ಬೆಂಗಳೂರಲ್ಲಿ ಸತತ 3 ದಿನ ಮದ್ಯ ಮಾರಾಟ ಬಂದ್ AI Image
ರಾಜ್ಯ

ಬೆಂಗಳೂರಲ್ಲಿ ಸತತ 3 ದಿನ ಮದ್ಯ ಮಾರಾಟ ಬಂದ್: ಹೊಟೇಲ್, ಪಬ್ ಮಾಲೀಕರಿಗೆ ₹500 ಕೋಟಿ ನಷ್ಟದ ಭೀತಿ!

ರಾಜಧಾನಿಯಲ್ಲಿ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆ, 3 ದಿನಗಳ ಕಾಲ ಡ್ರೈ ಡೇ (ಮದ್ಯ ಮಾರಾಟ ನಿಷೇಧ) ಘೋಷಿಸಿರುವ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬಾರ್, ಪಬ್ ಮತ್ತು ಹೋಟೆಲ್ ಉದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರಾಜಧಾನಿಯಲ್ಲಿ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆ, 3 ದಿನಗಳ ಕಾಲ ಡ್ರೈ ಡೇ (ಮದ್ಯ ಮಾರಾಟ ನಿಷೇಧ) ಘೋಷಿಸಿರುವ ಜಿಲ್ಲಾಧಿಕಾರಿಗಳ ಆದೇಶಕ್ಕೆ ಬಾರ್, ಪಬ್ ಮತ್ತು ಹೋಟೆಲ್ ಉದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸುದೀರ್ಘ ನಿಷೇಧದಿಂದಾಗಿ ನಗರದ ಆತಿಥ್ಯ ಉದ್ಯಮಕ್ಕೆ ಸುಮಾರು ₹500 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ಆತಂಕ ವ್ಯಕ್ತಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಡ್ರೈ ಡೇ ಘೋಷಣೆಯಾಗಿರುವ ದಿನಾಂಕಗಳು:

  • ಅಕ್ಟೋಬರ್ 21 ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 23 ರ ಸಂಜೆ 4 ಗಂಟೆಯವರೆಗೆ (ಮತದಾನದ ಹಿನ್ನೆಲೆ).

  • ಅಕ್ಟೋಬರ್ 27 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ (ಮತ ಎಣಿಕೆ ಹಿನ್ನೆಲೆ).

  • ಈ ಆದೇಶವು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ.

 ಉದ್ಯಮಿಗಳಿಂದ ಆಕ್ಷೇಪವ್ಯಾಕೆ?

ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ ಕೇವಲ 20,000 ಆಸುಪಾಸಿನಲ್ಲಿದೆ. ಅದರಲ್ಲಿಯೂ ಸುಮಾರು 15,000 ಮಹಿಳಾ ಮತದಾರರಿದ್ದಾರೆ. ಇಷ್ಟು ಕಡಿಮೆ ಮತದಾರರಿರುವ ಸೀಮಿತ ಚುನಾವಣೆಗೆ ಇಡೀ ನಗರದಾದ್ಯಂತ ವ್ಯಾಪಕವಾಗಿ ಡ್ರೈ ಡೇ ಘೋಷಿಸುವ ಅಗತ್ಯವಿಲ್ಲ ಎಂಬುದು ಉದ್ಯಮಿಗಳ ವಾದವಾಗಿದೆ. ಜೊತೆಗೆ, ಜಿಲ್ಲಾಧಿಕಾರಿಗಳ ಈ ಆದೇಶವು ಕೇವಲ ಮದ್ಯ ಮಾರಾಟಕ್ಕೆ ಮಾತ್ರ ಅನ್ವಯಿಸಿದರೂ, ಜಾರಿಯ ಗೊಂದಲದಿಂದಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಾಮಾನ್ಯ ಆಹಾರ ವಹಿವಾಟು, ಗ್ರಾಹಕರ ಭೇಟಿ ಮತ್ತು ಡೆಲಿವರಿ ಸೇವೆಗಳ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಮತ್ತೊಂದು ವಾದ. ಇದರೊಂದಿಗೆ, ವ್ಯಾಪಾರ ಇಲ್ಲದಿದ್ದರೂ ನೌಕರರ ಸಂಬಳ, ವಿದ್ಯುತ್ ಬಿಲ್ ಹಾಗೂ ವಾರ್ಷಿಕ ಭಾರಿ ಮೊತ್ತದ ಲೈಸೆನ್ಸ್ ಶುಲ್ಕವನ್ನು ಉದ್ಯಮಿಗಳು ಭರಿಸಬೇಕಾಗುತ್ತದೆ. ಇದರಿಂದಾಗಿ ಸರ್ಕಾರದ ಜಿಎಸ್‌ಟಿ ಹಾಗೂ ಅಬಕಾರಿ ಆದಾಯಕ್ಕೂ ನಷ್ಟವಾಗುತ್ತದೆ ಎಂದು ಸಂಘಟನೆಗಳು ತಿಳಿಸಿವೆ.

ಹಾಗಾದ್ರೆ, ಉದ್ಯಮಿಗಳ ಬೇಡಿಕೆ ಏನು?

ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮತ್ತು ಹೋಟೆಲ್ ಉದ್ಯಮದ ಮುಖಂಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಡ್ರೈ ಡೇ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಇಲ್ಲವೇ, ಕೇವಲ ಮದ್ಯದ ಕೌಂಟರ್‌ಗಳನ್ನು ಮಾತ್ರ ಸೀಲ್ ಮಾಡಿ, ಉಳಿದಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಆಹಾರ ಮತ್ತು ಅಲ್ಕೊಹಾಲ್ ರಹಿತ ಪಾನೀಯಗಳ ಮಾರಾಟಕ್ಕೆ ಸಂಪೂರ್ಣ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

BJP ಹಿರಿಯ ನಾಯಕ ಎಲ್‌ಕೆ ಅಡ್ವಾಣಿಗೆ ಅನಾರೋಗ್ಯ; ದೆಹಲಿ ಅಪೋಲೋ ಆಸ್ಪತ್ರೆಗೆ ದಾಖಲು..!

Sting operation ವಿವಾದ: ‘ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ’ ಎಂದ ಡಿಕೆಶಿ, ಗೃಹ ಸಚಿವರ ಜೊತೆ ಮಹತ್ವದ ಚರ್ಚೆ, ಪ್ರಿಯಾಂಕ್ ಖರ್ಗೆ ಹೆಗಲಿಗೆ ತನಿಖೆ ಜವಾಬ್ದಾರಿ..!

ಕಾಂಗ್ರೆಸ್‌ನಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು: ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತಳ್ಳಬಾರದಿತ್ತು, ಕೋಟಿ ಕೋಟಿ ಹಣ ಎಲ್ಲಿಂದ ಬಂತು..?