ಸರ್ವರ್ ಡೌನ್ ಸಮಸ್ಯೆಯನ್ನು ತಪ್ಪಿಸಲು ಸರ್ಕಾರದಿಂದ ಶೀಘ್ರ ಮನೆಯಲ್ಲೇ ಮೊಬೈಲ್ ಮೂಲಕ ಇ-ಕೆವೈಸಿ  AI Image
ರಾಜ್ಯ

Ration Card e-KYC: ಸರ್ವರ್ ಡೌನ್ ಸಮಸ್ಯೆಯನ್ನು ತಪ್ಪಿಸಲು ಸರ್ಕಾರದಿಂದ ಶೀಘ್ರ ಮನೆಯಲ್ಲೇ ಮೊಬೈಲ್ ಮೂಲಕ ಇ-ಕೆವೈಸಿ ಅನುಷ್ಠಾನ

ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯಬೇಕಿಲ್ಲ; ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿರುವ ಮೊಬೈಲ್ ಆ್ಯಪ್ ಮೂಲಕ ಮುಖ ಗುರುತಿಸಿ ಮನೆಯಲ್ಲೇ ಇ-ಕೆವೈಸಿ ಮುಗಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಅತಿಯಾದ ಜನದಟ್ಟಣೆ ಮತ್ತು ಸರ್ವರ್ ಡೌನ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಎದುರಿಸುತ್ತಿದ್ದ ತೊಂದರೆಯನ್ನು ತಪ್ಪಿಸಲು ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಪಡಿತರ ಚೀಟಿದಾರರು ತಮ್ಮ ಮೊಬೈಲ್ ಮೂಲಕವೇ ಮನೆಯಲ್ಲಿ ಕುಳಿತು ಇ-ಕೆವೈಸಿ ಮಾಡಲು ಹೊಸ ಯೋಜನೆ ಸಿದ್ದಪಡಿಸಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಮೊಬೈಲ್ ಆ್ಯಪ್ ಸೌಲಭ್ಯ

ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲು ಹಾಗೂ ಸರ್ವರ್ ಡೌನ್ ಸಮಸ್ಯೆಯನ್ನು ತಪ್ಪಿಸಲು, ಇಲಾಖೆಯು ಮುಖ ಗುರುತಿಸುವಿಕೆ (Face Authentication) ಮತ್ತು ಆಧಾರ್ ಒಟಿಪಿ ಬಳಸಿ ಮನೆಯಲ್ಲೇ ಇ-ಕೆವೈಸಿ ಪೂರ್ಣಗೊಳಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಇನ್ನೊಂದು ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

ಇ-ಕೆವೈಸಿ ಕಡ್ಡಾಯ ಯಾಕೆ?

ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ 5 ವರ್ಷಕ್ಕೊಮ್ಮೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ, ರಾಜ್ಯದ ಸುಮಾರು 2.67 ಕೋಟಿ ಫಲಾನುಭವಿಗಳು ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನವಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.

ಇ-ಕೆವೈಸಿ ಮಾಡಿಸಲು ಯಾವೆಲ್ಲಾ ದಾಖಲೆಗಳು ಬೇಕು?

ಕುಟುಂಬದ ಸದಸ್ಯರ ಮೂಲ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸಂಖ್ಯೆ, ಆಧಾರ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆ ಹಾಗೂ ಎಲ್‌ಪಿಜಿ ಗ್ಯಾಸ್ ಸಂಪರ್ಕದ ವಿವರಗಳು (ಜಾತಿ ಪ್ರಮಾಣಪತ್ರ ಕೇವಲ SC/ST ಫಲಾನುಭವಿಗಳಿಗೆ ಮಾತ್ರ).

ಅಕಸ್ಮಾತ್, ಮುಂದೆ ಮೊಬೈಲ್‌ನಲ್ಲಿ ಇ-ಕೆವೈಸಿ ಮಾಡುವಾಗ ತಾಂತ್ರಿಕ ತೊಂದರೆ ಎದುರಾದರೆ, ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಬೆರಳು ಗುರುತು) ನೀಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ ಬರೋಬ್ಬರಿ 50 ಲಕ್ಷ ರೂ.ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಅಮೆರಿಕಾ ಸುಂಕದ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ, ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!