ಶಾಲೆಗಳಿಗೆ ಬಂಪರ್ ದಸರಾ ರಜೆ ಘೋಷಿಸಿದ ಶಿಕ್ಷಣ ಇಲಾಖೆ Online Desk
ರಾಜ್ಯ

ಶಾಲೆಗಳಿಗೆ ದಸರಾ ರಜೆ ಘೋಷಿಸಿದ ಶಿಕ್ಷಣ ಇಲಾಖೆ! ಬರೋಬ್ಬರಿ 19 ದಿನ Holiday; ಯಾವಾಗ ಆರಂಭ?

ರಾಜ್ಯದ ಲಕ್ಷಾಂತರ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಇಲ್ಲಿದೆ ಸುದ್ದಿ. 2026-27 ನೇ ಶೈಕ್ಷಣಿಕ ವರ್ಷದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದ್ದು ಈ ಬಾರಿ ಬರೋಬ್ಬರಿ 19 ದಿನಗಳ ಕಾಲ ಬಂಪರ್ ರಜೆ ಸಿಗಲಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರಾಜ್ಯದ ಲಕ್ಷಾಂತರ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಇಲ್ಲಿದೆ ಸುದ್ದಿ. 2026-27 ನೇ ಶೈಕ್ಷಣಿಕ ವರ್ಷದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದ್ದು ಈ ಬಾರಿ ಬರೋಬ್ಬರಿ 19 ದಿನಗಳ ಕಾಲ ಬಂಪರ್ ರಜೆ ಸಿಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ಬಂಪರ್ ರಜೆ ಅನ್ವಯವಾಗುತ್ತದೆ. ಆ ಕುರಿತ ವರದಿ ಇಲ್ಲಿದೆ:

ಯಾವಾಗಿನಿಂದ ರಜೆ?

ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 3, 2026 ಶನಿವಾರ ರಜೆ ಆರಂಭವಾಗುತ್ತದೆ. ಇನ್ನು, ಅಕ್ಟೋಬರ್ 21ರ ಬುಧವಾರದ ವಿಜಯದಶಮಿಯಂದು ರಜೆ ಮುಕ್ತಾಯವಾಗುವುದರೊಂದಿಗೆ, ಅಕ್ಟೋಬರ್ 22ರ ಗುರುವಾರದಂದು ಶಾಲೆಗಳು ಪುನರಾರಂಭಗೊಳ್ಳುತ್ತದೆ. ಅದರಲ್ಲೂ, ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಸಾರ್ವತ್ರಿಕ ರಜೆ ಇರಲಿದ್ದು, ಅದರ ಮರುದಿನದಿಂದಲೇ (ಅಕ್ಟೋಬರ್ 3) ಅಧಿಕೃತವಾಗಿ ದಸರಾ ರಜೆಗಳು ಆರಂಭವಾಗುವುದರಿಂದ ಮಕ್ಕಳಿಗೆ ಸತತವಾಗಿ ಹಬ್ಬದ ರಜೆಯನ್ನು ಸವಿಯುವ ಸುವರ್ಣ ಅವಕಾಶ ಸಿಕ್ಕಂತಾಗಿದೆ.

ಮುಂದುವರೆದು, ಈ ಶೈಕ್ಷಣಿಕ ವರ್ಷದ 2 ನೇ ಅವಧಿಯು ಅಕ್ಟೋಬರ್ 22, 2026 ರಿಂದ ಏಪ್ರಿಲ್ 10, 2027 ರವರೆಗೆ ಇರಳಿದ್ದು, ಏಪ್ರಿಲ್ 11, 2027 ರಿಂದ ಬೇಸಿಗೆ ರಜೆ ಪ್ರಾರಂಭವಾಗಲಿದೆ.

ಏತನ್ಮಧ್ಯೆ, ಜಿಲ್ಲೆಯ ಸ್ಥಳೀಯ ಹವಾಮಾನ ಅಥವಾ ಅಗತ್ಯಕ್ಕೆ ಅನುಗುಣವಾಗಿ ರಜಾ ದಿನಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾ ಉಪನಿರ್ದೇಶಕರು ಹೊಂದಿರುವುದರಿಂದ ಬದಲಾವಣೆ ಮಾಡಬಹುದಾಗಿದೆ. ಒಟ್ಟಾರೆಯಾಗಿ, ಶಿಕ್ಷಣ ಇಲಾಖೆಯ ಪ್ರಕಟಣೆಯಿಂದಾಗಿ ಹಬ್ಬದ ಆಚರಣೆ ಹಾಗೂ ಪ್ರವಾಸಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿರುವ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಖತ್ ಖುಷಿ ತಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ Bypoll: ಕ್ಷಣಕ್ಕೊಂದು ತಿರುವು; ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಬಂಪರ್: 500 ಕೋಟಿ ರೂ ಅನುದಾನ, ಹೂಡಿಕೆದಾರರಿಗೆ ರೆಡ್ ಕಾರ್ಪೆಟ್

ನಾಪತ್ತೆಯಾಗಿದ್ದ ಕಲಬುರಗಿ ಯುವತಿ ಬಾಂಗ್ಲಾದೇಶದಲ್ಲಿ ಪತ್ತೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು... Video

GBA ವ್ಯಾಪ್ತಿಯಲ್ಲಿ 'ನಂಬಿಕೆ ನಕ್ಷೆ 2.0' ವ್ಯವಸ್ಥೆ ಲೋಕಾರ್ಪಣೆ! ಏನಿದರ ಉದ್ದೇಶ?

ಮರ್ಮಾಂಗ ತೋರಿಸಿ ವಿದ್ಯಾರ್ಥಿನಿಗೆ ಕಿರುಕುಳ; ಕಾಮುಕನಿಗೆ ಧರ್ಮದೇಟು, ರಕ್ಷಿಸಿದ ಯುವಕರನ್ನೇ ಬಂಧಿಸಿದ ಪೊಲೀಸರು, ಪೋಷಕರ ಪ್ರತಿಭಟನೆ!