ಗೋವಿಂದರಾಜ್ 
ರಾಜ್ಯ

ಭದ್ರಾವತಿಯ VISL ಕಾರ್ಖಾನೆಯ ಡಿಜಿಎಂ ಆತ್ಮಹತ್ಯೆಗೆ ಶರಣು; ಕಾರಣ ನಿಗೂಢ!

ವಿಐಎಸ್ಎಲ್ ಅಧಿಕಾರಿಗಳ ಕ್ವಾಟ್ರಸ್‌ನಲ್ಲಿರುವ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೋವಿಂದರಾಜ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ವಿಐಎಸ್ಎಲ್‌ನ ಎಲೆಕ್ಟ್ರಿಕ್ ಡಿಪಾರ್ಟ್ಮೆಂಟ್‌ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದ ಗೋವಿಂದರಾಜ್(51) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಐಎಸ್ಎಲ್ ಅಧಿಕಾರಿಗಳ ಕ್ವಾಟ್ರಸ್‌ನಲ್ಲಿರುವ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೋವಿಂದರಾಜ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ತಮಿಳುನಾಡಿನ ಸೇಲಂ ಮೂಲದ ಗೋವಿಂದರಾಜ್‌ ಅವರು ಕಳೆದ 13 ವರ್ಷದಿಂದ ವಿಐಎಸ್‌ಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರವಷ್ಟೇ ಪತ್ನಿ, ಮಕ್ಕಳನ್ನು ಸೇಲಂಗೆ ಕಳುಹಿಸಿ ಭದ್ರಾವತಿ ನಗರದ ಸೇಂಟ್‌ ಚಾರ್ಲ್ಸ್ ಶಾಲೆಯ ಎದುರಿರುವ ಕ್ವಾಟ್ರಸ್‌ಗೆ ಬಂದಿದ್ದ ಗೋವಿಂದರಾಜ್ ಅವರು ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ಗೋವಿಂದರಾಜ್ ಅವರ ಆಪ್ತ ಸಹಾಯಕ ಕರೆ ಮಾಡಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸದ ಕಾರಣ ಆತ ಕ್ವಾಟ್ರಸ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಡಿಜಿಎಂ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಜಿಎಂ ಗೋವಿಂದರಾಜ್ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸೇಲಂನಲ್ಲಿದ್ದ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಸೇಲಂನಿಂದ ಆಗಮಿಸುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕೇಂದ್ರ ಸಚಿವ ಹರ್ದೀಪ್ ಪುರಿಗೆ ಕೊಕ್!

ಜೈಲು DIG ಸೋಮಶೇಖರ್ ಬಂಧಿಸಿದ ಪರಪ್ಪನ ಅಗ್ರಹಾರ ಪೊಲೀಸರು!

'ನೈಸ್‌'ಗೆ ಸುಪ್ರೀಂ ಕೋರ್ಟ್ ಶಾಕ್; ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಕಾರ!

ಕುನೋದಲ್ಲಿ ಮತ್ತೊಂದು ಗುಡ್‌ನ್ಯೂಸ್; ಭಾರತ ಮೂಲದ ಚೀತಾ KJP21ಗೆ 5 ಮರಿಗಳ ಜನನ-video

ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ: ಮೀಸಲು ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದೆ ರೋಚಕ - ಕನ್ನಡತಿ ಸ್ನೇಹಾ ಗೌಡ!