ಕರ್ನಾಟಕದಲ್ಲಿ ಬಸ್ ದರ ಏರಿಕೆಗೆ ಸಮಿತಿ ಶಿಫಾರಸು! AI Image
ರಾಜ್ಯ

ಬಸ್ ಪ್ರಯಾಣಿಕರ ಶೀಘ್ರ ಜೇಬಿಗೆ ಕತ್ತರಿ? BMTC ಶೇ. 40, KSRTC ಶೇ. 25ರಷ್ಟು ದರ ಹೆಚ್ಚಳಕ್ಕೆ ಸಮಿತಿ ಶಿಫಾರಸು!

Karnataka Bus Fare Hike: ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ! ಈಗಾಗಲೇ ನಂದಿನಿ ಹಾಲಿನ ದರ ಹೆಚ್ಚಳವಾಗುವುದು ಪಕ್ಕಾ ಆಗಿರುವ ಬೆನ್ನಲ್ಲೇ, ಇದೀಗ ಬಸ್ ಟಿಕೆಟ್ ದರಗಳೂ ಸಹ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕರ್ನಾಟಕದಲ್ಲಿ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಸಾಧ್ಯತೆ ದಟ್ಟವಾಗಿದೆ.! ಈಗಾಗಲೇ ನಂದಿನಿ ಹಾಲಿನ ದರ ಹೆಚ್ಚಳವಾಗುವುದು ಪಕ್ಕಾ ಆಗಿರುವ ಬೆನ್ನಲ್ಲೇ, ಇದೀಗ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರಗಳೂ ಸಹ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೌದು, ತೀವ್ರ ಆರ್ಥಿಕ ನಷ್ಟ ಹಾಗೂ ಹೆಚ್ಚುತ್ತಿರುವ ಇಂಧನ ವೆಚ್ಚದ ಹೊರೆಯನ್ನು ಸರಿದೂಗಿಸಲು ಕೆಎಸ್‌ಆರ್‌ಟಿಸಿ ಪ್ರಯಾಣ ದರವನ್ನು ಶೇಕಡಾ 25 ರಷ್ಟು ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾ 40 ರಷ್ಟು ಹೆಚ್ಚಿಸಲು ಸಾರಿಗೆ ಸಂಸ್ಥೆಗಳ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆ ಕುರಿತ ವರದಿ ಇಲ್ಲಿದೆ: 

ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಾರ್ವಜನಿಕ ಸಾರಿಗೆ ದರ ಪರಿಷ್ಕರಣೆ ಸಮಿತಿಯು, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ಎಲ್ಲಾ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ಬಸ್ ಪ್ರಯಾಣ ದರವನ್ನು ಕನಿಷ್ಠ ಶೇ. 25 ರಷ್ಟು ಹೆಚ್ಚಿಸಬೇಕೆಂದು ಕರ್ನಾಟಕ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಿದೆ. ಅದರಂತೆ, ಸಮಿತಿಯ ಪ್ರಕಾರ, KSRTC, NWKRTC, KKRTC ಸಾರಿಗೆ ನಿಗಮಗಳ  ಪ್ರಯಾಣ ದರವನ್ನು ಶೇಕಡಾ 25 ರಷ್ಟು ಹೆಚ್ಚಿಸಬೇಕು. ಹಾಗೆಯೇ ಸಾರಿಗೆ ನಿಗಮಗಳ ಪೈಕಿ, ಅತಿ ಹೆಚ್ಚು ನಷ್ಟದಲ್ಲಿರುವ ಬಿಎಂಟಿಸಿ ಪ್ರಯಾಣ ದರವನ್ನು ಶೇ 40ರಷ್ಟು ಹೆಚ್ಚಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ದರ ಏರಿಕೆಗೆ ಕಾರಣಗಳೇನು?

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು (KSRTC, BMTC, NWKRTC, KKRTC) ಪ್ರಾವಿಡೆಂಟ್ ಫಂಡ್, ಡೀಸೆಲ್ ಬಾಕಿ ಮತ್ತು ಗ್ರಾಚ್ಯುಟಿ ಒಳಗೊಂಡಂತೆ ಒಟ್ಟು ₹6,600 ಕೋಟಿಗೂ ಅಧಿಕ ಸಾಲದ ಬಾಧ್ಯತೆ ಹೊಂದಿವೆ. ಜೊತೆಗೆ, ಜುಲೈ 1, 2026 ರಿಂದ ಜಾರಿಗೆ ಬಂದಿರುವ ಶೇ. 12.5 ರಷ್ಟು ಸಿಬ್ಬಂದಿ ವೇತನ ಹೆಚ್ಚಳದಿಂದಾಗಿ ನಿಗಮಗಳಿಗೆ ವಾರ್ಷಿಕವಾಗಿ ₹873.64 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ. ಹಾಗೂ ಡೀಸೆಲ್ ಬೆಲೆಯಲ್ಲಿ ಲಿಟರ್‌ಗೆ ₹7.81 ರಷ್ಟು ಏರಿಕೆಯಾಗಿದ್ದು, ಇಂಧನ ವೆಚ್ಚ ವಾರ್ಷಿಕವಾಗಿ ₹395 ಕೋಟಿ ಹೆಚ್ಚಾಗಿದೆ. ಇದರೊಂದಿಗೆ ಸರ್ಕಾರದಿಂದ ಬರಬೇಕಾದ ಸಬ್ಸಿಡಿ ಮೊತ್ತದಲ್ಲಿ ಇನ್ನೂ ₹5,651 ಕೋಟಿ ಬಾಕಿ ಉಳಿದಿದೆ.

ಹಾಗಾದ್ರೆ, ಸರ್ಕಾರ ಎಷ್ಟು ದರ ಹೆಚ್ಚಿಸಬಹುದು?

ಸಮಿತಿಯು ಶೇ. 25 ರಷ್ಟು ಏರಿಕೆಗೆ ಪ್ರಸ್ತಾಪಿಸಿದ್ದರೂ, ಸಾರ್ವಜನಿಕರ ಮೇಲಿನ ನೇರ ಆರ್ಥಿಕ ಹೊರೆಯನ್ನು ತಗ್ಗಿಸಲು ಸರ್ಕಾರವು ಮಿಲನ ಹಾದಿ ಹಿಡಿಯುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸರ್ಕಾರವು KSRTC, NWKRTC, KKRTC ನಿಗಮದಲ್ಲಿ ಶೇ. 13 ರಿಂದ ಶೇ.15 ಹಾಗೂ BMTCಯಲ್ಲಿ ಶೇ. 17 ರಷ್ಟು ದರ ಹೆಚ್ಚಳದ ಬಗ್ಗೆ ಗಂಭೀರ ಚರ್ಚೆ ನಡೆಸುತಿದೆ ಎನ್ನಲಾಗಿದೆ.

ಹಾಗಾದ್ರೆ, ದರ ಏರಿಕೆ ಯಾವಾಗ ಜಾರಿಯಾಗಬಹುದು?

ದರ ಪರಿಷ್ಕರಣೆ ಸಮಿತಿಯ ಈ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಚುನಾವಣೆ ಮುಗಿದ ಬಳಿಕ ಅಂದರೆ ನವೆಂಬರ್ ಮೊದಲ ವಾರದಲ್ಲಿ ಹೊಸ ಪ್ರಯಾಣ ದರ ಹೆಚ್ಚಳದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ