ಇನ್ಮುಂದೆ ಸೆಲ್ಫಿ, ರೀಲ್ಸ್‌ ಮಾಡಿದರೆ ಬೀಳುತ್ತೆ ಕಠಿಣ ಕ್ರಮ!  AI Image
ರಾಜ್ಯ

ಇನ್ಮುಂದೆ ಸೆಲ್ಫಿ, ರೀಲ್ಸ್‌ ಮಾಡಿದರೆ ಬೀಳುತ್ತೆ ಕಠಿಣ ಕ್ರಮ! ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಶಿಕ್ಷಣ ಇಲಾಖೆಯಿಂದ 9 ಕಟ್ಟುನಿಟ್ಟಿನ ನಿಯಮ ಜಾರಿ

ಇತ್ತೀಚಿನ ದಿನಗಳಲ್ಲಿ ಪ್ರವಾಸದ ವೇಳೆ ಸೆಲ್ಫೀ ಮತ್ತು ರೀಲ್ಸ್ ಕ್ರೇಜ್‌ನಿಂದಾಗಿ ನಡೆಯುತ್ತಿರುವ ಅಪಘಾತಗಳನ್ನು ತಡೆಯಲು ಉನ್ನತ ಶಿಕ್ಷಣ ಇಲಾಖೆಯು ಶೈಕ್ಷಣಿಕ ಪ್ರವಾಸಗಳಿಗೆ ಸಂಬಂಧಿಸಿದಂತೆ ಹೊಸ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಆ ಕುರ್ತಾ ವರದಿ ಇಲ್ಲದೆ:

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ಶೈಕ್ಷಣಿಕ ಪ್ರವಾಸಗಳಿಗೆ ಸಂಬಂಧಿಸಿದಂತೆ ಹೊಸ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಅದರಂತೆ, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕೈಗೊಳ್ಳುವ ಶೈಕ್ಷಣಿಕ ಪ್ರವಾಸಗಳಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸುವುದು ಮತ್ತು ರೀಲ್ಸ್‌ ಚಿತ್ರೀಕರಣ ಮಾಡುವುದನ್ನು ಕಾಲೇಜು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಜೊತೆಗೆ, ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸಿ ರೀಲ್ಸ್ ಹಾಗೂ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಮೈಮರೆತು ಅಪಾಯಕಾರಿ ಸ್ಥಳಗಳಲ್ಲಿ ಅವಘಡಗಳಿಗೆ ಈಡಾಗುತ್ತಿರುವುದನ್ನು ತಡೆಯಲು ಮತ್ತು ಶಿಸ್ತು ಕಾಪಾಡಲು ಇಲಾಖೆ 9 ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇಲ್ಲಿದೆ ಆ ಕುರಿತ ವರದಿ:

  • ಸೆಲ್ಫಿ, ರೀಲ್ಸ್‌ಗೆ ನೋ: ಪ್ರವಾಸದ ವೇಳೆ ಯಾವುದೇ ರೀತಿಯ ಸೆಲ್ಫಿ ವಿಡಿಯೋ, ಫೋಟೋ ಅಥವಾ ರೀಲ್ಸ್ ಮಾಡುವಂತಿಲ್ಲ. ಪ್ರವಾಸದ ಉದ್ದೇಶ ಕೇವಲ ಅಧ್ಯಯನವಾಗಿರಬೇಕು.

  • ಗರಿಷ್ಠ 5 ದಿನಗಳ ಮಿತಿ: ಶೈಕ್ಷಣಿಕ ಪ್ರವಾಸದ ಅವಧಿಯು 5 ದಿನಗಳಿಗಿಂತ ಹೆಚ್ಚು ಇರಬಾರದು.

  • ಇಲಾಖೆಯ ಅನುಮತಿ ಕಡ್ಡಾಯ: ಕಾಲೇಜು ಶಿಕ್ಷಣ ಇಲಾಖೆಯಿಂದ ಪೂರ್ವ ಲಿಖಿತ ಅನುಮತಿ ಪಡೆಯದೆ ಯಾವುದೇ ಪ್ರವಾಸ ಆಯೋಜಿಸುವಂತಿಲ್ಲ. ಜೊತೆಗೆ, ಪ್ರವಾಸದ ವಿವರವಾದ ಮಾರ್ಗಸೂಚಿ ಹಾಗೂ ಭೇಟಿ ನೀಡುವ ಸ್ಥಳಗಳ ಪಟ್ಟಿಯನ್ನು ಮುಂಚಿತವಾಗಿಯೇ ಸಲ್ಲಿಸಬೇಕು.

  • ಪೋಷಕರ ಒಪ್ಪಿಗೆ ಪತ್ರ: ಪ್ರವಾಸಕ್ಕೆ ತೆರಳುವ ಮೊದಲು ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಪೋಷಕರ ಸಹಿ ಪಡೆದು ಇಲಾಖೆಗೆ ಸಲ್ಲಿಸಬೇಕು.

  • ಮಳೆಗಾಲದಲ್ಲಿ ಪ್ರವಾಸವಿಲ್ಲ: ಸುರಕ್ಷತೆಯ ದೃಷ್ಟಿಯಿಂದ ಮಳೆಗಾಲದ ಅವಧಿಯಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ಇರುವುದಿಲ್ಲ.

  • ಕಾಯಂ ಅಧ್ಯಾಪಕರಿರಬೇಕು: ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳ ಜೊತೆ ಕಡ್ಡಾಯವಾಗಿ ಕಾಯಂ ಉಪನ್ಯಾಸಕರು ಇರಬೇಕು. ಕೇವಲ ಅತಿಥಿ ಉಪನ್ಯಾಸಕರನ್ನು ಮಾತ್ರ ಪ್ರವಾಸಕ್ಕೆ ಕಳುಹಿಸುವಂತಿಲ್ಲ.

  • ಸಿಬ್ಬಂದಿ ಮಿತಿ ಮತ್ತು ಮಹಿಳಾ ಉಪನ್ಯಾಸಕಿಯರು: ಪ್ರವಾಸಕ್ಕೆ ತೆರಳುವ ಬೋಧಕ ಸಿಬ್ಬಂದಿ ಸಂಖ್ಯೆ 4 ಮೀರಬಾರದು. ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಉಪನ್ಯಾಸಕಿಯರು ಮತ್ತು ಒಬ್ಬರು 'ಡಿ' ದರ್ಜೆ ನೌಕರರು ಇರಬೇಕು.

  • ಸ್ಥಳೀಯ ಪೊಲೀಸರಿಗೆ ಮಾಹಿತಿ: ಪ್ರವಾಸ ಕೈಗೊಳ್ಳುವ ಮುನ್ನ ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗೆ ಪ್ರವಾಸದ ಮಾರ್ಗ ಮತ್ತು ಸಂಪೂರ್ಣ ವಿವರಗಳನ್ನು ಒದಗಿಸಬೇಕು.

  • ಅಪಾಯಕಾರಿ ಸ್ಥಳಗಳಿಗೆ ಪ್ರತ್ಯೇಕ ಸುರಕ್ಷತೆ: ನದಿ, ಸಮುದ್ರ, ಜಲಪಾತ, ದಟ್ಟ ಅರಣ್ಯ ಅಥವಾ ಕಡಿದಾದ ಬೆಟ್ಟಗಳಂತಹ ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವಾಗ ಮುನ್ನೆಚ್ಚರಿಕೆ ವಹಿಸಬೇಕು. ಅದರಲ್ಲೂ, ಟ್ರೆಕ್ಕಿಂಗ್ ಅಥವಾ ಈಜು ಮುಂತಾದ ಚಟುವಟಿಕೆಗಳಿದ್ದರೆ ಪ್ರಮಾಣೀಕೃತ ತಜ್ಞರು ಜೊತೆಗಿರಬೇಕು ಮತ್ತು ಸ್ಥಳೀಯ ಸುರಕ್ಷತಾ ಅನುಮತಿ ಪಡೆದಿರಬೇಕು.

ಒಟ್ಟಾರೆಯಾಗಿ, ಈ ಹೊಸ ನಿಯಮಗಳು ಕೇವಲ ಸರ್ಕಾರಿ ಕಾಲೇಜುಗಳಿಗೆ ಮಾತ್ರವಲ್ಲದೆ ಖಾಸಗಿ ಮತ್ತು ಅನುದಾನಿತ ಕಾಲೇಜುಗಳಿಗೂ ಅನ್ವಯವಾಗಲಿದ್ದು, ನಿಯಮ ಮೀರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿಗೆ ದಿನಕ್ಕೊಂದು ಶಾಕ್; ನಂದೀಗ್ರಾಮದ ಬಳಿಕ ಕೈಕೊಟ್ಟ ರೆಜಿನಗರ ಉಪಚುನಾವಣೆ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ; ನಾಮಪತ್ರ ವಾಪಸ್

ವಿದೇಶಿ ನೌಕರರ ನೇಮಕಾತಿಗೆ ಅಮೆರಿಕ ಕತ್ತರಿ: H-1B ವೀಸಾ ನಿರ್ಬಂಧ ಮತ್ತೊಂದು ವರ್ಷಕ್ಕೆ ಮುಂದುವರಿಕೆ..!

UPI MDR: ಗ್ರಾಹಕರಿಗೆ ಮತ್ತೊಂದು ತಲೆ ಬಿಸಿ; ಇನ್ನು ಮುಂದೆ ಪೆಟ್ರೋಲ್ ಪಂಪ್ ಗಳಲ್ಲಿ 2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಬಂದ್!

ಕನ್ನಡ ವರ್ಣಮಾಲೆ ಬರೆಯಲು ಬಾರದ ವಿದ್ಯಾರ್ಥಿಗಳ ಕಂಡು ಪ್ರದೀಪ್ ಈಶ್ವರ್ ಶಾಕ್: ಶಾಸಕರ ಸೂಚನೆಯಂತೆ 180 ಶಿಕ್ಷಕರಿಗೆ BEO ನೋಟಿಸ್!

ಪರೀಕ್ಷೆಯ ವೇಳೆ ChatGPT ಬಳಕೆ: ಸಿಕ್ಕಿ ಬಿದ್ದ IIT ವಿದ್ಯಾರ್ಥಿ ಆತ್ಮಹತ್ಯೆ