ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು 
ರಾಜ್ಯ

CM ಸಭೆಗೂ ಮುನ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು; ಇಬ್ಬರಿಗೆ ಗಾಯ: Video

ಇಂದು ಸುವರ್ಣ ವಿಧಾನಸೌಧಲ್ಲಿ ಕರೆದಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಬಣ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬೆಳಗಾವಿ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತರೊಂದಿಗೆ ಸಭೆ ನಡೆಸುವ ಮುನ್ನವೇ ಬೆಳಗಾವಿಯ ಸುವರ್ಣ ವಿಧಾನಸೌಧಲ್ಲಿ ಸೋಮವಾರ ರೈತರ ಮುಖಂಡರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.

ಇಂದು ಸುವರ್ಣ ವಿಧಾನಸೌಧಲ್ಲಿ ಕರೆದಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಬಣ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಪ್ರತ್ಯೇಕ ಸಭೆ ಆಯೋಜಿಸಲಾಗಿತ್ತು. ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ಮುಗಿಸಿ ಮುಖ್ಯಮಂತ್ರಿ ಯಲ್ಲಮ್ಮನಗುಡ್ಡಕ್ಕೆ ಹೋದರು. ಇತ್ತ ಸಂಜೆ 4 ಗಂಟೆ ಆಗುತ್ತಿದ್ದಂತೆ ರೈತ ಮುಖಂಡರು‌ ಸುವರ್ಣ ಸೌಧದ ಸಭಾಂಗಣಕ್ಕೆ ಆಗಮಿಸಿದರು.

ಸಭೆ ಆರಂಭಕ್ಕೂ ಮುನ್ನ ರೈತ ಮುಖಂಡರು ತಮ್ಮ ಬೇಡಿಕೆ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಚೂನಪ್ಪ ಪೂಜಾರಿ, ನಾವು ಹೋರಾಟ ಮಾಡಿ ಈ ಸಭೆ ಕರೆಯುವಂತೆ ಮಾಡಿದ್ದೇವೆ. ಈ ಸಭೆಯಲ್ಲಿ ಟನ್ ಕಬ್ಬಿಗೆ 4,500 ರೂ. ದರ ನಿಗದಿಗೆ ಒತ್ತಾಯಿಸಲಾಗುವುದು ಎನ್ನುತ್ತಿದ್ದಂತೆ, ಕೋಡಿಹಳ್ಳಿ ಚಂದ್ರಶೇಖರ ಬಣದ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಚೀರಾಟ ಶುರು ಮಾಡಿದರು. 5,500 ಬೆಲೆಗಾಗಿ ಹೋರಾಟ ಮಾಡಿ, ಈಗ 4,500 ಎಂದು ಯಾಕೆ ಹೇಳುತ್ತಿದ್ದಿಯಾ..? ವೇದಿಕೆ‌ ಮೇಲಿಂದ‌ ಕೆಳಗೆ ಇಳಿ ಎಂದು ಗಲಾಟೆ ಆರಂಭಿಸಿದರು.

ಇದಕ್ಕೆ ಚೂನಪ್ಪ ಪೂಜಾರಿ, ನಾನು ಹೇಳಿದ್ದು ಅರ್ಥ ಮಾಡಿಕೊಳ್ಳಿ. ಕಾರ್ಖಾನೆಗಳಿಂದ 4,500 ರೂ., ಕಬ್ಬಿನ ದರ, 1 ಸಾವಿರ ರೂ. ರಾಜ್ಯ ಸರ್ಕಾರದ‌ ಪ್ರೋತ್ಸಾಹ ಧನ. ಎರಡೂ ಸೇರಿ ಟನ್ ಗೆ 5,500 ರೂ. ಆಗುತ್ತದೆ ಅಂತಾ ಪದೇ ಪದೇ ಹೇಳಿದರೂ ಕೋಡಿಹಳ್ಳಿ ಬಣದ ಮುಖಂಡರು ಕೇಳಿಸಿಕೊಳ್ಳದೇ ಗಲಾಟೆ ಮತ್ತಷ್ಟು ಹೆಚ್ಚಿಗೆ ಮಾಡಿದರು.

ನೀನು ಮಾತಾಡುವುದು ಸರಿಯಲ್ಲ ಅಂತಾ ಆರೋಪಿಸಿ ಚೂನಪ್ಪ ಪೂಜಾರಿ ಬಣದ ಕೆಲವರು ಮೈಕ್ ಕಸಿದುಕೊಂಡರು. ಆಗ ಹೋರಾಟಗಾರರ ನಡುವೆ ಗದ್ದಲ ಹೆಚ್ಚಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಚೂನಪ್ಪ, ಎಲ್ಲರನ್ನೂ ಸಮಾಧಾನ ಮಾಡಲು ಯತ್ನಿಸಿದರು. ಆದರೆ, ರೈತರ ಗದ್ದಲದಲ್ಲಿ ಮೈಕಿನ ಮಾತು ಯಾರಿಗೂ ಕೇಳಿಸಲಿಲ್ಲ. ಇದರಿಂದ ಸಭಾಂಗಣ ಕೆಲ ಹೊತ್ತು ಗದ್ದಲದ ಗೂಡಾಯಿತು.

ಮುಂದುವರಿದು ಚೂನಪ್ಪ ಬಣದ ಕೆಲವು ಕಾರ್ಯಕರ್ತರು, ನೀರಿನ ಗಾಜಿನ ಗ್ಲಾಸ್ ಎತ್ತಿ ವಿರೋಧಿಗಳತ್ತ ಎಸೆದರು. ಇಬ್ಬರ ಎದೆಗೆ ಗಾಜಿನ ತುಂಡು ನಾಟಿ ಗಾಯವಾಯಿತು. ಪರಸ್ಪರ ತಳ್ಳಾಟ ನೂಕಾಟ ಶುರು ಆಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಷ್ಟೇ ಮನವಿ ಮಾಡಿದರೂ ಗಲಾಟೆ ಮಾತ್ರ ತಣ್ಣಗಾಗಲಿಲ್ಲ. ಅಷ್ಟೊತ್ತಿಗೆ ಮಧ್ಯಪ್ರವೇಶಿಸಿದ ಪೊಲೀಸರು, ಗದ್ದಲ‌ ಮಾಡುವವರನ್ನು ಸಭಾಂಗಣದಿಂದ ಹೊರಗೊಯ್ದು, ಪರಿಸ್ಥಿತಿ ಹತೋಟಿಗೆ ತಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

100 ಕೋಟಿ ರೂ. ಖಾಸಗಿ ಶಾಲೆಗಳ ಹಗರಣ: ಮಾಜಿ ಶಿಕ್ಷಣ ಸಚಿವ, DMK ನಾಯಕನ ಬಂಧನ!

'ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ...': ರಶ್ಮಿಕಾ ನಂತರ ಟ್ರೋಲ್‌ಗಳಿಗೆ ವಿಜಯ್ ದೇವರಕೊಂಡ ಖಡಕ್ ತಿರುಗೇಟು!

ತಮ್ಮದೇ ಸರ್ಕಾರದ ವಿರುದ್ಧ ಉಗ್ರಪ್ಪ ವಾಗ್ದಾಳಿ: ಪ್ರಧಾನಿ ಮೋದಿ ಮುಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹ

ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ; ಪತ್ತೆಗಾಗಿ ಭಾರತೀಯ ರಾಯಭಾರ ಕಚೇರಿಗೆ ಕುಟುಂಬದ ಮನವಿ

ಬಹುತೇಕ ಮುಸ್ಲಿಮರು ಮಾಜಿ ದಲಿತರು, ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ರಿಜ್ವಾನ್ ಅರ್ಷದ್