ಸಾಂದರ್ಭಿಕ ಚಿತ್ರ 
ರಾಜ್ಯ

ವಿಜಯಪುರ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಮಹಿಳೆ ಹಿಂದೆ ಬಿದ್ದು ಸಿಕ್ಕಿಬಿದ್ದ ರೋಚಕ ಕಹಾನಿ!

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಕಳೆದ 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಾ ಬಂದಿದ್ದನು. ಆದರೆ ಈಗ ಮಹಿಳೆಯ ಹಿಂದೆ ಬಿದ್ದು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಕಳೆದ 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸುತ್ತಾ ಬಂದಿದ್ದನು. ಆದರೆ ಈಗ ಮಹಿಳೆಯ ಹಿಂದೆ ಬಿದ್ದು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಬಂಧಿತ ಕೈದಿಯನ್ನು ಬಸವರಾಜ್ ಪಾಟೀಲ್ ಎಂದು ಗುರುತಿಸಲಾಗಿದೆ. 12 ವರ್ಷಗಳ ಹಿಂದೆ ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಬಸವರಾಜ್ ಪಾಟೀಲ್‌ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದನು. ಇದೀಗ ವಿಜಯಪುರ ಜಿಲ್ಲಾ ಪೊಲೀಸ್ ಪಡೆ ಕೈದಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯಲ್ಲಿ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ಬದುಕುತ್ತಿದ್ದ ಕೈದಿ ಬಸವರಾಜ್ ಪಾಟೀಲ್‌ನನ್ನು ಫಿಂಗರ್‌ಪ್ರಿಂಟ್ ಸಹಾಯದಿಂದ ಪತ್ತೆ ಹಚ್ಚಿ ಸೆರೆಹಿಡಿಯಲಾಗಿದೆ.

ಬಾಗಲಕೋಟೆಯಲ್ಲಿ ಕೃಷಿ ಅಧಿಕಾರಿಯೊಬ್ಬರನ್ನು 2009ರಲ್ಲಿ ಹನಿಟ್ರ್ಯಾಪ್ ನಡೆಸಿ ನಂತರ ಆತನನ್ನು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಬಸವರಾಜ್ ಪಾಟೀಲ್‌ಗೆ ಜೀವಾವಧಿ ಶಿಕ್ಷೆಯಾಗಿತ್ತು. 2014ರಲ್ಲಿ ಅನಾರೋಗ್ಯದ ನೆಪ ಹೇಳಿ ಜಿಲ್ಲಾಸ್ಪತ್ರೆಗೆ ಸೇರಿದ್ದಾಗ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌ನಲ್ಲಿ 30 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!

ರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್‌ನಿಂದ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್‌ಗಳಿಂದ ದಾಳಿ!

ಸಲ್ಮಾನ್ ಖಾನ್ ದ್ವಂದ ನಿಲುವುಳ್ಳ ಮೂರ್ಖ: 'ಬಿಗ್ ಬಾಸ್ ಮಾಜಿ ಸ್ಪರ್ಧಿ' ಸೋಫಿಯಾ ಹಯಾತ್ ಕಿಡಿ!

ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ