ಯತೀಂದ್ರ ಸಿದ್ದರಾಮಯ್ಯ 
ರಾಜ್ಯ

'ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ; ರಾಜಮಾತೆ ಪ್ರಮೋದಾ ದೇವಿ ಜತೆ ಮಾತನಾಡುವ ಅಗತ್ಯವೂ ನನಗಿಲ್ಲ': ಯತೀಂದ್ರ ಸಿದ್ದರಾಮಯ್ಯ

ಬೇಕಂತಲೇ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ತಪ್ಪು ಮಾಡಿದ್ದರೆ, ಕ್ಷಮೆ ಕೇಳುತ್ತಿದ್ದೆ. ಆದರೆ ಯಾವುದೇ ತಪ್ಪು ಮಾಡಿಲ್ಲದಿರುವುದರಿಂದ, ನಾನು ಕ್ಷಮೆ ಕೇಳಲ್ಲ ಎಂದರು.

ಮೈಸೂರು: ಮೈಸೂರು ಅರಮನೆಯ ಒಡೆತನದ ಕುರಿತಾದ ತಮ್ಮ ನಿಲುವನ್ನು ಪುನರುಚ್ಚರಿಸಿರುವ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ತಾವು ನೀಡಿದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬುಧವಾರ ತಿಳಿಸಿದ್ದಾರೆ.

ಇತ್ತೀಚೆಗೆ ಮೈಸೂರು ದಸರಾ ಆಚರಣೆಯ ಕುರಿತು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಸಂಬಂಧಿಸಿದಂತೆ, ಅವರ ಕ್ಷಮೆ ಕೋರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಗ್ರಹಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ, ಮೈಸೂರು ಅರಮನೆ ಸರ್ಕಾರದ ಆಸ್ತಿ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಆದಾಗ್ಯೂ, ಕೆಲವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ರಾಜಮನೆತದೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಹಾಗಾಗಿ ನಾನು ಮತ್ತೆ ಅವರೊಂದಿಗೆ ಚರ್ಚಿಸುವ ಅಗತ್ಯವಿಲ್ಲ' ಎಂದರು.

'ಚಿನ್ನದ ಅಂಬಾರಿ ಮತ್ತು ಅರಮನೆಗೆ ಸಂಬಂಧಿಸಿದಂತೆ ನಾನು ಏನನ್ನೂ ತಪ್ಪಾಗಿ ಹೇಳಿಲ್ಲ. 'ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯ್ದೆ'ಯ ಪ್ರಕಾರವೇ ಮಾತನಾಡಿದ್ದೇನೆ. ಆದರೆ, ಕೆಲವರು ಬೇಕಂತಲೇ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಪ್ರಜ್ಞಾಪೂರ್ವಕವಾಗಿಯೇ ಮಾತನಾಡಿದ್ದೇನೆ. ನಾನು ತಪ್ಪು ಮಾಡಿದ್ದರೆ, ಕ್ಷಮೆ ಕೇಳುತ್ತಿದ್ದೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲದಿರುವುದರಿಂದ, ನಾನು ಕ್ಷಮೆ ಕೇಳುವುದಿಲ್ಲ' ಎಂದು ತಿಳಿಸಿದರು.

ಪ್ರಮೋದಾ ದೇವಿ ಒಡೆಯರ್ ಅವರು ಏಳು ದಿನಗಳ ಕಾಲ ದಸರಾ ಆಚರಣೆಯನ್ನು ನಡೆಸಲು ಮತ್ತು ಚಿನ್ನದ ಅಂಬಾರಿಯನ್ನು ಕೊಡುವುದಿಲ್ಲ ಎಂದು ಮಾಧ್ಯಮ ಹೇಳಿಕೆ ನೀಡಿದ್ದರು. ನಾನು ಅದಕ್ಕೆ ಪ್ರತಿಕ್ರಿಯಿಸಿದ್ದೆ ಅಷ್ಟೇ. ಅಂಬಾರಿ ಇಲ್ಲದೆ ದಸರಾ ಜಂಬೂ ಸವಾರಿ ನಡೆಯಲು ಸಾಧ್ಯವಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಮತ್ತು ಈಗ ಇರುವುದು ಜನರ ಸರ್ಕಾರ. ನಾವು ಜನರಿಗಾಗಿಯೇ ದಸರಾವನ್ನು ಆಚರಿಸುತ್ತೇವೆ. ಹೀಗಾಗಿ ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ' ಎಂದು ಅವರು ಹೇಳಿದರು.

ಅಂಬಾರಿ ಇಲ್ಲದೆ ವಿಜಯದಶಮಿ ಆಚರಣೆ ಅಸಾಧ್ಯ. ಅಂಬಾರಿಗಾಗಿ ಸರ್ಕಾರ ಹಣ ನೀಡುತ್ತದೆ. ಈ ಬಗ್ಗೆ ಯಾರಿಗಾದರೂ ದೂರುಗಳಿದ್ದರೆ ನಮ್ಮೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಈ ಘಟನೆ ಮುಂಬರುವ ಚುನಾವಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ಬಿಜೆಪಿಯಿಂದ 'ಮೋದಿ ಎಲ್ಲೂ ಹೋಗಲ್ಲ' ರ‍್ಯಾಪ್ ಸಾಂಗ್ ಬಿಡುಗಡೆ; ಖರ್ಗೆಗೆ ಖಡಕ್ ತಿರುಗೇಟು! Video

ಬೆಂಗಳೂರಿನ ಚಿತ್ರಣವನ್ನೇ ಬದಲಿಸಿದ SIR; ಮತದಾರರ ಸಂಖ್ಯೆ ಶೇ.43ರಷ್ಟು ಇಳಿಕೆ, 1.03 ಕೋಟಿಯಿಂದ 59.08 ಲಕ್ಷಕ್ಕೆ ಕುಸಿತ!

'ಈ ಫಲಿತಾಂಶ ಆಶ್ಚರ್ಯವೇನಲ್ಲ, ಮೋದಿಗೂ ಇದು ಎಚ್ಚರಿಕೆಯ ಸಂಕೇತ': MLC ಚುನಾವಣೆಯಲ್ಲಿ 'ಕೈ' ಶೂನ್ಯ ಸಾಧನೆ ಬಗ್ಗೆ BK ಹರಿಪ್ರಸಾದ್

MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!