ನಟ ದರ್ಶನ್  
ರಾಜ್ಯ

ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿಯಾಗಲು ಪ್ರದೋಷ್‌ಗೆ ಅನುಮತಿ; ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್!

ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಅಂಗೀಕರಿಸಿದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ-ಆರೋಪಿ ಪ್ರದೋಷ್‌ಗೆ ಮಾಫಿ ಸಾಕ್ಷಿಯಾಗಲು ಅನುಮತಿ ನೀಡಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿ ನಟ ದರ್ಶನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಅಂಗೀಕರಿಸಿದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿಯ ವಿಚಾರಣೆ ಬುಧವಾರ ನಿಗದಿಯಾಗಿದೆ ಎಂದು ಉಲ್ಲೇಖಿಸಿ ನಟನ ಪರ ವಕೀಲರು ಮಂಗಳವಾರ ತುರ್ತು ವಿಚಾರಣೆ ಕೋರಿದರು.

ಆದರೆ, ತಕ್ಷಣದ ವಿಚಾರಣೆಗೆ ಮಾಡಿದ ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್, ಅರ್ಜಿಯನ್ನು ಬುಧವಾರಕ್ಕೆ ಮುಂದೂಡಿತು.

ಪ್ರದೋಷ್ ಅವರು ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದನ್ನು ವಿಚಾರಣಾ ನ್ಯಾಯಾಲಯವು ಈ ಹಿಂದೆ ಒಪ್ಪಿಕೊಂಡಿತ್ತು ಮತ್ತು ಸದ್ಯ ಅವರ ಸಾಕ್ಷ್ಯದ ಪರೀಕ್ಷೆಯನ್ನು ನಡೆಸುತ್ತಿದೆ.

ದರ್ಶನ್ ಅಭಿಮಾನಿಯಾಗಿದ್ದ ಚಿತ್ರದುರ್ಗದ ನಿವಾಸಿ 33 ವರ್ಷದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಅವರ ಶವವು ಜೂನ್ 9, 2024 ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಪತ್ತೆಯಾಗಿತ್ತು.

ಇದಕ್ಕೂ ಮೊದಲು, ಪ್ರದೋಷ್ ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ (CCH-59) ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 307ರ ಅಡಿಯಲ್ಲಿ 11 ಪುಟಗಳ ಅರ್ಜಿ ಸಲ್ಲಿಸಿದರು. ಅರ್ಜಿಯಲ್ಲಿ, ಆಪಾದಿತ ಕೊಲೆ, ಸಾಕ್ಷ್ಯಗಳ ವಿಲೇವಾರಿ ಮತ್ತು ಎಲ್ಲ ಸಹ-ಆರೋಪಿಗಳ ಪಾತ್ರಗಳ ಬಗ್ಗೆ 'ಪೂರ್ಣ ಮತ್ತು ಸತ್ಯ'ವನ್ನು ಹೇಳುವುದಾಗಿ ಪ್ರಸ್ತಾಪಿಸಿದರು.

ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರಸನ್ನ ಪಿ. ಕುಮಾರ್ ಅವರು ಪ್ರದೋಷ್ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಪ್ರಾಸಿಕ್ಯೂಷನ್ ಒಪ್ಪಿಗೆ ನೀಡುತ್ತಾ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದರು. ಪ್ರದೋಷ್ ಎಲ್ಲ ಕಾನೂನು ನಿಯಮಗಳನ್ನು ಪಾಲಿಸಿದರೆ ಮತ್ತು ಸಂಪೂರ್ಣ ತಪ್ಪೊಪ್ಪಿಗೆ ನೀಡಿದರೆ ಕ್ಷಮಾದಾನ ನೀಡಬಹುದು ಎಂದು ಎಸ್‌ಪಿಪಿ ಹೇಳಿದರು.

ತಮ್ಮ ಅರ್ಜಿಯಲ್ಲಿ ಪ್ರದೋಷ್, ದರ್ಶನ್ ಮತ್ತು ಇತರ ಸಹ-ಆರೋಪಿಗಳಿಂದ ದೂರವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರತ್ಯೇಕ ಸೆಲ್‌ಗೆ ಸ್ಥಳಾಂತರಿಸಬೇಕೆಂದು ಮತ್ತು ಅವರೊಂದಿಗೆ ಇದ್ದರೆ ಬೆದರಿಕೆ ಮತ್ತು ಒತ್ತಡದ ಭಯವಿದೆ ಎಂದು ವಿನಂತಿಸಿದ್ದರು.

ವಿಚಾರಣೆ ಸಮಯದಲ್ಲಿ, ಸಹ-ಆರೋಪಿ ರವಿಶಂಕರ್ (ಆರೋಪಿ ಸಂಖ್ಯೆ 8) ಮತ್ತು ವಿನಯ್ (ಆರೋಪಿ ಸಂಖ್ಯೆ 10) ಅವರ ವಕೀಲರು ತಮ್ಮ ಕಕ್ಷಿದಾರರು ಸಹ ಮಾಫಿ ಸಾಕ್ಷಿಯಾಗಲು ಅನುಮತಿ ಕೋರಿ ಅರ್ಜಿಗಳನ್ನು ಸಲ್ಲಿಸಲು ಉದ್ದೇಶಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ದರ್ಶನ್ ಪರ ಹಾಜರಾದ ಹಿರಿಯ ವಕೀಲ ಹಶ್ಮತ್ ಪಾಷಾ ಅರ್ಜಿಯನ್ನು ಬಲವಾಗಿ ವಿರೋಧಿಸಿದರು. ಪ್ರತಿವಾದಿಗಳಿಗೆ ಅರ್ಜಿಯ ಪ್ರತಿಗಳನ್ನು ನೀಡಿಲ್ಲ. ಸರಿಯಾದ ಕಾರ್ಯವಿಧಾನ ಅನುಸರಿಸದೆ ಮತ್ತು ಹೇಳಿಕೆಗಳನ್ನು ಸರಿಯಾಗಿ ದಾಖಲಿಸದೆ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು.

ಎಲ್ಲಾ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಪ್ರದೋಷ್ ಅವರ ಅರ್ಜಿ ಮೇಲಿನ ಆದೇಶವನ್ನು ಕಾಯ್ದಿರಿಸಿತು, ನಂತರ ಅದನ್ನು ಪ್ರಕಟಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ: ಓರ್ವ ಭಾರತೀಯ ಸೇರಿ 12 ಮಂದಿ ಸಾವು..!

ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್? ಈ ಎರಡು ದಿನ ನಗರದಲ್ಲಿ ನಾನ್‌ವೆಜ್ ಸಿಗೋದು ಡೌಟ್! ಯಾಕೆ ಗೊತ್ತಾ?

ನೇಪಾಳ ಜಲಪ್ರಳಯ: 7ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸಾವಿನ ಸಂಖ್ಯೆ 1,003ಕ್ಕೆ ಏರಿಕೆ, ಇನ್ನೂ ಸಿಗದ 3,916 ಜನರ ಸುಳಿವು..!

‘ದೇಶ ಸಂತಸದಿಂದ ತುಂಬಿದೆ, ಆದರೆ ಕೆಲವರು ಸುಳ್ಳು ಹೇಳಿ ಜನರಲ್ಲಿ ನಿರಾಶೆ ಮೂಡಿಸಲು ಯತ್ನಿಸುತ್ತಿದ್ದಾರೆ': ವಿಡಿಯೊ ಮೂಲಕ ಪ್ರಧಾನಿ ಮೋದಿ ಹೇಳಿದ್ದೇನು? ; Video

ಸುಮ್ಮನೆ ಬಿಡಲ್ಲ, ಇರಾನ್‌ಗೆ ತಕ್ಕ ಶಾಸ್ತಿ: ಟ್ರಂಪ್ ಕಠಿಣ ಎಚ್ಚರಿಕೆ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಯುದ್ಧಾತಂಕ..!