ಹಾಸನ: KPSC ಅಕ್ರಮದಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಲತಾಕುಮಾರಿ ವಾಟ್ಸಪ್ ಸ್ಟೇಟಸ್ ಮೂಲಕ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವಾಟ್ಸಪ್ ಸ್ಟೇಟಸ್‌ನಲ್ಲಿ ರಾಷ್ಟ್ರ ಲಾಂಛನ, ಧ್ಯೇಯವಾಕ್ಯ ʻಸತ್ಯಮೇವ ಜಯತೇʼ ಜೊತೆಗೆ ಎರಡು ಸಾಲುಗಳನ್ನ ಬರೆದಿದ್ದಾರೆ.
ನನ್ನ ಮೇಲೆ ಸುಳ್ಳಿನ ದಾಳಿ ಮಾಡಬಹುದು ಆದರೆ ನೀವು ನನ್ನನ್ನು ಸುಳ್ಳಿನಿಂದ ಕುಗ್ಗಿಸಲು ಸಾಧ್ಯವಿಲ್ಲ. ಸುಳ್ಳು ದಾಳಿ ಮಾಡಿದರೆ, ಸತ್ಯ ರಕ್ಷಣೆ ಮಾಡುತ್ತೆ ಎಂದು ಲತಾಕುಮಾರಿ ತಮ್ಮ ವೈಯುಕ್ತಿಕ ನಂಬರ್‌ನ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಶನಿವಾರವಷ್ಟೇ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಜಿಲ್ಲಾಧಿಕಾರಿ ಹುದ್ದೆಯಲಿರುವ ಮಹಿಳೆ ಕೆಪಿಎಸ್ಸಿಯಲ್ಲಿ ಏನೇನು ಮಾಡಿದ್ದಾರೆ ಎಂಬುದು ದಾಖಲೆ ಸಮೇತ ಸಾಬೀತಾಗಿದೆ. ಆದರೂ ಅಲ್ಲಿ ಅಕ್ರಮ ಎಸಗಿದ ಇವರನ್ನು ಇಲ್ಲಿ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕೂರಿಸಿದ್ದಾರೆ. ಅವತ್ತೇ ಅವರನ್ನು ರಜೆಯ ಮೇಲೆ ಕಳಿಸಿ ಅಮಾನತು ಮಾಡಬೇಕಾಗಿತ್ತು ಎಂದು ಕಿಡಿಕಾರಿದ್ದರು.