ಎಂಆರ್‌ಪಿಎಲ್ ಎದುರು ಪ್ರತಿಭಟನೆ 
ರಾಜ್ಯ

ಬಾಯ್ಲರ್‌ ಸ್ಫೋಟ: ಮಂಗಳೂರಿನ MRPLನಿಂದ ಮೃತ ಕಾರ್ಮಿಕನ ಕುಟುಂಬಕ್ಕೆ 1.2 ಕೋಟಿ ರೂ ಪರಿಹಾರ ಘೋಷಣೆ

ಅಗ್ನಿ ಅವಘಡದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ 1.2 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಎಂಆರ್‌ಪಿಎಲ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರು: ಮಂಗಳೂರು ಬಳಿಯ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(MRPL)ನ ಕೋಕರ್ ಹೈಡ್ರೋಟ್ರೀಟರ್(CHT) ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟಿ ಕಾರ್ಮಿಕನ ಕುಟುಂಬಕ್ಕೆ ಕಂಪನಿ ಗುರುವಾರ 1.2 ಕೋಟಿ ರೂ. ಪರಿಹಾರ ಘೋಷಿಸಿದೆ.

ಅಗ್ನಿ ಅವಘಡದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ 1.2 ಕೋಟಿ ರೂ. ಆರ್ಥಿಕ ನೆರವು ನೀಡುವುದಾಗಿ ಎಂಆರ್‌ಪಿಎಲ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆಡಳಿತ ಮಂಡಳಿಯು ಕರ್ಕಡ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದೆ ಎಂದು ಎಂಆರ್‌ಪಿಎಲ್ ತಿಳಿಸಿದೆ.

ಅಮೂಲ್ಯ ಜೀವವೊಂದರ ನಷ್ಟವನ್ನು ಯಾವುದೇ ಆರ್ಥಿಕ ನೆರವಿನಿಂದ ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಎಂಆರ್‌ಪಿಎಲ್, ಮೃತರ ಕುಟುಂಬಕ್ಕೆ 90 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ನಿರ್ಧರಿಸಿಲಾಗಿದೆ. ಇದರ ಜೊತೆಗೆ, ಕುಟುಂಬವು 'ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್'(GTLI) ಯೋಜನೆಯಡಿ ಸುಮಾರು 10 ಲಕ್ಷ ರೂ. ಮತ್ತು 'ವರ್ಕ್‌ಮೆನ್ ಕಾಂಪೆನ್ಸೇಷನ್ ಪಾಲಿಸಿ' (WCP) ಅಡಿಯಲ್ಲಿ 20 ಲಕ್ಷ ರೂ.ಗಳನ್ನು ಪಡೆಯಲಿದೆ. ಇದರೊಂದಿಗೆ ಒಟ್ಟು 1.20 ಕೋಟಿ ರೂ. ಆರ್ಥಿಕ ನೆರವು ಮತ್ತು ವಿಮಾ ಪ್ರಯೋಜನಗಳು ಮೃತನ ಕುಟುಂಬಕ್ಕೆ ಸಿಗಲಿದೆ ಎಂದು ಹೇಳಿದೆ.

ಗುತ್ತಿಗೆ ಕಾರ್ಮಿಕರು ಸೇರಿದಂತೆ ದ್ವಿತೀಯ ಹಂತದ ಕಾರ್ಯಪಡೆಗೆ(secondary workforce) 'ಮೆಡಿಕ್ಲೇಮ್' ವಿಮಾ ರಕ್ಷಣೆಯನ್ನು ವಿಸ್ತರಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತಿರುವುದಾಗಿ ಎಂಆರ್‌ಪಿಎಲ್ ತಿಳಿಸಿದೆ. ಇದಕ್ಕಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಚರ್ಚೆಯ ಹಂತದಲ್ಲಿದೆ ಎಂದು ಅದು ಹೇಳಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ಯೋಜನೆಯನ್ನು ಅಂತಿಮಗೊಳಿಸಲಾಗುವುದು ಮತ್ತು ಈ ಪ್ರಕ್ರಿಯೆಯು ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ.

ಇದಕ್ಕೂ ಮುನ್ನ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೂರಾರು ಗುತ್ತಿಗೆ ಕಾರ್ಮಿಕರು ಕೆಲಸವನ್ನು ಬಹಿಷ್ಕರಿಸಿ ಎಂಆರ್‌ಪಿಎಲ್ ಎದುರು ಪ್ರತಿಭಟನೆ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; flydubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ

ದಿವ್ಯಾಗರ್ ಬೀಚ್‌ನಲ್ಲಿ ಭೀಕರ ದುರಂತ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋದ 8 ವಿದ್ಯಾರ್ಥಿಗಳು!

'FIR ಆಗೋ ತನಕ ಇಲ್ಲಿಂದ ಕದಲೋದಿಲ್ಲ': ಸಿಎಂ ಡಿ.ಕೆ ಶಿವಕುಮಾರ್ ಪಟ್ಟು, ಧರಣಿ, CEO ಕಚೇರಿ ಮುಂದೆ ಹೈಡ್ರಾಮಾ; Video