ರಾಜ್ಯ

‘ಅಧಿಕಾರಿಗಳಿಗೆ ಗೌರವಯುತವಾಗಿ ನೀಡೋದು ಧರ್ಮ’: ಸಚಿವರಿಂದ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ: ರಾಜ್ಯಪಾಲರಿಗೆ ಶಿವಲಿಂಗೇಗೌಡ ವಿರುದ್ಧ ದೂರು

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಸಚಿವ ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು, ಭ್ರಷ್ಟಾಚಾರಕ್ಕೆ ಉತ್ತೇಜನದ ಆರೋಪ ಹೊರಿಸಿದ್ದಾರೆ.

ಬೆಂಗಳೂರು: ಸಕಲೇಶಪುರ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಲಂಚದ ವಿಷಯವಾಗಿ “ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ” ಎಂಬ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ ವಿವಾದವೀಗ ರಾಜ್ಯಪಾಲರ ಅಂಗಳ ತಲುಪಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಸಚಿವ ಶಿವಲಿಂಗೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು, ಭ್ರಷ್ಟಾಚಾರಕ್ಕೆ ಉತ್ತೇಜನದ ಆರೋಪ ಹೊರಿಸಿದ್ದಾರೆ.

ದಿನೇಶ್ ಕಲ್ಲಹಳ್ಳಿ ಗವರ್ನರ್​​ಗೆ ಇಮೇಲ್​​ ಮೂಲಕ ದೂರು ಸಲ್ಲಿಸಿದ್ದಾರೆ. ಸಚಿವರ ಈ ಹೇಳಿಕೆಯು ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸುತ್ತಿದೆ. ಸಂವಿಧಾನದ ಪರಿಚ್ಛೇದ 14 (ಸಮಾನತೆಯ ಹಕ್ಕು) ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ 1988ರ (Prevention of Corruption Act) ಸೆಕ್ಷನ್ 7, 8 ಮತ್ತು 12ರ (ಲಂಚ ಸ್ವೀಕಾರ, ನೀಡಿಕೆ ಹಾಗೂ ಪ್ರಚೋದನೆ) ಅಡಿಯಲ್ಲಿ ಈ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಚಿವ ಸ್ಥಾನದಿಂದ ಶಿವಲಿಂಗೇಗೌಡರನ್ನು ವಜಾಗೊಳಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಶಿವಲಿಂಗೇಗೌಡ ಹೇಳಿದ್ದೇನು?

ತಮ್ಮ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಸಿರುವ ಸಚಿವ ಶಿವಲಿಂಗೇಗೌಡ, ನಾನೇನು ನೇರವಾಗಿ ಹಣ ಕೋಡೋಕೆ ಹೇಳಿದ್ನಾ? ಕೆಲಸ ಮಾಡಿಕೊಟ್ಟ ಅಧಿಕಾರಿಗಳನ್ನು ಗೌರವ ಯುತವಾಗಿ ಕಾಣಬೇಕು ಎಂದಿದ್ದೇನೆ ಅಷ್ಟೇ. ಯಾಕೆ ಇದನ್ನ ದೊಡ್ಡ ವಿಚಾರ ಮಾಡುತ್ತಿದ್ದಾರೆ? ರೈತರ ಸಮಸ್ಯೆ ಬಗ್ಗೆ ಯಾರು ಬರೆಯಲ್ಲ, ರಾಜ್ಯಪಾಲರಿಗೆ ಈ ಬಗ್ಗೆ ಹೇಳ್ತಾರಾ? ಅಲ್ಲಿ‌ ಅಧಿಕಾರಿಗಳು ಮತ್ತು ರೈತರ ನಡುವೆ ಘರ್ಷಣೆ ನಡೀತಾ ಇತ್ತು. ನಮ್ಮ‌ಮೇಲೆ‌ ಗಲಾಟೆ ಮಾಡುತ್ತಾರೆ ಅಂತ ಅಧಿಕಾರಿ‌ ಹೇಳಿದ್ದರು. ಹೀಗಾಗಿ ನಿಮ್ಮ ಕೆಲಸ ಆದ್ಮೇಲೆ ಗೌರವ ಕೊಡುವುದು ಧರ್ಮ ಎಂದು ಹೇಳಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಮಾತನಾಡಿದ್ದ ಶಿವಲಿಂಗೇಗೌಡ, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ.. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!

Bihar horror:ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧ್ರಭಕ್ತರೇ ಹೊಣೆ - ರಾಹುಲ್ ಗಾಂಧಿ

ChatGPT ಬಳಕೆಯಿಂದ IIT ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ: ಪ್ರೊಫೆಸರ್ ಅಮಾನತು, SC, ST ಕಾಯ್ದೆಯಡಿ ಬಂಧನಕ್ಕೆ ಪೋಷಕರ ಒತ್ತಾಯ!

ಕೇರಳದಲ್ಲಿ ದಿಢೀರ್ ಪ್ರವಾಹ: ಈಜಲು ಹೋದವರು ನೀರುಪಾಲು, 5 ಸಾವು, ಓರ್ವ ನಾಪತ್ತೆ! Video

'ಸಜ್ಜನ ಮುಖವಾಡದ ದುರ್ಜನ ಶಾಸಕ ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್‌ ಯಂತ್ರವೂ ಸಾಲದು'