ಬೆಂಗಳೂರು: ಬೆ೦ಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ಮಾರ್ಟ್, ಸರಳ, ವೇಗದ, ನಗದುರಹಿತ, ಸ೦ಪರ್ಕಿತ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ಮಹತ್ವದ ಹೆಜ್ಜೆಯಾಗಿ ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (BMTC) ಅಭಿವೃದ್ಧಿಪಡಿಸಿರುವ 'ನಮ್ಮ BMTC ಮೊಬೈಲ್ ಆಪ್ 2.0' ಅನ್ನು ಇ೦ದು ವಿಧಾನಸೌಧದ ಬ್ಯಾಂಕ್ವೆಟ್ ನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಅನಾವರಣಗೊಳಿಸಿದರು.
ಒ೦ದೇ ಆಪ್‌ನಲ್ಲಿ ಸಮಗ್ರ ಸಾರ್ವಜನಿಕ ಸಾರಿಗೆ ಸೇವೆಗಳು
ಪ್ರಯಾಣಿಕರ ದೈನ೦ದಿನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಟಿಕಟಿಂಗ್, ಡಿಜಿಟಲ್ ಪಾವತಿ, ಬಸ್ ಪಾಸ್, ಪ್ರಯಾಣ ಯೋಜನೆ, ನೇರ ಬಸ್ ಟ್ರ್ಯಾಕಿ೦ಗ್ ಹಾಗೂ BMTC-BMRCL ಏಕೀಕೃತ ಟಿಕಟಿಂಗ್ ಸೇರಿದಂತೆ ಹಲವು ಪ್ರಮುಖ ಸೌಲಭ್ಯಗಳನ್ನು 'ನಮ್ಮ BMTC ಮೊಬೈಲ್ ಆಪ್ 20' ಒಂದೇ ಡಿಜಿಟಲ್ ವೇದಿಕೆಯಲ್ಲಿ ಒದಗಿಸುತ್ತದೆ.
ಆಪ್‌ನ ಪ್ರಮುಖ ವೈಶಿಷ್ಟ್ಯಗಳು
* ನೇರ ಬಸ್ ಟ್ರ್ಯಾಕಿಂಗ್: ಸ೦ಚರಿಸುತ್ತಿರುವ ಬಸ್‌ಗಳ ನೇರ ಸ್ಥಳ ಮಾಹಿತಿ, ಬಸ್ ಆಗಮನದ ಅ೦ದಾಜು ಸಮಯ, ಮಾರ್ಗ ಹಾಗೂ ನಿಲ್ದಾಣವಾರು ಮಾಹಿತಿಯನ್ನು ಪ್ರಯಾಣಿಕರು ಪಡೆಯಬಹುದು.
* ಸಮೀಪದ ಬಸ್ ನಿಲ್ದಾಣಗಳ ಮಾಹಿತಿ: ಪ್ರಯಾಣಿಕರ ಸಮೀಪದಲ್ಲಿರುವ ಬಸ್ ನಿಲಾಣಗಳನ್ನು ಗುರುತಿಸಿ, ಅಲ್ಲಿಂದ ಸ೦ಚರಿಸುವ ಬಸ್‌ಗಳು ಹಾಗೂ ಲಭ್ಯವಿರುವ ಸೇವೆಗಳ ಮಾಹಿತಿಯನ್ನು ಪಡೆಯಬಹುದಾಗಿದೆ.
* ಡಿಜಿಟಲ್ ಬಸ್ ಟಿಕೆಟ್: ಬಸ್ ಟಿಕೆಟ್‌ಗಳನ್ನು ಆಪ್ ಮೂಲಕ ಸುಲಭವಾಗಿ ಖರೀದಿಸಿ, ಡಿಜಿಟಲ್ ರೂಪದಲ್ಲಿ ಪ್ರಯಾಣಿಸಬಹುದಾಗಿದೆ.
* ಮೆಟ್ರೋ ಟಿಕೆಟ್: “ನಮ್ಮ BMIC ಮೊಬೈಲ್ ಆಪ್ 20" ಮೂಲಕ ನಮ್ಮ ಮೆಟ್ರೋ QR ಟಿಕೆಟ್‌ಗಳನ್ನು ನೇರವಾಗಿ ಖರೀದಿಸಬಹುದಾಗಿದೆ.
* BMTC-BMRCL ಏಕೀಕೃತ ಟಿಕೆಟಿ೦ಗ್: 81/1೮ ಬಸ್ ಮತ್ತು BMRCL ಮೆಟ್ರೋ ಪ್ರಯಾಣಕ್ಕೆ ಒಂದೇ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಪಡೆಯುವ ಸೌಲಭ್ಯ ಕಲ್ಪಿಸಲಾಗಿದ್ದು, ಬಹುಮಾದರಿ (Multimodal) ಸಾರ್ವಜನಿಕ ಸಾರಿಗೆ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.
* ಪ್ರಯಾಣ ಯೋಜಕ (Journey Planner): ಆರ೦ಭಿಕ ಸ್ಥಳ ಮತ್ತು ಗಮ್ಯಸ್ಥಾನವನ್ನು ನಮೂದಿಸುವ ಮೂಲಕ ಬಸ್, ಮೆಟ್ರೋ ಅಥವಾ ಬಸ್-ಮೆಟ್ರೋ ಸ೦ಯೋಜಿತ ಪ್ರಯಾಣದ ಲಭ್ಯವಿರುವ ಆಯ್ಕೆಗಳನ್ನು ಪ್ರಯಾಣಿಕರು ವೀಕ್ಷಿಸಬಹುದು.
* ವಿವಿಧ ಬಸ್ ಪಾಸ್‌ಗಳ ಸೌಲಭ್ಯ: ಎಕ್‌ಸ್‌ಪ್ರೆಸ್ ಪಾಸ್, ಸಾಮಾನ್ಯ ಸೇವಾ ಪಾಸ್, ಎಕ್‌ಸ್‌ಪ್ರೆಸ್ ವಿಸ್ತಾರ ಪಾಸ್, ವಜ ಗೋಲ್ಡ್ ಪಾಸ್, ಸಾಮಾನ್ಯ ವಿಸ್ತಾರ ಪಾಸ್, ವಾಯು ವಜ್ರ ಪಾಸ್ ಹಾಗೂ ನೈಸ್ ರಸ್ತೆ ಪಾಸ್ ಸೇರಿದಂತೆ ವಿವಿಧ BMTC ಪಾಸ್‌ಗಳನ್ನು ಆಪ್ ಮೂಲಕ ಪಡೆಯಲು/ಖರೀದಿಸಲು ಸೌಲಭ್ಯ ಕಲ್ಪಿಸಲಾಗಿದೆ.
* ಡಿಜಿಟಲ್ ಪಾವತಿ: UP, ಮೊಬೈಲ್ ವಾಲೆಟ್ ಸೇರಿದಂತೆ ಲಭ್ಯವಿರುವ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ನಗದುರಹಿತವಾಗಿ ಟಿಕಟ್ ಪಾವತಿ ಮಾಡಲು ಅವಕಾಶವಿದೆ.
* ನನ್ನ ಟಿಕೆಟ್‌ಗಳು ಮತ್ತು ಪಾಸ್‌ಗಳು: ಸಕ್ರಿಯ ಟಿಕೆಟ್‌ಗಳು ಮತ್ತು ಪಾಸ್‌ಗಳು, ಹಿ೦ದಿನ ವಹಿವಾಟಿನ ವಿವರಗಳು... ಹಾಗೂ ಡಿಜಿಟಲ್ ರಸೀದಿಗಳನ್ನು ಒಂದೇ ಸ್ಮಳದಲ್ಲಿ ವೀಕ್ಷಿಸಬಹುದಾಗಿದೆ.
* ಕನ್ನಡ ಮತ್ತು ಇಂಗ್ಲಿಷ್ ಭಾಷಾ ಸೌಲಭ್ಯ: ಆಪ್‌ನ ಇ೦ಟರ್‌ಫೇಸ್ ಕನ್ನಡ ಮತ್ತು ಇ೦ಗ್ಲಿಷ್ ಭಾಷೆಗಳಲ್ಲಿ ಲಭ್ಯವಿದ್ದು, ಶೀರ್ಷಿಕೆಗಳು, ಲೇಬಲ್‌ಗಳು, ಬಸ್ ನಿಲ್ದಾಣಗಳ ಹೆಸರುಗಳು ಹಾಗೂ ರಸೀದಿಗಳನ್ನು ಕನ್ನಡದಲ್ಲಿಯೂ ವೀಕ್ಷಿಸಬಹುದಾಗಿದೆ.
ರಾಷ್ಟ್ರೀಯ ಸಾಮಾನ್ಯ ಸ೦ಚಾರ ಕಾರ್ಡ್ (NCMC) ಸ್ಟೀಕಾರ
ಬೆ೦.ಮ.ಸಾ.ಸ೦ಸ್ಥೆಯ ಡಿಜಿಟಲ್ ಹಾಗೂ ಪರಸ್ಪರ ಸ೦ಪರ್ಕಿತ ಸಾರಿಗೆ ವ್ಯವಸ್ಥೆಯ ಭಾಗವಾಗಿ, National Common Mobility Card (NCMC) ಕಾರ್ಡ್‌ಗಳನ್ನು BMTC ಬಸ್ ಪ್ರಯಾಣಕ್ಕೂ ಬಳಸಬಹುದಾಗಿದೆ. ಇದರಿ೦ದ ದೇಶದ ವಿವಿಧ ಸಾರಿಗೆ ವ್ಯವಸ್ಥೆಗಳಲ್ಲಿ ಬಳಸಲಾಗುವ NCMC ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ BMTC ಬಸ್‌ಗಳಲ್ಲಿ ಪ್ರಯಾಣಿಸುವುದು ಮತ್ತಷ್ಟು ಅನುಕೂಲಕರವಾಗಲಿದೆ.