108 ಆಂಬ್ಯುಲೆನ್ಸ್ ವಾಹನ 
ರಾಜ್ಯ

ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಮುಷ್ಕರ ಭೀತಿ: ತುರ್ತು ಸೇವೆಗೆ ಪರ್ಯಾಯ ಸಿಬ್ಬಂದಿ ಸಜ್ಜುಗೊಳಿಸಿದ ರಾಜ್ಯ ಸರ್ಕಾರ..!

ಅಗತ್ಯವಿದ್ದಲ್ಲಿ ಜಿಲ್ಲಾ ಮಟ್ಟದ ಸಂಸ್ಥೆಗಳ ಮೂಲಕ ಹೆಚ್ಚುವರಿ ಅರ್ಹ ಸಿಬ್ಬಂದಿಯನ್ನೂ ನೇಮಿಸಿಕೊಂಡು ತುರ್ತು ಆಂಬ್ಯುಲೆನ್ಸ್ ಸೇವೆ ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು.

ಬೆಂಗಳೂರು: 108 ಆರೋಗ್ಯ ಕವಚ ತುರ್ತು ಆಂಬ್ಯುಲೆನ್ಸ್ ಸೇವೆಯ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಸೇವೆ ನಿರ್ವಹಿಸುತ್ತಿರುವ ಇಎಂಆರ್‌ಐ ಗ್ರೀನ್ ಹೆಲ್ತ್ ಸರ್ವಿಸಸ್ (EMRI GHS) ಸಂಸ್ಥೆಯು ಸಮರ್ಪಕ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ ಎಂದು ಸರ್ಕಾರ ತಿಳಿಸಿದೆ.

ಶುಕ್ರವಾರ ಹೊರಡಿಸಿದ ಸ್ಪಷ್ಟನೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಹಾಗೂ ನರ್ಸಿಂಗ್ ಸಿಬ್ಬಂದಿಯನ್ನು ನಿಯೋಜಿಸಲಿದೆ ಎಂದು ತಿಳಿಸಿದೆ.

ಅಗತ್ಯವಿದ್ದಲ್ಲಿ ಜಿಲ್ಲಾ ಮಟ್ಟದ ಸಂಸ್ಥೆಗಳ ಮೂಲಕ ಹೆಚ್ಚುವರಿ ಅರ್ಹ ಸಿಬ್ಬಂದಿಯನ್ನೂ ನೇಮಿಸಿಕೊಂಡು ತುರ್ತು ಆಂಬ್ಯುಲೆನ್ಸ್ ಸೇವೆ ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ತುರ್ತು ವೈದ್ಯಕೀಯ ತಂತ್ರಜ್ಞರು (ಇಎಂಟಿ) ಮತ್ತು ಆಂಬ್ಯುಲೆನ್ಸ್ ಚಾಲಕರನ್ನು ಪ್ರತಿನಿಧಿಸುವ ಮೂರು ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿವೆ.

ಪ್ರಸ್ತುತ ಜಾರಿಯಲ್ಲಿರುವ ಎಂಟು ಗಂಟೆಗಳ ಕರ್ತವ್ಯದ ಬದಲಿಗೆ 12 ಗಂಟೆಗಳ ಪಾಳಿಯನ್ನು ಜಾರಿಗೊಳಿಸುವುದು, ಎಲ್ಲ ವಲಯಗಳ ಸಿಬ್ಬಂದಿಗೂ ವಲಯ-1ರ ವೇತನ ಶ್ರೇಣಿ ಅನ್ವಯಿಸುವುದು, ಪಾಳಿಯ ಸಮಯವನ್ನು ಪರಿಷ್ಕರಿಸುವುದು, ಸೇವಾ ಹಿರಿತನದ ಆಧಾರದಲ್ಲಿ ವಾರ್ಷಿಕ ವೇತನ ಹೆಚ್ಚಳ ನೀಡುವುದು ಹಾಗೂ ಕರ್ತವ್ಯವಿಲ್ಲದ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ರಾಂತಿ ಪಡೆಯಲು ಸೌಲಭ್ಯ ಕಲ್ಪಿಸುವುದು ಅವರ ಪ್ರಮುಖ ಬೇಡಿಕೆಗಳಾಗಿವೆ.

2008ರಿಂದ ಸರ್ಕಾರ ಮತ್ತು ಇಎಂಆರ್‌ಐ ಗ್ರೀನ್ ಹೆಲ್ತ್ ಸರ್ವಿಸಸ್ ನಡುವೆ ಒಪ್ಪಂದ ಜಾರಿಯಲ್ಲಿದೆ. ಈ ಒಪ್ಪಂದದ ಪ್ರಕಾರ ಸಿಬ್ಬಂದಿ ನೇಮಕಾತಿ, ನಿಯೋಜನೆ ಮತ್ತು ನಿರ್ವಹಣೆಯ ಜವಾಬ್ದಾರಿ ಸೇವಾ ಪೂರೈಕೆದಾರ ಸಂಸ್ಥೆಯದ್ದಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೀಗಾಗಿ ವೇತನ, ಕೆಲಸದ ಅವಧಿ ಮತ್ತು ಇತರ ಉದ್ಯೋಗ ಸೌಲಭ್ಯಗಳಿಗೆ ಸಂಬಂಧಿಸಿದ ವಿಷಯಗಳು ಸಂಸ್ಥೆಯ ವ್ಯಾಪ್ತಿಗೆ ಬರುತ್ತವೆ ಎಂದು ಇಲಾಖೆ ತಿಳಿಸಿದೆ.

ಸೇವೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಅನ್ವಯವಾಗುವ ನಿಯಮಗಳನ್ನು ಪಾಲಿಸುವಂತೆ ಅಕ್ಟೋಬರ್ 12ರಂದು ಇಎಂಆರ್‌ಐ ಜಿಎಚ್‌ಎಸ್‌ಗೆ ನಿರ್ದೇಶನ ನೀಡಲಾಗಿತ್ತು. ತುರ್ತು ಆಂಬ್ಯುಲೆನ್ಸ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಅಥವಾ ವಿಳಂಬ ಉಂಟಾದರೆ ಕಠಿಣ ಕಾನೂನು ಮತ್ತು ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

BJP ಹಿರಿಯ ನಾಯಕ ಎಲ್‌ಕೆ ಅಡ್ವಾಣಿಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು..!

Sting operation ವಿವಾದ: ‘ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದ ಡಿಕೆಶಿ, ಗೃಹ ಸಚಿವರ ಜೊತೆ ಮಹತ್ವದ ಚರ್ಚೆ, ಪ್ರಿಯಾಂಕ್ ಖರ್ಗೆ ಹೆಗಲಿಗೆ ತನಿಖೆ ಜವಾಬ್ದಾರಿ..!

ಕಾಂಗ್ರೆಸ್‌ನಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು: ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತಳ್ಳಬಾರದಿತ್ತು, ಕೋಟಿ ಕೋಟಿ ಹಣ ಎಲ್ಲಿಂದ ಬಂತು..?

ಸ್ಟಿಂಗ್ ಆಪರೇಷನ್ ವಿಚಾರ ಪ್ರಸ್ತಾಪಿಸಿದ್ದು ಡಿಕೆ.ಶಿವಕುಮಾರ್, ತನಿಖೆಯಾಗದಿದ್ದರೆ ಅವರ ಮೇಲೆಯೇ ಅನುಮಾನ: ಸಂಸದ ಬೊಮ್ಮಾಯಿ