ಪ್ರಿಯಾಂಕಾ ಜಾರಕಿಹೊಳಿ ಮತ್ತು ಗೌತಮ್ ಪಾಟೀಲ್ ವಿವಾಹ ನಿಶ್ಚಿತಾರ್ಥ 
ರಾಜ್ಯ

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ; ರಾಯಚೂರಿನ ಸಿಎ ಜೊತೆ ಎಂಗೇಜ್`ಮೆಂಟ್, ಯಾರು ಈ ಗೌತಮ್ ಪಾಟೀಲ್?

29 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಅವರು ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದರು. ಇದೀಗ ಅವರ ನಿಶ್ಚಿತಾರ್ಥದ ಸುದ್ದಿ ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮ..

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಅವರ ನಿಶ್ಚಿತಾರ್ಥ ಶುಕ್ರವಾರ (ಅಕ್ಟೋಬರ್ 23) ಗೌತಮ್ ಪಾಟೀಲ್ ಅವರೊಂದಿಗೆ ನೆರವೇರಿದೆ.

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳ ಸಾಂಪ್ರದಾಯಿಕ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆಯಿತು.

29 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಅವರು ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದರು. ಇದೀಗ ಅವರ ನಿಶ್ಚಿತಾರ್ಥದ ಸುದ್ದಿ ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ರಾಯಚೂರಿನ ಚಾರ್ಟರ್ಡ್ ಅಕೌಂಟೆಂಟ್, ಯಾರು ಈ ಗೌತಮ್ ಪಾಟೀಲ್?

ಪ್ರಿಯಾಂಕಾ ಜಾರಕಿಹೊಳಿ ಅವರ ಕೈಹಿಡಿಯಲಿರುವ ಗೌತಮ್ ಪಾಟೀಲ್ ಅವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ). ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನವರು ಎಂದು ಹೇಳಲಾಗಿದೆ.

ಗೌತಮ್ ಅವರ ತಂದೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ (ಆರ್‌ಟಿಒ) ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಗೌತಮ್ ಅವರ ಕುಟುಂಬದ ಇತರ ವಿವರಗಳನ್ನು ಜಾರಕಿಹೊಳಿ ಕುಟುಂಬ ಖಾಸಗಿಯಾಗಿಯೇ ಇರಿಸಿದೆ ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ನಿಶ್ಚಿತಾರ್ಥ ಸಮಾರಂಭದಲ್ಲಿ ಜಾರಕಿಹೊಳಿ ಕುಟುಂಬದ ಆಪ್ತರು ಮತ್ತು ಸಂಬಂಧಿಕರು ಮಾತ್ರ ಭಾಗವಹಿಸಿದ್ದರು. ಮದುವೆಯ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಮದುವೆ ಸಮಾರಂಭದೊಂದಿಗೆ ಅದ್ಧೂರಿ ಆರತಕ್ಷತೆಯನ್ನೂ ಆಯೋಜಿಸುವ ಸಾಧ್ಯತೆಯಿದೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

2024ರಲ್ಲಿ ಸಂಸದೆಯಾಗಿ ಆಯ್ಕೆ

ಪ್ರಿಯಾಂಕಾ ಜಾರಕಿಹೊಳಿ ಅವರು ಎಂಬಿಎ ಪದವೀಧರೆ. 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಮೂಲಕ ಕರ್ನಾಟಕದಿಂದ ಸಾಮಾನ್ಯ ವರ್ಗದ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಭೀತಿ: ಒಡಿಶಾದಲ್ಲಿ ಹೈ ಅಲರ್ಟ್, 30 ಜಿಲ್ಲೆಗಳಲ್ಲಿ ಕಟ್ಟೆಚ್ಚರ!

ನನ್ನ ಪರ HDK ಏಕೆ ನಿಲ್ಲಬೇಕು?; 'ಸ್ಟಿಂಗ್ ಆಪರೇಷನ್' ಕಟ್ಟುಕಥೆ, ಬ್ಲ್ಯಾಕ್‌ಮೇಲ್ ಉದ್ದೇಶ; ನಿಷ್ಪಕ್ಷಪಾತ ತನಿಖೆಗೆ ಸಿದ್ದರಾಮಯ್ಯ ಆಗ್ರಹ; Video

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ: ಕೇಂದ್ರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕೊಡೈಕೆನಾಲ್‌ ವೀಕೆಂಡ್ ಟ್ರಿಪ್ ಹೋದವರಿಗೆ ಶಾಕ್: ಭಾರೀ ಮಳೆ, ಪ್ರವಾಹ, ಪ್ರವಾಸಿಗರ ಪರದಾಟ-Video

ತೆಂಗಿನ ಮರದ ಮೇಲೆ ಏರಿ ಚಿರತೆ ವಿಶ್ರಾಂತಿ: ನಾಯಿ, ಮನುಷ್ಯರ ಕಾಟ ತಾಳಲಾರದೇ ಮತ್ತೆ ಕಾಡಿನತ್ತ ಓಟ! Video