ಸಾಂದರ್ಭಿಕ ಚಿತ್ರ 
ರಾಜ್ಯ

ಆತ್ಮಹತ್ಯೆ ಎಂದು ಕೇಸ್ ಕ್ಲೋಸ್: ಪಟ್ಟು ಬಿಡದ ತಾಯಿ; ಹೆತ್ತ ಕರುಳ ಅಳಲಿಗೆ ಕೋರ್ಟ್ ಸ್ಪಂದನೆ, ಕೊಲೆ ಪ್ರಕರಣ ದಾಖಲಿಸಲು ಆದೇಶ..!

ತಮ್ಮ ಪುತ್ರಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿ ಬಿಕಾಂ ಪದವೀಧರೆ ಸುಜಾತಾ ಸಾವಿನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆ ಎಂದು ಪರಿಗಣಿಸಲಾಗಿದ್ದ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿ ತನಿಖೆ ನಡೆಸುವಂತೆ ಕಗ್ಗಲೀಪುರ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

ಕೆಂಗೇರಿಯ ನಿವಾಸಿ ಜಯಲಕ್ಷ್ಮಿ (48) ಅವರು ನೀಡಿರುವ ದೂರಿನಲ್ಲಿ, ತಮ್ಮ ಪುತ್ರಿ ಎಸ್. ಸುಜಾತಾ (23) ಅವರನ್ನು ಕೊಲೆ ಮಾಡಲಾಗಿದ್ದು, ಆಕೆಯ ಸಾವು ಆತ್ಮಹತ್ಯೆಯಂತೆ ಕಾಣುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ಮರೆಮಾಚುವ ಉದ್ದೇಶದಿಂದ ಸುಜಾತಾ ಅವರ ಮೊಬೈಲ್‌ನ ಸಿಮ್ ಕಾರ್ಡ್‌ನ್ನು ತೆಗೆದುಹಾಕಲಾಗಿತ್ತು ಎಂದೂ ಅವರು ದೂರಿದ್ದಾರೆ.

ತಮ್ಮ ಪುತ್ರಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ.

ಬಳಿಕ ಅವರು ಬಿಎನ್‌ಎಸ್‌ಎಸ್‌ನ ಸೆಕ್ಷನ್ 175(3) ಅಡಿಯಲ್ಲಿ ನ್ಯಾಯಾಲಯದ ಮೊರೆ ಹೋಗಿ, ಪೊಲೀಸ್ ತನಿಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.

ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಇದೀಗ ಬಿಎನ್‌ಎಸ್‌ನ ಸೆಕ್ಷನ್ 61 (ಅಪರಾಧಿ ಸಂಚು), 103 (ಕೊಲೆ) ಹಾಗೂ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಬಿಕಾಂ ಪದವೀಧರೆಯಾಗಿದ್ದ ಸುಜಾತಾ ತಲಘಟ್ಟಪುರದ ಆನ್‌ಲೈನ್ ವಿತರಣಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 11ರಂದು ಅವರು ಮನೆಯಲ್ಲಿ ಒಬ್ಬರೇ ಇದ್ದರು. ಜಯಲಕ್ಷ್ಮಿ ಕೆಲಸಕ್ಕೆ ತೆರಳಿದ್ದರೆ, ಅವರ ಪತಿ ಶಾಂತಪ್ಪ ಅವರು ನಿರ್ಮಾಣ ಹಂತದಲ್ಲಿದ್ದ ತಮ್ಮ ಮನೆಯ ಕಟ್ಟಡ ನೋಡಲು ಹೋಗಿದ್ದರು.

ಶಾಂತಪ್ಪ ಮನೆಗೆ ವಾಪಸ್ ಬಂದಾಗ ಹಲವು ಬಾರಿ ಬಾಗಿಲು ಬಡಿದರೂ ಸುಜಾತಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಕಿಟಕಿಯಿಂದ ನೋಡಿದಾಗ, ಸುಜಾತಾ ಸೀರೆಯನ್ನು ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಳಿಕ ನೆರೆಹೊರೆಯವರ ನೆರವಿನೊಂದಿಗೆ ಬಾಗಿಲು ಒಡೆದು ಸುಜಾತಾ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯದಿದ್ದಾರೆ. ಆದರೆ ವೈದ್ಯರು ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಘೋಷಿಸಿದ್ದಾರೆ.

ಆರಂಭಿಕ ವಿಚಾರಣೆ ವೇಳೆ, ತಮ್ಮ ಪುತ್ರಿಯ ಮೊಬೈಲ್‌ನಿಂದ ಸಿಮ್ ಕಾರ್ಡ್ ಕಾಣೆಯಾಗಿದೆ ಎಂದು ಜಯಲಕ್ಷ್ಮಿ ಪೊಲೀಸರಿಗೆ ತಿಳಿಸಿದ್ದರು ಎನ್ನಲಾಗಿದೆ. ಅಲ್ಲದೆ, ಸುಜಾತಾ ಸಾವಿಗೂ ಮುನ್ನದ ಕೆಲ ದಿನಗಳಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನಲಾದ ಆಕಾಶ್ ಎಂಬ ವ್ಯಕ್ತಿಯ ವಿರುದ್ಧವೂ ಅವರು ಅನುಮಾನ ವ್ಯಕ್ತಪಡಿಸಿದ್ದರು.

ತಮ್ಮ ಪುತ್ರಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ. ಮೊಬೈಲ್‌ನಿಂದ ಮಾಹಿತಿ ಪಡೆಯಲು ಅದನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ಹಲವು ಬಾರಿ ತಿಳಿಸಿದ್ದರು ಎನ್ನಲಾಗಿದೆ.

ಬಳಿಕ ಜಯಲಕ್ಷ್ಮಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಜುಲೈ 1ರಂದು ದೂರು ಸಲ್ಲಿಸಿದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದಾದ ಬಳಿಕ ಪೊಲೀಸ್ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಬಿಎನ್‌ಎಸ್‌ಎಸ್‌ನ ಸೆಕ್ಷನ್ 175(3) ಅಡಿಯಲ್ಲಿ ನ್ಯಾಯಾಲಯದ ಮೊರೆ ಹೋದರು.

ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಬಿಎನ್‌ಎಸ್‌ನ ಸೆಕ್ಷನ್ 61, 103 ಮತ್ತು 108ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಗಳ ಕುರಿತು ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಸೋಮವಾರ ಎಫ್‌ಐಆರ್ ದಾಖಲಿಸಲಾಗಿದೆ. ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ- ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಏಷ್ಯನ್ ಗೇಮ್ಸ್‌ 2026: ಭಾರತ ಚಿನ್ನದ ಪದಕ ಗೆದ್ದ ಬಳಿಕ ಜಪಾನ್‌ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ ಭಾರತೀಯ ಅಭಿಮಾನಿಗಳು! Video

'It Was Scripted': ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ, ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಂಜಯ್ ದತ್!

ಕುಸಿದ ಅಮೆರಿಕ: ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ; ಇನ್ಮುಂದೆ EMPs ಪ್ರಬಲ- EAM Jaishankar

'ನನಗೆ ಸಾವಿನ ಭಯವಿರಲಿಲ್ಲ': ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ಸಹ-ಪೈಲಟ್ ಹಮ್ಮಾಮಿ ಹೇಳಿಕೆ