ಕೆಪಿಎಸ್‌ಸಿ ಕಚೇರಿ Online Desk
ರಾಜ್ಯ

ಕೆಪಿಎಸ್‌ಸಿ ಆಕಾಂಕ್ಷಿಗಳಿಗೆ ಬಿಗ್ ಶಾಕ್: ಹೈಕೋರ್ಟ್ ಆದೇಶ ಬೆನ್ನಲ್ಲೇ ವಿವಿಧ ಹುದ್ದೆಗಳ ನೇಮಕಾತಿಗೆ ಬ್ರೇಕ್

ಹೈಕೋರ್ಟ್ ಇತ್ತೀಚೆಗೆ ಸರ್ಕಾರ ಜಾರಿಗೊಳಿಸಿದ್ದ ಹೆಚ್ಚುವರಿ ಮೀಸಲಾತಿಯನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಈ ಬೆನ್ನಲ್ಲೇ, ಕೆಪಿಎಸ್‌ಸಿ ಮೂಲಕ ನಡೆಯುತ್ತಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಬ್ರೇಕ್ ಬಿದ್ದಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಸರ್ಕಾರ ಜಾರಿಗೊಳಿಸಿದ್ದ ಹೆಚ್ಚುವರಿ ಮೀಸಲಾತಿಯನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಈ ಬೆನ್ನಲ್ಲೇ, ಕರ್ನಾಟಕ ಲೋಕಸೇವಾ ಆಯೋಗವು  ವಿವಿಧ ಇಲಾಖೆಗಳ ಒಟ್ಟು 1,261 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಇದರಿಂದ KPSC ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಗೊಂದಲ ಮೂಡಿದ್ದು, ಸಾವಿರಾರು ಆಕಾಂಕ್ಷಿಗಳಿಗೆ ಬಿಗ್ ಶಾಕ್ ಎದುರಾಗಿದೆ. ಆ ಕುರಿತ ವರದಿ ಇಲ್ಲಿದೆ:

ಎಷ್ಟು ಹುದ್ದೆಗಳ ಮೇಲೆ ಪರಿಣಾಮ ಬೀರಿದೆ?

ಕೆಪಿಎಸ್‌ಸಿ ಒಟ್ಟು 2,610 ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿತ್ತು. ಆ ಪೈಕಿ 1,349 ಹುದ್ದೆಗಳ ಪ್ರಕ್ರಿಯೆ ಪೂರ್ಣವಾಗಿದ್ದು, ಈ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ, ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಕೆಪಿಎಸ್‌ಸಿ ಈಗಾಗಲೇ ಆಯಾ ಇಲಾಖೆಗಳಿಗೆ ಯಶಸ್ವಿಯಾಗಿ ರವಾನಿಸಿದೆ. ಆದರೆ, ಇನ್ನುಳಿದ 1,261 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಸದ್ಯ ವಿವಿಧ ಹಂತಗಳಲ್ಲಿದ್ದು (ತಾತ್ಕಾಲಿಕ ಪಟ್ಟಿ, ದಾಖಲಾತಿ ಪರಿಶೀಲನೆ ಇತ್ಯಾದಿ), ಇವುಗಳನ್ನು ಈಗ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಮುಂದುವರೆದು, ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆಯಾಗಿರುವುದನ್ನು ರದ್ದುಗೊಳಿಸಿರುವುದರಿಂದ, ಹಳೆಯ ಅಧಿಸೂಚನೆಗಳ ಅಡಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಮತ್ತು ಬಾಕಿ ಇರುವ ಆಯ್ಕೆಪಟ್ಟಿಗಳನ್ನು ಹೊಸ ತೀರ್ಪಿಗೆ ಅನುಗುಣವಾಗಿ ಮರುಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೊತೆಗೆ, ಹೈಕೋರ್ಟ್‌ ನೀಡಿರುವ ಈ ಆದೇಶದ ಕಾನೂನು ಪರಿಣಾಮಗಳೇನು ಮತ್ತು ಮುಂದಿನ ಹಂತದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಹೇಗೆ ಮುಂದುವರಿಸಬೇಕು ಎಂಬುದರ ಕುರಿತು KPSC ಸದ್ಯ ರಾಜ್ಯ ಸರ್ಕಾರದಿಂದ ಅಧಿಕೃತ ನಿರ್ದೇಶನ ಹಾಗೂ ಕಾನೂನು ಸಲಹೆಯನ್ನು ಕೋರಿದೆ. ಸರ್ಕಾರದ ಸ್ಪಷ್ಟನೆ ಸಿಗುವವರೆಗೂ ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ.

ಕೆಎಎಸ್‌ ಅಭ್ಯರ್ಥಿಗಳ ಸ್ಥಿತಿ ಏನಾಗಲಿದೆ?

ಮತ್ತೊಂದೆಡೆ, 2024-25ನೇ ಸಾಲಿನ 384 ಕೆಎಎಸ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮತ್ತು ಸಂದರ್ಶನಗಳು ಪೂರ್ಣಗೊಂಡಿದ್ದರೂ ಸಹ, ಹೈಕೋರ್ಟ್‌ನ ವಿಭಾಗೀಯ ಪೀಠದ ಪೂರ್ವ ಅನುಮತಿ ಇಲ್ಲದೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸದಂತೆ ನ್ಯಾಯಾಲಯವು ಆಯೋಗಕ್ಕೆ ನಿರ್ದೇಶನ ನೀಡಿದೆ. ಇದರಿಂದಾಗಿ ಕೆಎಎಸ್‌ ಆಕಾಂಕ್ಷಿಗಳೂ ಸಹ ಅಂತಿಮ ಫಲಿತಾಂಶಕ್ಕಾಗಿ ಕಾಯುವಂತಾಗಿದೆ. ಆದಾಗ್ಯೂ, ಪ್ರಸ್ತುತ ಚಾಲ್ತಿಯಲ್ಲಿರುವ ಹೊಸದಾದ KPSC KAS 2026 ನೇಮಕಾತಿ ಪ್ರಕ್ರಿಯೆಗಳು ಎಂದಿನಂತೆ ಮುಂದುವರಿಯಲಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ, ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ

ತಲಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಪವಿತ್ರ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು..!

Cockroach Janta Partyಗೆ ಕಾಂಗ್ರೆಸ್ ಹಣಕಾಸು ನೆರವು, ಕರ್ನಾಟಕವೇನು ATM ಆಗಿದೆಯೇ..?

ಭಾರತದ ವಿರುದ್ಧದ ಷಡ್ಯಂತ್ರಗಳನ್ನು ಗಂಭೀರವಾಗಿ ಪರಿಗಣಿಸಿ, ವಿದೇಶಿ ಹಣದ ಹರಿವಿಗೆ ಕಡಿವಾಣ ಹಾಕಿ: ಕೇಂದ್ರಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್‌ ಕೇಸ್‌: ಆರೋಪಿಗಳ ಬಂಧನಕ್ಕೆ HDK ಪಟ್ಟು, ವಿಜಯದಶಮಿ ಬಳಿಕ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ..!