ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೂ ಮುನ್ನ ನಡೆಯಬೇಕಿದ್ದ ವಜ್ರಮುಷ್ಠಿ ಕಾಳಗವು ರದ್ದಾಗಿದೆ. ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗ ರದ್ದಾಗಿದ್ದು ಜಟ್ಟಿಗಳು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ನಡೆದೆದೆ ಎನ್ನಲಾಗಿದೆ.
ಮೈಸೂರಿನ ಮಹೇಶ್ ಜಟ್ಟಿ, ಬೆಂಗಳೂರಿನ ಚೇತನ್ ಜಟ್ಟಿ, ಚಾಮರಾಜನಗರದ ಸತೀಶ್ ಜಟ್ಟಿ ಹಾಗೂ ಚನ್ನಪಟ್ಟಣದ ತೇಜಸ್ ನಾಲ್ಕು ಜಟ್ಟಿಗಳು ರಾಜವಂಶಸ್ಥರಾದ ಯದುವೀರರ ಸಮ್ಮುಖದಲ್ಲಿ ಕಾಳಗ ನಡೆಸಲು ಸಿದ್ಧರಾಗಿದ್ದರೂ ಸಮಯದ ಅಭಾವ ಮತ್ತು ವಿಳಂಬದಿಂದಾಗಿ ಈ ಸಂಪ್ರದಾಯ ಸ್ಥಗಿತಗೊಂಡಿದೆ.
ಬೆಳಗ್ಗೆ 8:30 ರಿಂದ 9 ಗಂಟೆಯ ಶುಭ ಮುಹೂರ್ತವಿದ್ದರೂ ಪೊಲೀಸರು ಮತ್ತು ಅರಮನೆ ಆಡಳಿತದ ನಡುವೆ ಸಮನ್ವ ಸಾಧ್ಯವಾಗಲಿಲ್ಲ. ಇನ್ನು ಜಟ್ಟಿಗಳಿಗೆ ಅರಮನೆಗೆ ಪ್ರವೇಶ ನೀಡಲು ಪೊಲೀಸರು ಅಡ್ಡಿಪಡಿಸಿದರು. ಇಬ್ಬರ ನಡುವೆ ವಾಗ್ವಾದದಿಂದ ಸಮಯ ಮೀರಿತು. 9 ಗಂಟೆಯ ನಂತರವಷ್ಟೇ ಜಟ್ಟಿಗಳಿಗೆ ಪ್ರವೇಶ ಸಿಕ್ಕಿತು. ಆದರೆ ಸಿದ್ಧತೆಗೆ ಸಮಯ ಸಿಗದ್ದಿದ್ದರೆ ಜಟ್ಟಿಗಳ ಕಾಳಗವನ್ನು ರದ್ದುಪಡಿಸಲಾಯಿತು. ಇನ್ನು ವಜ್ರಮುಷ್ಠಿ ಕಾಳಗ ರದ್ದಾಗಿದ್ದರಿಂದ ಜಟ್ಟಿಗಳು ಅಸಮಾಧಾನಗೊಂಡರು.