ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ 
ರಾಜ್ಯ

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಚೆನ್ನೈನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್‌ ಪ್ಯಾಡ್‌ನಿಂದ, 51.7 ಮೀಟರ್‌ ಎತ್ತರದ ರಾಕೆಟ್ ಅನ್ನು ಶುಕ್ರವಾರ ನಸುಕಿನ 2.55ಕ್ಕೆ ಉಡಾವಣೆ ಮಾಡಲಾಗಿದೆ.

ಶ್ರೀಹರಿಕೋಟಾ: ಭೂಸ್ಥಿರ ಕಕ್ಷೆಯಿಂದ ಚಿತ್ರಗಳನ್ನು ಸೆರೆಹಿಡಿಯುವ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.‌‌‌ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಭೂ ವೀಕ್ಷಣಾ ಉಪಗ್ರಹ EOS-05 ಅನ್ನು ಹೊತ್ತ GSLV-F17 ರಾಕೆಟ್ ಶುಕ್ರವಾರ (ಮಧ್ಯರಾತ್ರಿ 2:55ರ ಸುಮಾರಿಗೆ) ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಉಡಾವಣೆ ನಡೆಸಿದೆ.

ಈ ಮೂಲಕ ಇಸ್ರೋ ಭಾರತದ ಮೊಟ್ಟಮೊದಲು EOS-05 ಇಮೇಜಿಂಗ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಚೆನ್ನೈನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್‌ ಪ್ಯಾಡ್‌ನಿಂದ, 51.7 ಮೀಟರ್‌ ಎತ್ತರದ ರಾಕೆಟ್ ಅನ್ನು ಶುಕ್ರವಾರ ನಸುಕಿನ 2.55ಕ್ಕೆ ಉಡಾವಣೆ ಮಾಡಲಾಗಿದೆ. ಇದನ್ನು ‘ಜಿಎಸ್‌ಎಲ್‌ವಿ–ಎಫ್‌17/ಇಒಎಸ್–05 ಮಿಷನ್‌’ ಎಂದು ಹೆಸರಿಸಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನೀಡಿದ ಮಾಹಿತಿಯಂತೆ, ಈ ಇಒಎಸ್–05 ಮಿಷನ್‌ ಅತ್ಯಾಧುನಿಕ ತಂತ್ರಜ್ಞಾನದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಜಿಯೋಸಿಂಕ್ರೋನಸ್ (Geosynchronous) ಕಕ್ಷೆಯಿಂದ ಭೂಮಿಯ ಚಿತ್ರಣಗಳನ್ನು ಸೆರೆಹಿಡಿಯಲಿರುವ ಭಾರತದ ಪ್ರಥಮ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಳೆಯ ನಡುವೆಯೂ ನಿಗದಿತ ಸಮಯಕ್ಕೆ ಯಶಸ್ವಿಯಾಗಿ ರಾಕೆಟ್ ಆಕಾಶಕ್ಕೆ ಚಿಮ್ಮಿತು. ಜಿಎಸ್‌ಎಲ್‌ವಿ ರಾಕೆಟ್‌ ಮೂಲಕ ನಡೆಸಲಾಗುತ್ತಿರುವ 19ನೇ ಉಡಾವಣೆ ಇದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೊ ಅಧ್ಯಕ್ಷ ಡಾ. ವಿ ನಾರಾಯಣನ್, ‘ಜಿಎಸ್‌ಎಲ್‌ವಿ–ಎಫ್‌17/ಇಒಎಸ್–05 ಮಿಷನ್‌’ ಯಶಸ್ವಿಯಾಗಿದೆ. ಉಪಗ್ರಹವು ನಿಖರವಾಗಿ ಉದ್ದೇಶಿತ ಕಕ್ಷೆ ಸೇರಿಸಿದೆ. ಈ ವಿಚಾರವನ್ನು ಘೋಷಿಸಲು ನನಗೆ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ರಾಕೆಟ್‌ ಕಾರ್ಯಚರಣೆಯ ಕುರಿತು ಇಸ್ರೋದ GSLV-F15 ರಾಕೆಟ್ ಕಾರ್ಯಾಚರಣೆಯ ಮಿಷನ್ ನಿರ್ದೇಶಕ ಥಾಮಸ್ ಕುರಿಯನ್ ಮಾಹಿತಿ ನೀಡಿದ್ದು ಇದು GSLV ನಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಇದು ನಮಗೆಲ್ಲರಿಗೂ ಬಹಳ ಹೆಮ್ಮೆ ಮತ್ತು ಸಂತೋಷದ ಕ್ಷಣ. ಈ ಬಾರಿ EOS-05 ಉಪಗ್ರಹವನ್ನು ಹೊತ್ತು ಉಡಾವಣೆಯಾಗುವ ಮೂಲಕ GSLV ರಾಕೆಟ್‌ ತನ್ನ 19ನೇ ಕಾರ್ಯಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ EOS-05‌ ಉಪಗ್ರಹವು ಅನನ್ಯವಾಗಿ ಕಾನ್ಫಿಗರ್ ಮಾಡಲಾದ ಭೂ ವೀಕ್ಷಣಾ ಉಪಗ್ರಹವಾಗಿದ್ದು, ನೈಜ-ಸಮಯದ ಚಿತ್ರಣವನ್ನು ಹೊಂದಿದೆ. ಇದು GSLV ಯಿಂದ GTO ಅಥವಾ ಸಬ್-GTO ಕಕ್ಷೆಗೆ ಉಡಾಯಿಸಲ್ಪಟ್ಟ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಈ ಉಡಾವಣೆಗೆ ಕೇವಲ ಕೆಲವೇ ನಿಮಿಷಗಳ ಸಮಯ ಬೇಕಾಯಿತು. ಆದರೆ, ಈ ಕೆಲವು ನಿಮಿಷಗಳ ಉಡಾವಣೆಯ ಹಿಂದೆ ತಿಂಗಳುಗಳು ಮತ್ತು ವರ್ಷಗಳ ಕಠಿಣ ಪ್ರಯತ್ನವಿದೆ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ

ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಪ್ರಕಾಶ ನಿಕ್ಕಂ ಅಧಿಕಾರ ಸ್ವೀಕಾರ

ತೈಲ ಖರೀದಿಸುವುದು ಅಥವಾ ಖರೀದಿಸದಿರುವುದು ಉಕ್ರೇನ್ ಯುದ್ಧವನ್ನು ಪರಿಹರಿಸುವುದಿಲ್ಲ: ಕೈವ್‌ನಲ್ಲಿ ರಾಜತಾಂತ್ರಿಕತೆಗೆ EAM ಜೈಶಂಕರ್ ಕರೆ

3 ದಿನಗಳ ವಿಧಾನಮಂಡಲ ಅಧಿವೇಶನ: ಬರ, ಕಸ್ತೂರಿ ರಂಗನ್ ವರದಿ ಬಗ್ಗೆ ಮಹತ್ವದ ಚರ್ಚೆ

ಸತತ ನಷ್ಟದಿಂದ ಚೇತರಿಕೆ ಕಂಡ ಚಿನ್ನದ ಬೆಲೆ, ಈಗ 10 ಗ್ರಾಂ ದರ ಎಷ್ಟು ಗೊತ್ತಾ?