ಬಳ್ಳಾರಿ: ಕರ್ನಾಟಕದ ಎರಡು ಇತಿಹಾಸಪೂರ್ವ ತಾಣಗಳಾದ ಯಾದಗಿರಿ ಜಿಲ್ಲೆಯ ಇಸ್ಲಾಂಪುರ ಮತ್ತು ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ತಾಣಗಳು ಇನ್ನು ಮುಂದೆ ವಿದ್ಯಾರ್ಥಿಗಳ ಅಧ್ಯಯನ ಪಾಠವಾಗಲಿದೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಈ ತಾಣಗಳನ್ನು ತನ್ನ ಪಠ್ಯಕ್ರಮದಲ್ಲಿ ಸೇರಿಸಿದೆ.
9ನೇ ತರಗತಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿರುವ ‘Early humans and beginning of civilisation’ ಎಂಬ ಅಧ್ಯಾಯದಲ್ಲಿ ಈ ತಾಣಗಳನ್ನು ಸೇರಿಸಲಾಗಿದೆ.
ಅಧ್ಯಯನದ ಭಾಗವಾಗಿ ವಿದ್ಯಾರ್ಥಿಗಳಿಗೆ ಮಾನವನ ವಿಕಾಸ, ಅವರ ಜೀವನಶೈಲಿ ಹಾಗೂ ಅವರು ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದ ರೀತಿಯ ಬಗ್ಗೆ ಪರಿಚಯಿಸಲಾಗುತ್ತದೆ.
ಇತ್ತೀಚಿನವರೆಗೂ ಪುರಾತತ್ವಶಾಸ್ತ್ರವನ್ನು ಪಠ್ಯಕ್ರಮದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಪ್ರಮುಖ ಅಧ್ಯಾಯವಾಗಿ ಸೇರಿಸಲಾಗಿದೆ. ಇತಿಹಾಸಪೂರ್ವ ಪುರಾತತ್ವಶಾಸ್ತ್ರವು ಮಾನವನ ಉದಯ ಮತ್ತು ಆರಂಭಿಕ ನಾಗರಿಕತೆಗಳ ಬೆಳವಣಿಗೆಯನ್ನು ಒಳಗೊಂಡಿದೆ ಎಂದು ಅವರು ಹೇಳಿದರು.