ಗವಿಸಿದ್ದೇಶ್ವರ ಮಠದ ಸ್ವಾಮೀಜಿ 
ರಾಜ್ಯ

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ

ಈ ಬಾರಿ ಮೈಸೂರು ದಸರಾ ಊದ್ಘಾಟಕರಾಗಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಸ್ವಾಮೀಜಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಉದ್ಘಾಟಕರು ಯಾರು ಎನ್ನುವ ಗೊಂದಲಕ್ಕೆ ಕೊನೆಗೂ ಗುರುವಾರ ತೆರೆ ಬಿದ್ದಿದೆ.

ಈ ಬಾರಿ ಮೈಸೂರು ದಸರಾ ಊದ್ಘಾಟಕರಾಗಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಅಕ್ಟೋಬರ್‌ 11ಕ್ಕೆ ಮಸೂರು ದಸರಾ ಉದ್ಘಾಟಿಸಲಿದ್ದು, ಅಕ್ಟೋಬರ್ 21 ರಂದು ವಿಜಯದಸಮಿ ಜಂಬೂಸವಾರಿ ನಡೆಯಲಿದೆ. ಅಂದು ಸಾಯಂಕಾಲ 4:10 ರ ಮೀನಾ ಲಗ್ನದಲ್ಲಿ ಜಂಬೂಸವಾರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಈ ದಸರಾವನ್ನು ಅದ್ಧೂರಿಯ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ನಾಡಹಬ್ಬವನ್ನು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ 18ನೇ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ತಮ್ಮ ಅಭೂತಪೂರ್ವ ಸಾಮಾಜಿಕ ಕಳಕಳಿ, ಸರಳತೆ ಮತ್ತು ದಾಸೋಹ ಪರಂಪರೆಯಿಂದಾಗಿ ನಾಡಿನಾದ್ಯಂತ ‘ನಡೆದಾಡುವ ದೇವರು’ ಹಾಗೂ ‘ಜಲಋಷಿ’ ಎಂದೇ ಹೆಸರು ವಾಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು ’: ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ, ಸಂಚುಕೋರರಿಗೆ ಶಿಕ್ಷೆಯಾಗಬೇಕು- ರಾಹುಲ್ ಗಾಂಧಿ

ಬಿಹಾರದಲ್ಲಿ ಜಮುಯಿ ಘಟನೆ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ: ಬಾಲಕಿಯನ್ನು ಹಿಡಿದು ಎಳೆದಾಡಿದ ಕೀಚಕರು; Video

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿ.ಕೆ ಹರಿಪ್ರಸಾದ್ ರಿಂದ ದಾಖಲೆ ಬಿಡುಗಡೆ!

ದೇಶಾದ್ಯಂತ ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರು ಡಿಲೀಟ್! ಅವರ ಮಕ್ಕಳ ಗತಿಯೇನು? CEC ವಿರುದ್ಧ ದೂರು ದಾಖಲಿಸಿದ TMC ಸಂಸದೆ

BiggBoss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!