿ ಮೂವರು ಆಯುಕ್ತರ ಜೊತೆಗೆ ಅನ್ಬುಕುಮಾರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರು ಕಚೇರಿ ಬಳಿ ಧರಣಿ ಕೂತಿದ್ದರು. ತನಿಖೆಗೆ ಆದೇಶ ನೀಡುವಂತೆ ಸಿಎಂ, ಸಚಿವರು ಪಟ್ಟು ಹಿಡಿದಿದ್ದಾರೆ ಎಂದುದನ್ನು ವಿವರಿಸಿದ್ದರು ಎನ್ನಲಾಗಿದೆ.
ಪ್ರತಿಭಟನೆ ವಾಪಸ್
ಇತ್ತ ಫಾರಂ-7 ದುರ್ಬಳಕೆ ಖಂಡಿಸಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಧರಣಿಯನ್ನು ಕೊನೆಗೂ ಅಂತ್ಯಗೊಳಿಸಲಾಗಿದೆ. ಚುನಾವಣಾ ಆಯೋಗ ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, 'ಮತದಾನದ ಹಕ್ಕು ಇದ್ದವರನ್ನೇ ತೆಗೆಯಲು ವಿಪಕ್ಷಗಳಿಂದ ಕುತಂತ್ರ ನಡೆದಿದೆ. ಆದರೆ ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ' ಎಂದು ಹೇಳಿದ್ದಾರೆ.
ವಿಪಕ್ಷಗಳಿಂದ ಕುತಂತ್ರ
ಇನ್ನು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಜತೆ ಚರ್ಚಿಸಿದ ಬಳಿಕ ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅನೇಕ ವಿಚಾರಗಳನ್ನು ರಾಜ್ಯದ ಜನತೆಯ ಗಮನಕ್ಕೆ ತಂದಿದ್ದೇವೆ.
1 ಕೋಟಿಗೂ ಹೆಚ್ಚು ಮತಗಳನ್ನು ಅನೇಕ ಸಂದರ್ಭದಲ್ಲಿ ತೆಗೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ನವರು ದೊಡ್ಡ ಕುತಂತ್ರ ನಡೆಸಿದ್ದಾರೆ. ಮತದಾನದ ಹಕ್ಕು ಇದ್ದವರನ್ನೇ ತೆಗೆಯಲು ವಿಪಕ್ಷಗಳಿಂದ ಕುತಂತ್ರ ನಡೆದಿದೆ ಎಂದು ಆರೋಪಿಸಿದರು.
ಅಲ್ಲದೆ 'ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ. 50 ಲಕ್ಷಕ್ಕೂ ಹೆಚ್ಚು ಜನರಿಗೆ ಸಮಸ್ಯೆ ಅಂತ ನೋಟಿಸ್ ಕೊಟ್ಟಿದ್ದಾರೆ. ಸುಮಾರು ಜನ ಬೇರೆ ಜಾಗಕ್ಕೆ ಶಿಫ್ಟ್ ಆಗಿದ್ದಾರೆ, ಮರಣ ಹೊಂದಿದ್ದಾರೆ.
ಆದರೆ ಇದೆಲ್ಲಾ ಆದ್ಮೇಲೆ ಯಾರಿಗೆ ಮತದಾನದ ಹಕ್ಕು ಇದೆಯೋ ಅವರನ್ನು ತೆಗೆಯಲು ಬಿಜೆಪಿ, ಜೆಡಿಎಸ್ನವರು ಫಾರ್ಮ್-7 ಕೊಟ್ಟರು. ಕೊನೆ 3 ದಿನ ಎಲ್ಲೋ ಒಂದ್ಕಡೆ ಫಾರ್ಮ್ ಪ್ರಿಂಟ್ ತೆಗೆದು ಕೊಟ್ಟಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.
'ಇದು ಈ ದೇಶದ ಕಾನೂನು. ಅವರು ಅದನ್ನು ಒಪ್ಪಿಕೊಳ್ಳಲೇಬೇಕು, ತನಿಖೆ ಮುಂದುವರಿಯಲಿದೆ. ಪ್ರತಿಯೊಬ್ಬ ಮತದಾರನ ರಕ್ಷಣೆಯನ್ನು ಖಚಿತಪಡಿಸುವುದು ನನ್ನ ಕರ್ತವ್ಯ' ಎಂದು ಡಿಕೆ ಶಿವಕುಮಾರ್ ಹೇಳಿದರು.