ಬಮೂಲ್ ಸಭೆಯಲ್ಲಿ ಡಿಕೆ ಸುರೇಶ್ ಸಭೆ 
ರಾಜ್ಯ

'ಇತಿಹಾಸದಲ್ಲೇ ಮೊದಲು.. ರೈತರಿಗೆ 7 ರೂಪಾಯಿ ಹಾಲಿನ ಖರೀದಿ ದರ ಹೆಚ್ಚಳ': ಹಾಲು ದರ ಏರಿಕೆಗೆ DK ಸುರೇಶ್ ಸಮರ್ಥನೆ!

ಈ ನಡುವೆ ಸರ್ಕಾರದ ನಿರ್ಧಾರದ ದರ ಏರಿಕೆ ಕುರಿತು ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ ಈ ಕುರಿತು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿ ನಿಲುವು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಹಾಲು ದರ ಏರಿಕೆ ವಿಚಾರವಾಗಿ ಬಮೂಲ್ ಅಧ್ಯಕ್ಷ DK ಸುರೇಶ್ ಸಮರ್ಥನೆ ನೀಡಿದ್ದು, ರೈತರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ನಂದಿನಿ ಬ್ರ್ಯಾಂಡ್ ಹಾಲಿನ ದರವನ್ನು ಪ್ರತಿ ಲೀಟರ್ ಗೆ 8 ರೂಪಾಯಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಸರ್ಕಾರವನ್ನು ಟೀಕಿಸುತ್ತಿವೆ.

ಈ ನಡುವೆ ಸರ್ಕಾರದ ನಿರ್ಧಾರದ ದರ ಏರಿಕೆ ಕುರಿತು ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ ಈ ಕುರಿತು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿ ನಿಲುವು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಡಿಕೆ ಸುರೇಶ್, 'ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪ್ರತಿ ಲೀಟರ್ ಹಾಲಿಗೆ ರೈತರಿಗೆ 7 ರೂಪಾಯಿ ಹಾಲಿನ ಖರೀದಿ ದರ ಹೆಚ್ಚಳ ಮತ್ತು ಎಂಆರ್‌ಪಿ ದರದಲ್ಲಿ ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಕುರಿತು ಬಮೂಲ್‌ ಕಚೇರಿಯಲ್ಲಿಂದು ʻನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರದ ಪರಿಷ್ಕರಣೆʼ ಬಗ್ಗೆ ಸಭೆ ನಡೆಸಿ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು' ಎಂದು ಹೇಳಿದ್ದಾರೆ.

ಅಂತೆಯೇ ಬರಗಾಲ, ಮೇವಿನ ಕೊರತೆ, ಉತ್ಪಾದನಾ ವೆಚ್ಚದ ಹೆಚ್ಚಳ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಹೈನುಗಾರರಿಗೆ ನೆರವಾಗುವುದು ಈ ದರ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ. ಇನ್ನು ಇತರೆ ಹಾಲಿನ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ನಮ್ಮ ನಂದಿನಿಯೇ ಅಗ್ಗವಿದೆ.

ರೈತರ ಆದಾಯಕ್ಕೆ ಬಲ ತುಂಬುವುದರ ಜೊತೆಗೆ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ನಂದಿನಿ ಉತ್ಪನ್ನಗಳು ಲಭ್ಯವಾಗುವಂತೆ ಸಮತೋಲನ ಕಾಯ್ದುಕೊಳ್ಳಲಾಗಿದೆ. ಹಾಲಿನ ದರ ಹೆಚ್ಚಳದಿಂದ ರಾಜ್ಯದ 11 ಲಕ್ಷ ರೈತರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಡಿಕೆ ಸುರೇಶ್ ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಸಭೆಯಲ್ಲಿ ಕೆಎಂಎಫ್‌ ಆಡಳಿತಾಧಿಕಾರಿಗಳಾದ ಶ್ರೀ ಎಂ.ವಿ. ವೆಂಕಟೇಶ್, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ವೈ ನಂಜೇಗೌಡ ಸೇರಿದಂತೆ ಬಮೂಲ್‌ ನಿರ್ದೇಶಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Uttarakhand helicopter crash: ಹೆಲಿಕಾಪ್ಟರ್ ಛಿದ್ರ; ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆ!

wrestling championship: ಇತಿಹಾಸ ಬರೆದ ಮನಿಷಾ ಭಾನ್ವಾಲಾ, ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ

‘ನಿಲುವು ತೆಗೆದುಕೊಂಡು ನನ್ನ ವೃತ್ತಿಜೀವನವನ್ನೇ ಹಾಳು ಮಾಡಿಕೊಂಡೆ': ಇನ್‌ಫ್ಲುಯೆನ್ಸರ್‌ಗಳ ವಿರುದ್ಧ Swara Bhasker ಕಿಡಿ

ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ'; ನವೆಂಬರ್ 19ಕ್ಕೆ ಪ್ರದಾನ; ನಟ ರಜನಿಕಾಂತ್ ಕರೆಸಲು ಚಿಂತನೆ!

'ಆರಾಮಾಗಿ ಮಲಗಿ, ಇನ್ನೂ 15–20 ವರ್ಷ BJP ಅಧಿಕಾರದಲ್ಲಿರುತ್ತದೆ, ಆಮೇಲೆ ನೋಡೋಣ': ಮಮತಾ ಕಾಲೆಳೆದ ನಟ Mithun Chakraborty