ಪ್ರಮೋದಾ ದೇವಿ ಒಡೆಯರ್ 
ರಾಜ್ಯ

ದಸರಾದಲ್ಲಿ ಕಂಬಳ ಆಯೋಜಿಸುವ ಅಗತ್ಯವಿತ್ತೆ? ಸರ್ಕಾರ ನಮ್ಮ ಅಭಿಪ್ರಾಯ ಕೇಳಿಲ್ಲ; ರಾಜಮಾತೆ ಪ್ರಮೋದಾ ದೇವಿ

ಕಳೆದ ವರ್ಷದಂತೆ ಈ ಬಾರಿಯೂ 11 ದಿನಗಳ ಕಾಲ ದಸರಾ ಆಚರಣೆಗಳು ನಡೆಯಲಿದ್ದು, ಅರಮನೆಯ ಸಂಪ್ರದಾಯದಂತೆ ಎಲ್ಲಾ ಪೂಜೆಗಳು ಜರುಗಲಿವೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ನಡೆಯಲಿರುವ ರಾಜಮನೆತನದ ಖಾಸಗಿ ಧಾರ್ಮಿಕ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸೋಮವಾರ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ 11 ದಿನಗಳ ಕಾಲ ದಸರಾ ಆಚರಣೆಗಳು ನಡೆಯಲಿದ್ದು, ಅರಮನೆಯ ಸಂಪ್ರದಾಯದಂತೆ ಎಲ್ಲಾ ಪೂಜೆಗಳು ಜರುಗಲಿವೆ.

ಇನ್ನೂ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸುವುದು ಬೇಡ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್​ ಹೇಳಿದ್ದಾರೆ. ದಸರಾ ಉತ್ಸವದ ಸಮಯದಲ್ಲಿ ಕಂಬಳವನ್ನು ಆಯೋಜಿಸಿದರೆ ಅದಕ್ಕೆ ಹೆಚ್ಚಿನ ಗಮನ ಸಿಗುವುದಿಲ್ಲ ಎಂದು ಹೇಳಿದರಲ್ಲದೆ, "ದಸರಾ ಉತ್ಸವದ ವೇಳೆ ಕಂಬಳ ಕಾರ್ಯಕ್ರಮವನ್ನು ಒಂದು ದಿನ ನಡೆಸಲಾಗುತ್ತದೆಯೋ ಅಥವಾ ಎಷ್ಟು ದಿನಗಳವರೆಗೆ ನಡೆಸಲಾಗುತ್ತದೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಮಂಗಳೂರು ಭಾಗದ ಕಂಬಳಕ್ಕೆ ತನ್ನದೇ ಆದ ವೈಶಿಷ್ಟ್ಯ ಹಾಗೂ ಪ್ರಾಮುಖ್ಯತೆ ಇದ್ದು, ಅದನ್ನು ಕಾಪಾಡಬೇಕಿದೆ.

ರಾಜ್ಯ ಸರ್ಕಾರವು ಮೈಸೂರು ದಸರಾ ಉತ್ಸವಕ್ಕೆ ಹೊಸತನವನ್ನು ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರಬಹುದು ಎಂದು ಹೇಳಿದ ಅವರು, "ಕೇರಳದಲ್ಲಿ ಓಣಂ ಮತ್ತು ಮಂಗಳೂರಿನಲ್ಲಿ ಕಂಬಳವನ್ನು ಆಯೋಜಿಸಲಾಗುತ್ತದೆ ಹೀಗಿರುವಾಗ (ದಸರಾ ಮೆರವಣಿಗೆಯಲ್ಲಿ) ಸಾಕು ಆನೆಗಳನ್ನು ಕರೆದೊಯ್ಯುವಾಗ ಇದನ್ನು (ಕಂಬಳವನ್ನು) ಸೇರಿಸುವುದು ಎಷ್ಟು ಸೂಕ್ತ?ಎಂದು ಪ್ರಶ್ನಿಸಿದ್ದಾರೆ.

ದಸರಾದಲ್ಲಿ ಕಂಬಳ ಆಯೋಜಿಸಿದರೆ ಅದಕ್ಕೆ ಸೂಕ್ತ ಪ್ರಾಮುಖ್ಯತೆ ಸಿಗುವುದಿಲ್ಲ, ಬದಲಾಗಿ ದಸರಾ ಮುಗಿದ ನಂತರ ಪ್ರತ್ಯೇಕವಾಗಿ ಕಂಬಳವನ್ನು ಆಯೋಜಿಸಬಹುದಿತ್ತು. ದಸರಾದಲ್ಲಿ ಕಂಬಳ ಆಯೋಜಿಸುವ ಕುರಿತು ಸರ್ಕಾರ ನಮ್ಮ ಅಭಿಪ್ರಾಯ ಕೇಳಿಲ್ಲ ಎಂದು ಹೇಳಿದ್ದಾರೆ.ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ರಾಜಮನೆತನದ ಧಾರ್ಮಿಕ ವಿಧಿವಿಧಾನಗಳು ಹಾಗೂ ಖಾಸಗಿ ದರ್ಬಾರ್‌ಗೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.

ಅಕ್ಟೋಬರ್ 5: ರತ್ನಖಚಿತ ಸಿಂಹಾಸನ ಜೋಡಣೆ

ಅರಮನೆಯ ಸಮ್ಮಿಶ್ರ ಸಭಾಂಗಣದಲ್ಲಿ ಭದ್ರತೆಯಲ್ಲಿರುವ ಐತಿಹಾಸಿಕ ಹಾಗೂ ಆಕರ್ಷಕ ರತ್ನಖಚಿತ ಸಿಂಹಾಸನವನ್ನು ಖಾಸಗಿ ದರ್ಬಾರ್‌ಗಾಗಿ ಅಕ್ಟೋಬರ್ 5ರಂದು ಜೋಡಣೆ ಮಾಡಲಾಗುತ್ತದೆ.

ಅಕ್ಟೋಬರ್ 11ರಂದು ಬೆಳಿಗ್ಗೆ 11:45ರ ಶುಭ ಮುಹೂರ್ತದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನವನ್ನೇರುವ ಮೂಲಕ ಸಾಂಪ್ರದಾಯಿಕ ಖಾಸಗಿ ದರ್ಬಾರ್‌ಗೆ ಚಾಲನೆ ದೊರೆಯಲಿದೆ.

ಅಕ್ಟೋಬರ್ 16: ಸರಸ್ವತಿ ಪೂಜೆ

ನವರಾತ್ರಿ ಪೂಜಾ ವಿಧಿವಿಧಾನಗಳ ಭಾಗವಾಗಿ ಅಕ್ಟೋಬರ್ 16ರಂದು ಅರಮನೆಯ ಆವರಣದಲ್ಲಿ ವಿಧಿವಿಧಾನಗಳೊಂದಿಗೆ ಸರಸ್ವತಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಅಕ್ಟೋಬರ್ 20: ಆಯುಧ ಪೂಜೆ

ವಿಜಯದಶಮಿಯ ಹಿಂದಿನ ದಿನವಾದ ಅಕ್ಟೋಬರ್ 20ರಂದು ಬೆಳಿಗ್ಗೆ 11:35ರ ಶುಭ ಲಗ್ನದಲ್ಲಿ ಅರಮನೆಯ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಹಾಗೂ ರಾಜಮನೆತನದ ಆಯುಧಗಳು ಮತ್ತು ವಾಹನಗಳಿಗೆ ಶಾಸ್ತ್ರೋಕ್ತವಾಗಿ ಆಯುಧ ಪೂಜೆ ನೆರವೇರಲಿದೆ.

ಅಕ್ಟೋಬರ್ 21: ವಿಜಯದಶಮಿ ಮೆರವಣಿಗೆ

ನವರಾತ್ರಿ ಕಾರ್ಯಕ್ರಮಗಳ ಸಮಾರೋಪ ಅಂಗವಾಗಿ ಅಕ್ಟೋಬರ್ 21ರಂದು ವಿಜಯದಶಮಿಯ ವೈಭವದ ಮೆರವಣಿಗೆ ಮತ್ತು ಜಂಬೂಸವಾರಿ ನಡೆಯಲಿದೆ. ಅರಮನೆಯಿಂದ ಶುರುವಾಗುವ ಅಂಬಾರಿ ಮೆರವಣಿಗೆಯೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 ‘ಟ್ರಂಪ್ ಟಿವಿ’ ಸ್ಟ್ರೀಮಿಂಗ್ ಆರಂಭ..!

ಕಸ್ತೂರಿರಂಗನ್ ವರದಿ ಗದ್ದಲ: ಮೇಲ್ಮನೆಯಲ್ಲಿ ಸತತ 10 ಗಂಟೆಗಳ ಮಹಾ ಚರ್ಚೆ; ಸರ್ಕಾರದ ನಿಲುವೇನು..?

ರಾಜ್ಯದ ಹಲವೆಡೆ ವರುಣನ ಆರ್ಭಟ: ಬೆಂಗಳೂರು ಸೇರಿ ಪ್ರಮುಖ ಜಿಲ್ಲೆಗಳಿಗೆ yellow ಅಲರ್ಟ್ ಘೋಷಣೆ!

ಕಸ್ತೂರಿರಂಗನ್ ವರದಿ ಜಾರಿಯಾದರೆ ರಕ್ತಪಾತ; ರಾಜ್ಯ ಸರ್ಕಾರಕ್ಕೆ ಆರಗ ಜ್ಞಾನೇಂದ್ರ ಎಚ್ಚರಿಕೆ

ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!