HD ಕುಮಾರಸ್ವಾಮಿ 
ರಾಜ್ಯ

ಮಂಡ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಮಂಜೂರಾತಿ ವಿಳಂಬ: ರಾಜ್ಯ ಸರ್ಕಾರದ ವಿರುದ್ಧ HDK ಅಸಮಾಧಾನ..!

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಪ್ರಸ್ತಾಪಿಸಿರುವ ಈ ಎರಡು ಪರೀಕ್ಷಾ ಕೇಂದ್ರಗಳು ಭಾರತದ ವಾಹನೋದ್ಯಮ ಮತ್ತು ವಿದ್ಯುತ್ ವಾಹನ ಕ್ಷೇತ್ರವನ್ನು ಬಲಪಡಿಸುವ ನಿರೀಕ್ಷೆಯಿದೆ.

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪ್ರಸ್ತಾಪಿಸಿರುವ ಎರಡು ಪ್ರಮುಖ ವಾಹನ ಪರೀಕ್ಷಾ ಕೇಂದ್ರಗಳಿಗೆ ಭೂಮಿ ಮಂಜೂರು ಮಾಡುವಲ್ಲಿ ಉಂಟಾಗಿರುವ 10 ತಿಂಗಳ ಸುದೀರ್ಘ ವಿಳಂಬಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಪ್ರಸ್ತಾವಿತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ನಡೆದ ಹಲವು ಸಭೆಗಳು ಹಾಗೂ ಅಧಿಕೃತ ಪತ್ರ ವ್ಯವಹಾರಗಳನ್ನು ಉಲ್ಲೇಖಿಸಿದ್ದಾರೆ.

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಪ್ರಸ್ತಾಪಿಸಿರುವ ಈ ಎರಡು ಪರೀಕ್ಷಾ ಕೇಂದ್ರಗಳು ಭಾರತದ ವಾಹನೋದ್ಯಮ ಮತ್ತು ವಿದ್ಯುತ್ ವಾಹನ ಕ್ಷೇತ್ರವನ್ನು ಬಲಪಡಿಸುವ ನಿರೀಕ್ಷೆಯಿದೆ. ಜತೆಗೆ ತಾಂತ್ರಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದರೊಂದಿಗೆ ಈ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೂ ನೆರವಾಗಲಿವೆ ಎಂದು ತಿಳಿಸಿದ್ದಾರೆ.

ಯೋಜನೆಗಳ ಕುರಿತು ಹಲವು ಸುತ್ತಿನ ಸಮಾಲೋಚನೆಗಳು, ಸ್ಥಳ ಪರಿಶೀಲನೆಗಳು, ತಾಂತ್ರಿಕ ಮೌಲ್ಯಮಾಪನಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಸಭೆಗಳು ನಡೆದಿದ್ದರೂ, ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಇನ್ನೂ ಭೂಮಿ ಮಂಜೂರು ಮಾಡಿಲ್ಲ ಎಂದು ಗಮನ ಸೆಳೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಎಆರ್‌ಎಐ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಆದಷ್ಟು ಬೇಗ ಮಂಜೂರು ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

ರಾಜ್ಯದಲ್ಲಿ ಭೀಕರ ಬರ: 62,481 ಕೋಟಿ ರೂ. ಬೆಳೆ ನಷ್ಟ, ನೆರವು ಕೋರಿ ಪ್ರಧಾನಿ ಮೋದಿಗೆ DCM ಪರಮೇಶ್ವರ್ ಪತ್ರ

Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!

ನೀನು ಹುಟ್ಟಿದ ತಕ್ಷಣ ಸೂಟು-ಬೂಟು ಹಾಕಿ ಕಾನ್ವೆಂಟ್ ಗೆ ಕಳ್ಸಿದ್ದು ನಿಮ್ಮಪ್ಪ: ಹರಿದ ಚಡ್ಡಿಯಲ್ಲೇ ಶಾಲೆಗೆ ಹೋಗುತ್ತಿದ್ದ ನನ್ನಂಥ ಬಡವನನ್ನ ಎಂಎಲ್ಎ ಮಾಡಿದ್ದು HDK!