ಐಎನ್‌ಎಸ್ ಸಮರ್ಥಕ್ ಯುದ್ಧ ನೌಕೆ. 
ರಾಜ್ಯ

ನೌಕಾಪಡೆಗೆ ಮತ್ತಷ್ಟು ಬಲ: ಕಾರವಾರ ನೌಕಾನೆಲೆಯಲ್ಲಿ ಸ್ವದೇಶಿ ನಿರ್ಮಿತ ಬೃಹತ್ ನೌಕೆ ‘INS Samarthak’ ಲೋಕಾರ್ಪಣೆ..!

ನೌಕೆಯ ಲಾಂಛನದಲ್ಲಿ ಸಮುದ್ರದಿಂದ ಮೇಲೆದ್ದು ಬರುತ್ತಿರುವ ಭಾರತೀಯ ಆನೆಯ ಚಿತ್ರವಿದೆ. ಇದು ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಈ ಹಡಗಿನ ಧ್ಯೇಯವಾಕ್ಯ "ವಿಜಯವೇ ನಮ್ಮ ಏಕೈಕ ಗುರಿ" ಎಂದಾಗಿದೆ. ಹಾಗೆಯೇ, ಇದರ ಸಿಬ್ಬಂದಿಯನ್ನು 'ಪ್ರಚಂಡ ಪುಂಡಿಕ್ಸ್' ಎಂದು ಹೆಸರಿಸಲಾಗಿದೆ.

ಕಾರವಾರ: ಭಾರತೀಯ ನೌಕಾಪಡೆ ಸಾಮರ್ಥ್ಯಕ್ಕೆ ಮತ್ತೊಂದು ಅತ್ಯಾಧುನಿಕ ಗರಿ ಸೇರ್ಪಡೆಯಾಗಿದೆ. ಸಮುದ್ರ ಕಣ್ಗಾವಲಿನಿಂದ ಹಿಡಿದು ವಿಪತ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆ ಹಾಗೂ ಮಾನವರಹಿತ ತಂತ್ರಜ್ಞಾನಗಳ ಪ್ರಯೋಗದ ವರೆಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಭಾರತದ ಸ್ವದೇಶಿ ಬಹುಪಯೋಗಿ ಯುದ್ಧನೌಕೆ ‘ಐಎನ್‌ಎಸ್ ಸಮರ್ಥಕ್’ (INS Samarthak) ಅನ್ನು ಕಾರವಾರದ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಗಿದೆ.

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಯುದ್ಧ ನೌಕೆಯನ್ನು ದೇಶಕ್ಕೆ ಸಮರ್ಪಿಸಿದರು.

ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಹಿರಿಯ ನೌಕಾಪಡೆ ಮತ್ತು ರಕ್ಷಣಾ ಅಧಿಕಾರಿಗಳು, ರಕ್ಷಣಾ ಸಚಿವಾಲಯದ ಗಣ್ಯರು, ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ) ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಂಬಂಧಿತ ಮೂಲ ಉಪಕರಣ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನೌಕೆಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

ಎಲ್‌ಆ್ಯಂಡ್‌ಟಿ ಸಂಸ್ಥೆಯೇ ಐಎನ್‌ಎಸ್ ಸಮರ್ಥಕ್ ಅನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ. ಈ ನೌಕೆಯ ಸೇರ್ಪಡೆ ‘ಆತ್ಮನಿರ್ಭರ ಭಾರತ’ ಉಪಕ್ರಮದಡಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ನೌಕೆಯ ಒಟ್ಟು ಬಿಡಿಭಾಗಗಳು ಮತ್ತು ತಂತ್ರಜ್ಞಾನದಲ್ಲಿ ಶೇ.70ಕ್ಕೂ ಹೆಚ್ಚು ಪಾಲು ಸ್ವದೇಶಿ ಉತ್ಪನ್ನಗಳಾಗಿದ್ದು, ಭಾರತೀಯ ರಕ್ಷಣಾ ಸಂಸ್ಥೆಗಳು ಮತ್ತು ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಹಯೋಗದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲಾಗಿದೆ.

100 ಮೀಟರ್‌ಗೂ ಹೆಚ್ಚು ಉದ್ದ ಹೊಂದಿರುವ ಈ ನೌಕೆಯು ಸುಮಾರು 5,000 ಟನ್ ತೂಕವನ್ನು ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, 7,200 ನಾಟಿಕಲ್ ಮೈಲುಗಳಿಗೂ ಅಧಿಕ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಸಮುದ್ರದಲ್ಲಿ ಕಣ್ಗಾವಲು ಮತ್ತು ಗಸ್ತು, ಕಡಿಮೆ ತೀವ್ರತೆಯ ಕಡಲ ಕಾರ್ಯಾಚರಣೆಗಳು, ಗುರಿಗಳ ನಿಯೋಜನೆ, ಪರೀಕ್ಷೆಗಳು, ಮಾನವರಹಿತ ಹಾಗೂ ಸ್ವಾಯತ್ತ ವ್ಯವಸ್ಥೆಗಳ ಕಾರ್ಯಾಚರಣೆ, ವಿಪತ್ತು ಸಂದರ್ಭದಲ್ಲಿ ಮಾನವೀಯ ನೆರವು ಮತ್ತು ಪರಿಹಾರ ಕಾರ್ಯಗಳು (ಎಚ್‌ಎಡಿಆರ್), ಮುಳುಗಿದ ಹಡಗುಗಳನ್ನು ಮೇಲೆತ್ತುವ ಕಾರ್ಯಾಚರಣೆಗಳಿಗೆ ನೆರವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ನೌಕೆಯಲ್ಲಿ ಅತ್ಯಾಧುನಿಕ ಸಮಗ್ರ ವೇದಿಕೆ ನಿರ್ವಹಣಾ ವ್ಯವಸ್ಥೆ ಮತ್ತು ಸ್ವಯಂಚಾಲಿತ ವಿದ್ಯುತ್ ನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇವು ಹೆಚ್ಚಿನ ಮಟ್ಟದ ಸ್ವಯಂಚಾಲನೆ ಹಾಗೂ ನೈಜ ಸಮಯದಲ್ಲಿ ಕಾರ್ಯಾಚರಣೆಗಳ ಮೇಲ್ವಿಚಾರಣೆಗೆ ನೆರವಾಗುತ್ತವೆ.

ಈ ಸಾಮರ್ಥ್ಯಗಳು ಕಡಲ ಭದ್ರತೆ ಮತ್ತು ವಿಚಕ್ಷಣಾ ಕಾರ್ಯಗಳನ್ನು ಬಲಪಡಿಸುವುದರ ಜೊತೆಗೆ, ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ಭಾರತೀಯ ನೌಕಾಪಡೆಯ ಪಾತ್ರವನ್ನು ಮತ್ತಷ್ಟು ವಿಸ್ತರಿಸಲಿವೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ನೌಕೆಯ ಲಾಂಛನದಲ್ಲಿ ಸಮುದ್ರದಿಂದ ಮೇಲೆದ್ದು ಬರುತ್ತಿರುವ ಭಾರತೀಯ ಆನೆಯ ಚಿತ್ರವಿದೆ. ಇದು ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಈ ಹಡಗಿನ ಧ್ಯೇಯವಾಕ್ಯ "ವಿಜಯವೇ ನಮ್ಮ ಏಕೈಕ ಗುರಿ" ಎಂದಾಗಿದೆ. ಹಾಗೆಯೇ, ಇದರ ಸಿಬ್ಬಂದಿಯನ್ನು 'ಪ್ರಚಂಡ ಪುಂಡಿಕ್ಸ್' ಎಂದು ಹೆಸರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು