ಬಿಜೆಪಿ ಮುಖಂಡ ಹೆಚ್.ಎಂ.ವಿಶ್ವನಾಥ್, ಸಿಎಂ ಡಿಕೆ ಶಿವಕುಮಾರ್ 
ರಾಜ್ಯ

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಸ್ವತಂತ್ರ ಭಾರತದಲ್ಲಿ ನೂರೇ ದಿನದಲ್ಲಿ ಹೊಸ ಭರವಸೆ ಮೂಡಿಸಿದ ಸಿಎಂ ಅಂದ್ರೆ ಅದು ಡಿ.ಕೆ ಶಿವಕುಮಾರ್‌ ಎಂದು ಹೇಳಿ ಮುಖ್ಯ ಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ.

ಹಾಸನ: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ನೂರು ದಿನಗಳ ಆಡಳಿತಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಹೆಚ್.ಎಂ.ವಿಶ್ವನಾಥ್ ಫಿದಾ ಆಗಿದ್ದಾರೆ.

ಸ್ವತಂತ್ರ ಭಾರತದಲ್ಲಿ ನೂರೇ ದಿನದಲ್ಲಿ ಹೊಸ ಭರವಸೆ ಮೂಡಿಸಿದ ಸಿಎಂ ಅಂದ್ರೆ ಅದು ಡಿ.ಕೆ ಶಿವಕುಮಾರ್‌ ಎಂದು ಹೇಳಿ ಮುಖ್ಯ ಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ.

ಸಕಲೇಶಪುರದ ಎಪಿಎಂಸಿ ಆವರಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಪಕ್ಷ ಬೇರೆ ಇರಬಹುದು, ಆದರೆ ಮುಂದೆಯೂ ಇವರ ನಾಯಕತ್ವ ಇದ್ದರೆ ನಾನು ಸ್ವಾಗತ ಮಾಡ್ತಿನಿ. ಅವರಿಗೆ ಹದಿನೆಂಟು ತಿಂಗಳು ಸಾಲಲ್ಲ, ನೂರು ತಿಂಗಳು ಇರಬೇಕು ಎಂದು ಹೇಳಿದ್ದಾರೆ.

ಮಲೆನಾಡಿಗರು ಒಂದು ರೀತಿಯಲ್ಲಿ ಅನಾಥರಾಗಿದ್ದಾರೆ. ಕೇಳುವವರು ಯಾರು ಇಲ್ಲದಂತಾಗಿದೆ. ಎಲ್ಲಾ ನಂಬಿಸಿ ಮೋಸ ಮಾಡಿದ್ದಾರೆ. ನಿಮ್ಮ ಮನೆಗೆ ನಮ್ಮ ಮಲೆನಾಡಿನ ಹೆಣ್ಣು ಮಗಳನ್ನು ಕೊಟ್ಟಿದ್ದೇವೆ. ಸಿದ್ಧಾರ್ಥ ಹೆಗ್ಗಡೆ ಅವರ ಕುಟುಂಬ ಬಿದ್ದಾಗ ನಿಮ್ಮ ಮನೆಯ ಮಗಳನ್ನು ಆ ಮನೆಗೆ ಕೊಟ್ಟು ಆ ಕುಟುಂಬವನ್ನು ಎತ್ತಿ ನಿಲ್ಲಿಸಿದ್ದೀರಿ. ಈ ಭಾಗದಲ್ಲಿ ಸಂಬಂಧ, ಸ್ನೇಹ ನಿಮಗೆ ಇದೆ ಎಂದಿದ್ದಾರೆ.

ಕಸ್ತೂರಿ ರಂಗನ್ ಬೇಡ ಅನ್ನಲ್ಲ ಹೊಸದಾಗಿ ಸರ್ವೆ ಮಾಡಿಸೋಣ ಅದರಲ್ಲಿ ಏನು ಬರುತ್ತೆ ನೋಡೋಣ. ಅಲ್ಲಿಯವರೆಗೆ ವರದಿಯನ್ನು ತಡೆ ಹಿಡಿಯಿರಿ ಎಂದು ಅವರು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!

ಎಲ್.ಕೆ ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌: 30 ಲಕ್ಷ ರೂ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!