ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಇಂದು ಹಾಸನದಲ್ಲಿ ಆಡಿರುವ ಮಾತಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಯಾರು ಏನು ಬೇಕಾದರೂ ಮಾತನಾಡಲಿ, ಏನಾದರೂ ಚರ್ಚೆ ಮಾಡಲಿ, ಯಾರು ಯಾರನ್ನು ಬೇಕಾದರೂ ಸ್ಟಾಪ್ ಮಾಡಲು ಆಗುತ್ತಾ ಎಂದು ಹೇಳಿದ್ದಾರೆ.
ಯಾರು ಯಾವ ವಿಚಾರ ಬೇಕಾದರೂ ಚರ್ಚಿಸಲಿ, ಏನು ಬೇಕಾದರೂ ಬಿಡುಗಡೆ ಮಾಡಿಕೊಳ್ಳಲಿ ಎಂದು ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ನಾನು ಯಾವುದೇ ದಾಖಲೆ ಇಲ್ಲದೇ ಯಾರ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ, ಅಮೆರಿಕಗೆ ಹೋಗುವ ಮುನ್ನ ಏನು ಹೇಳಿಕೆ ನೀಡಿದ್ದೆ, ಅದಕ್ಕೆ ಬದ್ದನಾಗಿದ್ದೇನೆ. ನಾನು ಅಮೆರಿಕಗೆ ಹೋಗಿದ್ದಂತಹ ಸಂದರ್ಭದಲ್ಲಿ ನೈಸ್ ಸಂಸ್ಥೆಯ ಗುತ್ತಿಗೆದಾರಾರೊಬ್ಬರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಫೋಟೋಗಳನ್ನು ನಾನು ಗಮನಿಸಿದ್ದೇನೆ, ಸೂಕ್ತ ದಾಖಲೆಯೊಂದಿಗೆ ಬಿಡುಗಡೆ ಮಾಡುತ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು.