ಸಂಗ್ರಹ ಚಿತ್ರ 
ರಾಜ್ಯ

ಕಾಂಗ್ರೆಸ್ ಗೆ ಮುಖಭಂಗ: ಬ್ಯಾಲೆಟ್ ಪೇಪರ್ ಮೂಲಕ ನಡೆದ MLC ಚುನಾವಣೆಯಲ್ಲಿ 4 ಸ್ಥಾನ NDA ತೆಕ್ಕೆಗೆ!

ವಿಧಾನ ಪರಿಷತ್ತಿನ 2 ಪದವೀಧರ, 2 ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು 4 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ NDA ನಾಲ್ಕು ಸ್ಥಾನಗಳ್ಲಲೂ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಶೂನ್ಯ ಸುತ್ತಿದೆ.

ಬೆಂಗಳೂರು: ವಿಧಾನ ಪರಿಷತ್ತಿನ 2 ಪದವೀಧರ, 2 ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು 4 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ NDA ನಾಲ್ಕು ಸ್ಥಾನಗಳ್ಲಲೂ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಶೂನ್ಯ ಸುತ್ತಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ:

ಬಿಜೆಪಿ ಜೆಡಿಎಸ್‌ ಮೈತ್ರಿ (NDA) ಅಭ್ಯರ್ಥಿ ಎ.ಪಿ ರಂಗನಾಥ್ 908 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಐದು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಸೋಲು ಕಂಡಿದ್ದಾರೆ. ಇನ್ನು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ 7239, ಎರಡನೇ ಸುತ್ತಿನಲ್ಲಿ 7311 ಸೇರಿ 14,540 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮತ್ತೂರ್ 12,299 ಮತಗಳನ್ನು ಪಡೆದಿದ್ದು ಸೋಲು ಕಂಡಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ: NDA ಅಭ್ಯರ್ಥಿಗಳು ಮುನ್ನಡೆ

ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 14,001 ಮತಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಂಕನೂರ 6459 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4394 ಮತಗಳನ್ನು ಪಡೆದುಕೊಂಡಿರುತ್ತಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಂಕನೂರ ಎಸ್.ವಿ ಅವರು 2206 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನು ಆಗ್ನೇಯ ಪದವೀಧರರ ಕ್ಷೇತ್ರದಲ್ಲೂ ಬಿಜೆಪಿಯ ಅಭ್ಯರ್ಥಿ ಕೆ.ಎಂ. ಸುರೇಶ್ 6,296 ಮುನ್ನಡೆ ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ 5,174 ಮತ ಪಡೆದು ಹಿನ್ನಡೆಯಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

MLC Election: ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ BJPಯ ಶಶೀಲ್‌ ನಮೋಶಿ ಜಯಭೇರಿ; ಕಾಂಗ್ರೆಸ್‌ನ ಮಟ್ಟೂರುಗೆ ಮುಖಭಂಗ!

ನಡು ರಸ್ತೆಯಲ್ಲೇ ಯುವತಿಯ ಎದೆ ಮುಟ್ಟಿ, ಬಟ್ಟೆ ಎಳೆದ ದುಷ್ಕರ್ಮಿ; ಅಪಹರಣಕ್ಕೆ ಯತ್ನಿಸಿದವನಿಗೆ 'ಧರ್ಮದೇಟು'! Video

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಡಿಸೆಂಬರ್ 7 ರಿಂದ ಕಲಾಪ ಆರಂಭ

'ಯಾವ ರೀತಿಯ ಕ್ರಿಕೆಟ್‌ ಆಡುತ್ತಿದ್ದರೋ ಗೊತ್ತಿಲ್ಲ, 12 ಎಸೆತಗಳಲ್ಲಿ 50 ರನ್‌.. ಖಂಡಿತಾ ಸುಲಭವಲ್ಲ'; ಗುರುವಿನ ಕೊಂಡಾಡಿದ ಅಭಿಷೇಕ್ ಶರ್ಮಾ!

MLC election: BJP-JDS ಮೈತ್ರಿ ಅಭ್ಯರ್ಥಿ ರಂಗನಾಥ್ ಭರ್ಜರಿ ಗೆಲುವು; ಪುಟ್ಟಣ್ಣಗೆ ಹೀನಾಯ ಸೋಲು, ಕಾಂಗ್ರೆಸ್​ಗೆ ಮುಖಭಂಗ!