ಬೆಂಗಳೂರು: ಡಾಕ್ಟರ್ ಗಳಿಗೆ Dr, ಪ್ರೊಫೆಸರ್ ಗಳಿಗೆ Prof ಎಂದು ಹೆಸರಿಗೆ ಮೊದಲು ಮುಂದೆ ಗೌರವದ ವಿಶೇಷಣ ಇರುವಂತೆ ಶಿಕ್ಷಕರಿಗೆ ಕರ್ನಾಟಕದಲ್ಲಿ Tr ಎಂಬ ವಿಶೇಷಣವನ್ನು ನೀಡಲಾಗಿದೆ. ಈಗ ಅದೇ ಮಾದರಿಯಲ್ಲಿ ಎಂಜಿನಿಯರ್ ಗಳಿಗೆ Er ಎಂದು ವಿಶೇಷಣವನ್ನು ಅಧಿಕೃತವಾಗಿ ಬಳಸಲು ಸರ್ಕಾರ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಇತ್ತೀಚೆಗಷ್ಟೇ ರಾಜ್ಯಸರ್ಕಾರ ವೈದ್ಯರು ತಮ್ಮ ಹೆಸರಿಗೆ ಮೊದಲು ‘Dr’, ಪ್ರಾಧ್ಯಾಪಕರು ‘Prof’ ಎಂದು ಬಳಸುವ ಮಾದರಿಯಲ್ಲೇ, ಶಿಕ್ಷಕರು ‘Tr’ ವಿಶೇಷಣ ಬಳಸಲು ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಘೋಷಣೆ ಮಾಡಿದ್ದು, ಇಂಜಿನಿಯರ್‌ಗಳಿಗೂ ತಮ್ಮ ಹೆಸರಿನ ಮೊದಲು ಗೌರವ ಸೂಚಕವಾಗಿ "Er" (ಅಭಿಯಂತರರು - Engineer) ಎಂಬ ಶೀರ್ಷಿಕೆಯನ್ನು ಬಳಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಇಂಜಿನಿಯರ್‌ಗಳ ಕೊಡುಗೆಯನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುವ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನು (ಇಂಜಿನಿಯರ್ಸ್ ದಿನ) ಇನ್ಮುಂದೆ ರಾಜ್ಯದ ಅಧಿಕೃತ ಕಾರ್ಯಕ್ರಮವನ್ನಾಗಿ ಸರ್ಕಾರ ಘೋಷಿಸಿದೆ.
ಇತರ ವೃತ್ತಿಪರ ಶೀರ್ಷಿಕೆಗಳು:
ಪ್ರಸ್ತುತ ಸಮಾಜದಲ್ಲಿ ವಿವಿಧ ವೃತ್ತಿಗಳಿಗೆ ಗೌರವ ಸೂಚಿಸಲು ಕೆಲವು ಪ್ರಮುಖ ಶೀರ್ಷಿಕೆಗಳನ್ನು ಹೆಸರಿನ ಮುಂದೆ ಬಳಸಲಾಗುತ್ತಿದೆ...
Dr. - ವೈದ್ಯರು (Doctors) ಮತ್ತು ಪಿಎಚ್‌ಡಿ ಪದವೀಧರರು
Prof. - ಪ್ರಾಧ್ಯಾಪಕರು (Professors)
Tr. - ಶಿಕ್ಷಕರು (Teachers - ಇತ್ತೀಚೆಗೆ ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ)
Er. - ಇಂಜಿನಿಯರ್‌ಗಳು (Engineers)
CA / CS / Ar. - ಚಾರ್ಟರ್ಡ್ ಅಕೌಂಟೆಂಟ್ಸ್, ಕಂಪನಿ ಸೆಕ್ರೆಟರಿಗಳು ಮತ್ತು ಆರ್ಕಿಟೆಕ್ಟ್‌ಗಳು
ಇದರೊಂದಿಗೆ, ಉಪನ್ಯಾಸಕರಿಗೆ (Lr.) ಶೀರ್ಷಿಕೆ ನೀಡುವ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಒಟ್ಟಾರೆಯಾಗಿ, ಪ್ರತಿ ವರ್ಷ ಕರ್ನಾಟಕದಲ್ಲಿ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬರುತ್ತಾರೆ. ಈ ನೂತನ ಆದೇಶವು ರಾಜ್ಯದ ಇಡೀ ಇಂಜಿನಿಯರಿಂಗ್ ಸಮುದಾಯಕ್ಕೆ ಹೊಸ ಪ್ರೃತ್ತಿಪರ ಗುರುತು ನೀಡಿದೆ.