ಕೇಂದ್ರ ಸಚಿವ ವಿ. ಸೋಮಣ್ಣ 
ರಾಜ್ಯ

ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನ.1ಕ್ಕೆ ಚಾಲನೆ!

ವಾರದಲ್ಲಿ ಆರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನಿಂದ ಸಂಜೆ 7.50 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.55 ಕ್ಕೆ ಮುಂಬೈ ತಲುಪಲಿದೆ. ಈ ಪ್ರಯಾಣಕ್ಕೆ ಸುಮಾರು 16 ಗಂಟೆ 5 ನಿಮಿಷಗಳು ಬೇಕಾಗುತ್ತವೆ.

ಬೆಂಗಳೂರು: ಭಾರತದ ಎರಡನೇ 'ವಂದೇ ಭಾರತ್ ಸ್ಲೀಪರ್' ರೈಲು ಸೇವೆಯಾದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ನವೆಂಬರ್ 1 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ತಿಳಿಸಿದ್ದಾರೆ.

ಈ ಸೇವೆಯಿಂದಾಗಿ ಎರಡೂ ನಗರಗಳ ನಡುವಿನ ಪ್ರಯಾಣದ ಸಮಯವು ಸುಮಾರು 24 ಗಂಟೆಗಳಿಂದ 16 ಗಂಟೆಗಳಿಗೆ ಇಳಿಕೆಯಾಗಲಿದ್ದು, ಆರು ರಿಂದ ಎಂಟು ಗಂಟೆಗಳಷ್ಟು ಸಮಯ ಉಳಿತಾಯವಾಗಲಿದೆ ಎಂದು ಸೋಮಣ್ಣ ಹೇಳಿದರು. ಈ ರೈಲಿನಲ್ಲಿ 16 ಸಂಪೂರ್ಣ ಹವಾನಿಯಂತ್ರಿತ (AC) ಬೋಗಿಗಳಿದ್ದು, ಒಟ್ಟು 823 ಬರ್ತ್‌ಗಳ (ಮಲಗುವ ವ್ಯವಸ್ಥೆ) ಸೌಲಭ್ಯವಿರುತ್ತದೆ. ಇದು ಎರಡೂ ನಗರಗಳ ನಡುವೆ ರಾತ್ರಿ ಪ್ರಯಾಣಕ್ಕೆ ಅನುಕೂಲ ಒದಗಿಸಲಿದೆ ಎಂದು ಅವರು ವಿವರಿಸಿದರು.

ಈ ರೈಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಚರಿಸಲಿದ್ದು, ವಾರದಲ್ಲಿ ಆರು ದಿನಗಳ ಕಾಲ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನಿಂದ ಸಂಜೆ 7.50 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.55 ಕ್ಕೆ ಮುಂಬೈ ತಲುಪಲಿದೆ. ಈ ಪ್ರಯಾಣಕ್ಕೆ ಸುಮಾರು 16 ಗಂಟೆ 5 ನಿಮಿಷಗಳು ಬೇಕಾಗುತ್ತವೆ.

ಮರಳುವ ಪ್ರಯಾಣದಲ್ಲಿ, ಈ ರೈಲು ಮುಂಬೈನಿಂದ ರಾತ್ರಿ 8.10 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 11.55 ಕ್ಕೆ ಬೆಂಗಳೂರು ತಲುಪಲಿದೆ. ಈ ಪ್ರಯಾಣಕ್ಕೆ ಸುಮಾರು 15 ಗಂಟೆ 45 ನಿಮಿಷಗಳು ತಗಲಲಿವೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಇದು ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ

Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!

ನೀನು ಹುಟ್ಟಿದ ತಕ್ಷಣ ಸೂಟು-ಬೂಟು ಹಾಕಿ ಕಾನ್ವೆಂಟ್ ಗೆ ಕಳ್ಸಿದ್ದು ನಿಮ್ಮಪ್ಪ: ಹರಿದ ಚಡ್ಡಿಯಲ್ಲೇ ಶಾಲೆಗೆ ಹೋಗುತ್ತಿದ್ದ ನನ್ನಂಥ ಬಡವನನ್ನ ಎಂಎಲ್ಎ ಮಾಡಿದ್ದು HDK!