ಸಾರಿಗೆ ಇಲಾಖೆಯ ಬೆವರಿಳಿಸಿದ ವಿದ್ಯಾರ್ಥಿನಿ Online Desk
ರಾಜ್ಯ

ಮಾರ್ಗಮಧ್ಯೆ ಕೆಟ್ಟು ನಿಂತ ಬಸ್, ತಲೆಕೆಡಿಸಿಕೊಳ್ಳದ KKRTC: ಸಾರಿಗೆ ಇಲಾಖೆಯ ಬೆವರಿಳಿಸಿದ ವಿದ್ಯಾರ್ಥಿನಿ; ₹33,700 ಪರಿಹಾರಕ್ಕೆ ಕೋರ್ಟ್ ಆದೇಶ

ಮಾರ್ಗಮಧ್ಯೆ ಸ್ಲೀಪರ್ ಬಸ್ ಕೆಟ್ಟುನಿಂತು ಪ್ರಯಾಣಿಕರಿಗೆ ತೊಂದರೆಯಾದರೂ ಪರ್ಯಾಯ ವ್ಯವಸ್ಥೆ ಮಾಡದ ಕೆಕೆಆರ್‌ಟಿಸಿ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗವು ಮಹತ್ವದ ಆದೇಶ ಹೊರಡಿಸಿದ್ದು, ಸಂಕಷ್ಟಕ್ಕೀಡಾಗಿದ್ದ ವಿದ್ಯಾರ್ಥಿನಿಗೆ ಒಟ್ಟು 33,700 ಪರಿಹಾರ ನೀಡುವಂತೆ ಆಯೋಗವು ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕಲಬುರಗಿ: ನೀವು 400 ಕಿಲೋಮೀಟರ್ ದೂರದ ಸ್ಥಳಕ್ಕೆ ಪರೀಕ್ಷೆಗೆಂದು ಹೊರಟಿದ್ದೀರಿ ಎಂದುಕೊಳ್ಳಿ. ಕೈಯಲ್ಲಿ ಸ್ಲೀಪರ್ ಬಸ್ ಟಿಕೆಟ್ ಇದೆ, ಮನಸ್ಸಿನಲ್ಲಿ ಪರೀಕ್ಷೆಯ ಟೆನ್ಷನ್ ಇದೆ. ಆದರೆ ಮಧ್ಯರಾತ್ರಿ ನಡು ದಾರಿಯಲ್ಲಿ ಬಸ್ ಇದ್ದಕ್ಕಿದ್ದಂತೆ ಕೆಟ್ಟು ನಿಲ್ಲುತ್ತದೆ, ಡಿಪೋಗೆ ಎಳೆದೊಯ್ದರೂ ಸ್ಟಾರ್ಟ್ ಆಗುವುದಿಲ್ಲ, ಅಧಿಕಾರಿಗಳು ಪರ್ಯಾಯ ವ್ಯವಸ್ಥೆಯನ್ನೂ ಮಾಡುವುದಿಲ್ಲ. ಆಗ ನೀವು ಏನು ಮಾಡುತ್ತೀರಿ? ಅಯ್ಯೋ ದುರ್ವಿಧಿ ಎಂದುಕೊಂಡು, ನೀವೇ ಬೇರೆ ವ್ಯವಸ್ಥೆ ಮಾಡಿಕೊಂಡು ಹೋಗುತ್ತೀರಿ; ಹೋಗುವಾಗ ಸಾರಿಗೆ ಇಲಾಖೆಗೆ ಬಾಯಿಗೆ ಬಂದಂತೆ ಬೈಯುತ್ತೀರಿ.! ಆದರೆ ಇಲ್ಲೊಬ್ಬ ಹೆಣ್ಣುಮಗಳು ಹಾಗೆ ಸುಮ್ಮನಾಗಲಿಲ್ಲ, ಬೈದು ಸುಮ್ಮನಾಗುವ ಬದಲು ನೇರವಾಗಿ ಕಾನೂನು ಹೋರಾಟಕ್ಕೆ ಇಳಿದು ಸಾರಿಗೆ ಇಲಾಖೆಯ ಬೆವರಿಳಿಸಿದ್ದಾಳೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬೀದರ್ ಮೂಲದ ತೇಜಸ್ವಿನಿ ಬಸವರಾಜ ಎಂಬ ವಿದ್ಯಾರ್ಥಿನಿ, 2025ರ ನವೆಂಬರ್ 16 ರಂದು ಬೀದರ್‌ನಿಂದ ದಾವಣಗೆರೆಗೆ ಪ್ರಯಾಣಿಸಲು ಕೆಕೆಆರ್‌ಟಿಸಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಸೀಟ್ ಬುಕ್ ಮಾಡಿದ್ದರು. ಮರುದಿನ ಬೆಳಗ್ಗೆ 6 ಗಂಟೆಗೆ ಅವರಿಗೆ ದಾವಣಗೆರೆಯಲ್ಲಿ ಅತಿ ಮುಖ್ಯವಾದ ಪರೀಕ್ಷೆ ಇತ್ತು. ಆದರೆ, ನಿಗದಿತ ಸಮಯಕ್ಕೆ ಹೊರಟ ಬಸ್ ಹುಮ್ನಾಬಾದ್ ಬಳಿ ಕೆಟ್ಟುನಿಂತಿತ್ತು. ನಂತರ ಅದನ್ನು ಕಲಬುರಗಿ ಡಿಪೋಗೆ ತರಲಾಯಿತಾದರೂ, ಅಲ್ಲಿಯೂ ಬಸ್ ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ. ಅದರಲ್ಲೂ, ತನಗೆ ಮರುದಿನ ಬೆಳಗ್ಗೆ ಪರೀಕ್ಷೆ ಇರುವುದರಿಂದ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ವಿದ್ಯಾರ್ಥಿನಿ ಡಿಪೋ ಅಧಿಕಾರಿಗಳನ್ನು ಗೋಗರೆದರೂ ಸಾರಿಗೆ ಅಧಿಕಾರಿಗಳು ಯಾವುದೇ ಸೂಕ್ತ ವ್ಯವಸ್ಥೆ ಮಾಡಲಿಲ್ಲ.

ಬಾಡಿಗೆ ಕಾರಿನಲ್ಲಿ ಪ್ರಯಾಣ

ಪರೀಕ್ಷೆ ತಪ್ಪಿಹೋಗಬಾರದು ಎಂಬ ಅನಿವಾರ್ಯತೆಯಿಂದಾಗಿ ತೇಜಸ್ವಿನಿ ಅವರು ಕಲಬುರಗಿಯಿಂದ ದಾವಣಗೆರೆಗೆ ₹18,700 ಭರಿಸಿ ಖಾಸಗಿ ಬಾಡಿಗೆ ಕಾರನ್ನು ಮಾಡಿಕೊಂಡು ಪ್ರಯಾಣ ಬೆಳೆಸಬೇಕಾಯಿತು. ಆದರೆ, ಇದರಿಂದ ಧೃತಿಗೆಡದ ತೇಜಸ್ವಿನಿ ಬಸವರಾಜ, ಈ ಸೇವೆಯ ನ್ಯೂನತೆಯ ವಿರುದ್ಧ ವಿದ್ಯಾರ್ಥಿನಿ ಜಿಲ್ಲಾ ಗ್ರಾಹಕ ಫೋರಂ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಮಾಲತಿ ಗುರುಣ್ಣ ಮತ್ತು ಸದಸ್ಯ ಎಂ. ಲೋಕೇಶ್ ಅವರ ಪೀಠವು ಕೆಕೆಆರ್‌ಟಿಸಿಗೆ ದಂಡ ವಿಧಿಸಿದೆ. ಅದರಂತೆ, ವಿದ್ಯಾರ್ಥಿನಿ ಕಾರಿಗೆ ಖರ್ಚು ಮಾಡಿದ ₹18,700 ಅನ್ನು ಜನವರಿ 3, 2026 ರಿಂದ ಪಾವತಿಯಾಗುವ ದಿನಾಂಕದವರೆಗೆ ಶೇ. 6ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಬೇಕು. ಜೊತೆಗೆ, ಮಾನಸಿಕ ಕಿರಿಕಿರಿ ಮತ್ತು ಸೇವಾ ನ್ಯೂನತೆಗಾಗಿ ₹10,000 ಪರಿಹಾರ ನೀಡಬೇಕು ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹5,000 ನೀಡಬೇಕು. ಅರ್ಥಾತ್, ಒಟ್ಟಾರೆಯಾಗಿ, ಇವೆಲ್ಲವೂ ಸೇರಿ ಒಟ್ಟು ₹33,700 ಆಗುತ್ತದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

ಬೆಳಗಾವಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ ನಿರ್ಮಾಣ- ಸಿಎಂ ಡಿಕೆ ಶಿವಕುಮಾರ್ ಘೋಷಣೆ!