ಸಾಂದರ್ಭಿಕ ಚಿತ್ರ  
ರಾಜ್ಯ

ಬೆಂಗಳೂರು: ಆರೇ ಗಂಟೆಯಲ್ಲಿ ಅಪಹರಣ ಪ್ರಕರಣ ಭೇದಿಸಿದ ಪೊಲೀಸರು: ಇಬ್ಬರು ಟೆಕ್ಕಿಗಳ ರಕ್ಷಣೆ, 11 ಮಂದಿ ಬಂಧನ

ದೂರು ದಾಖಲಾದ ಕೂಡಲೇ ಮಾರತಹಳ್ಳಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಪುನೀತ್‌ ಬಿ.ಎನ್‌. ನೇತೃತ್ವದಲ್ಲಿ ಹುಡುಕಾಟಕ್ಕೆ ವಿಶೇಷ ತಂಡ ರಚಿಸಲಾಯಿತು. ತಂಡವು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುವುದರ ಜತೆಗೆ ವಿವಿಧ ಸ್ಥಳಗಳಲ್ಲಿ ತಾಂತ್ರಿಕ ವಿಧಾನಗಳ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು.

ಬೆಂಗಳೂರು: ಅಪಹರಣ ಪ್ರಕರಣ ದಾಖಲಾದ ಕೇವಲ ಆರು ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು, ಇಬ್ಬರು ಸಾಫ್ಟ್‌ವೇರ್‌ ಉದ್ಯೋಗಿಗಳನ್ನು ರಕ್ಷಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ ವಿಭಾಗದಲ್ಲಿ 11 ಮಂದಿಯನ್ನು ಬಂಧಿಸಿದ್ದಾರೆ.

ಆದರೆ, ಪ್ರಕರಣವು ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಅಪಹರಣದಿಂದ ರಕ್ಷಿಸಲ್ಪಟ್ಟ ಪ್ರಮುಖ ಸಂತ್ರಸ್ತನ ವಿರುದ್ಧವೇ ಅಪಹರಣ ಪ್ರಕರಣದ ಮಹಿಳಾ ಆರೋಪಿಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.

ಆರಂಭದಲ್ಲಿ ಪ್ರತೀಕಾರದ ಉದ್ದೇಶದಿಂದ ಅಪಹರಣ ನಡೆಸಲಾಗಿದ್ದು, ಬಳಿಕ ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನಡೆದ ಘಟನೆಯೇನು?

ನಿನ್ನೆ ಈ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ನಿವಾಸಿ ರಮಣ ಎಂಬುವರು ಮಾರತಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಬೆಂಗಳೂರಿನ ಮಾರತಹಳ್ಳಿ ಪ್ರದೇಶದಲ್ಲಿ ವಾಸವಾಗಿರುವ ತಮ್ಮ ಪುತ್ರ ಬಿ. ಮಹೇಂದ್ರ (23ವ) ಹಾಗೂ ಆತನ ರೂಮ್‌ಮೇಟ್‌ ಯೆರಿಬೋಯಿನ ತರುಣ್‌ (23ವ) ಅವರನ್ನು ನಿನ್ನೆ ನಸುಕಿನ 2.50ರಿಂದ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಅಪಹರಿಸಲಾಗಿದೆ ಎಂದು ದೂರು ನೀಡಿದ್ದರು. ಇಬ್ಬರೂ ಸಾಫ್ಟ್‌ವೇರ್‌ ಉದ್ಯೋಗಿಗಳಾಗಿದ್ದಾರೆ.

ದೂರು ದಾಖಲಾದ ಕೂಡಲೇ ಮಾರತಹಳ್ಳಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಪುನೀತ್‌ ಬಿ.ಎನ್‌. ನೇತೃತ್ವದಲ್ಲಿ ಹುಡುಕಾಟಕ್ಕೆ ವಿಶೇಷ ತಂಡ ರಚಿಸಲಾಯಿತು. ತಂಡವು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುವುದರ ಜತೆಗೆ ವಿವಿಧ ಸ್ಥಳಗಳಲ್ಲಿ ತಾಂತ್ರಿಕ ವಿಧಾನಗಳ ಮೂಲಕ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತು.

ಕೇವಲ ಆರು ಗಂಟೆಗಳಲ್ಲಿ ಅಪಹರಣಕಾರರ ಜಾಡು ಪತ್ತೆಹಚ್ಚಿದ ಪೊಲೀಸರು, ಇಬ್ಬರೂ ಸಂತ್ರಸ್ತರನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಿದರು. ಅಪಹರಣದಲ್ಲಿ ಭಾಗಿಯಾಗಿದ್ದ 11 ಮಂದಿ ಆರೋಪಿಗಳನ್ನು ಬಂಧಿಸಿದರು.

ಬಂಧಿತ ಆರೋಪಿಗಳ ವಿವರ

ಗಾಲೇಟಿ ರಾಜಕುಮಾರ್‌ ಅಲಿಯಾಸ್‌ ರಾಜ್‌ (24), 21 ವರ್ಷದ ಮಹಿಳೆ, ಮರ್ರಿಪಾಟಿ ಮಂಜುನಾಥ್‌ ಅಲಿಯಾಸ್‌ ಮಂಜು (23), ಚಿನಿಗೆಪಲ್ಲಿ ಲೋಕನಾಥ್‌ (22), ಬಂಡ್ಲಪಲ್ಲಿ ಸುಹೇಲ್‌ (22), ಗಂಗಾರೆಡ್ಡಿಗಾರಿ ನರೇಂದ್ರ ರೆಡ್ಡಿ (22), ಶಿವ ಸುಬ್ರಮಣ್ಯಂ (24), ಸಲೀಂ ಪಾಷಾ (30), ನಯೀಂ ಪಾಷಾ (31), ಶಾಬಾಜ್‌ (26) ಹಾಗೂ ಗಾಲಿ ರಾಜೇಶ್‌ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಆರೋಪದಿಂದ ಪ್ರಕರಣಕ್ಕೆ ತಿರುವು

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಅಪಹರಣ ಪ್ರಕರಣದಲ್ಲಿ ಬಂಧಿತಳಾಗಿರುವ 21 ವರ್ಷದ ಮಹಿಳೆ ಮೇಲೆ ಮಹೇಂದ್ರ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಬೆಳಕಿಗೆ ಬಂದಿದೆ.

ಅಕ್ಟೋಬರ್‌ 24ರ ಶನಿವಾರ ನಸುಕಿನ ಜಾವ 1.30ರಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಮಹೇಂದ್ರ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಘಟನೆ ನಡೆದ ತಕ್ಷಣ ಪೊಲೀಸರಿಗೆ ದೂರು ನೀಡುವ ಬದಲು, ಆರೋಪಿಗಳು ಒಟ್ಟಾಗಿ ಸೇರಿ ಮಹೇಂದ್ರನನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಅಪಹರಣದ ಉದ್ದೇಶದ ಕುರಿತು ಸ್ಪಷ್ಟನೆ ನೀಡಿದ ವೈಟ್‌ಫೀಲ್ಡ್‌ ವಿಭಾಗದ ಪೊಲೀಸ್‌ ಉಪ ಆಯುಕ್ತ ಸೈದುಲು ಅದಾವತ್‌, ‘ಇದು ಪ್ರತೀಕಾರದ ಉದ್ದೇಶದಿಂದ ನಡೆದ ಅಪಹರಣವಾಗಿದೆ. ಅಪಹರಣದ ಬಳಿಕ ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಹಿಳೆ ಆರಂಭದಲ್ಲಿ ಅತ್ಯಾಚಾರ ಕುರಿತು ದೂರು ನೀಡಿರಲಿಲ್ಲ’ ಎಂದು ತಿಳಿಸಿದ್ದಾರೆ.

ಅಪಹರಣಕ್ಕೊಳಗಾದವರನ್ನು ರಕ್ಷಿಸಿದ ಬಳಿಕ ಮಹಿಳೆ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಮಾರತಹಳ್ಳಿ ಪೊಲೀಸರು ಪ್ರತ್ಯೇಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಮಹೇಂದ್ರ ಹಾಗೂ ತರುಣ್‌ ಇಬ್ಬರನ್ನೂ ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ವಿರುದ್ಧ ಇಂಡಿಯಾ ಒಕ್ಕೂಟದಿಂದ ಸಾರ್ವಜನಿಕ ದೋಷಾರೋಪಣೆ: ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ!

KPSC: ರಾಜ್ಯ ಸರ್ಕಾರಕ್ಕೆ ಭಾರಿ ಶಾಕ್; ಸುಪ್ರೀಂ ನಲ್ಲಿ 2022 ರ ವಿಶೇಷ ಕಾಯ್ದೆ ರದ್ದು! 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು!

ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

Israel polls: ಅರಬ್ ಪಾರ್ಟಿಗಳೇ 'ಕಿಂಗ್ ಮೇಕರ್' ಆಗೋ ಸಾಧ್ಯತೆ; ಅಧಿಕಾರದಿಂದ ನೆತನ್ಯಾಹು ಕಿತ್ತೆಸೆಯಲು ಪ್ಲಾನ್!

ಇಸ್ರೇಲ್ ಚುನಾವಣೆ ಫಲಿತಾಂಶ: ಬಹುಮತ ಪಡೆಯುವಲ್ಲಿ ನೆತನ್ಯಾಹು, ಗಾಡಿ ಐಸೆನ್‌ಕೋಟ್‌ ವಿಫಲ, ಮೈತ್ರಿ ಅಗತ್ಯ!