ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ಟ್ರಾಫಿಕ್, ಕಸ ಬೆಂಗಳೂರಿನ ಟಾಪ್ 2 ಸಮಸ್ಯೆ; ಕಸದ ವಾರ್ಡನ್ ನೇಮಕ ಮಾಡಲು ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕಸ ನಿರ್ವಹಣೆ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಪರಿಸ್ಥಿತಿಯನ್ನು ಹೇಗೆ ಸುಧಾರಿಸಿಬೇಕು ಅನ್ನೋದರ ಬಗ್ಗೆ ಸಲಹೆ ತೆಗೆದುಕೊಳ್ಳಲು ಇಂದು ಸಾರ್ವಜನಿಕರ ಸಂವಾದ ನಡೆಸಿದ್ದೇವೆ ಎಂದರು.

ಬೆಂಗಳೂರು: ಟ್ರಾಫಿಕ್ ಹಾಗೂ ಕಸದ ಸಮಸ್ಯೆ ಬೆಂಗಳೂರಿನ ಟಾಪ್ ಟು ಸಮಸ್ಯೆಗಳಾಗಿದ್ದು, ಟ್ರಾಫಿಕ್ ವಾರ್ಡನ್ ಮಾದರಿಯಲ್ಲಿ ಕಸದ ವಾರ್ಡನ್ ನೇಮಕ ಮಾಡಲು ನಿರ್ಧರಿಸಿದ್ದೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ(GBA) ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕಸ ನಿರ್ವಹಣೆ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಪರಿಸ್ಥಿತಿಯನ್ನು ಹೇಗೆ ಸುಧಾರಿಸಿಬೇಕು ಅನ್ನೋದರ ಬಗ್ಗೆ ಸಲಹೆ ತೆಗೆದುಕೊಳ್ಳಲು ಇಂದು ಸಾರ್ವಜನಿಕರ ಸಂವಾದ ನಡೆಸಿದ್ದೇವೆ ಎಂದರು.

ವ್ಯವಸ್ಥೆಯಲ್ಲೂ ಸುಧಾರಣೆ ಮಾಡಬೇಕಿದೆ. ಜನರಿಗೆ ಬೆಂಗಳೂರು ಸ್ವಚ್ಛವಾಗಿರಬೇಕು ಅನ್ನೋ ಆಸಕ್ತಿ ಇದೆ. ಹೀಗಾಗಿ ಆಸಕ್ತ ಜನರನ್ನು ಕಸದ ವಾರ್ಡನ್ ಆಗಿ ನೇಮಕ ಮಾಡಿಕೊಳ್ಳುವ ಯೋಜನೆ ಇದೆ. ಜೊತೆಗೆ ಸ್ವಚ್ಛತೆಯ ವಿಚಾರದಲ್ಲಿ ಜನರನ್ನು ಕೂಡ ಇನ್ವಾಲ್ವ್ ಮಾಡಿಕೊಳ್ಳೋಕೆ ನಿರ್ಧರಿಸಿದ್ದೇವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿರೋಧ ಪಕ್ಷದ ಶಾಸಕರ ಕ್ಷೇತ್ರ ಸ್ವಚ್ಛವಾಗಿಲ್ಲ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಂದೇ ಕ್ಷೇತ್ರದಲ್ಲಿ ಇದ್ದಾಗಲೂ ಅಕ್ಕಪಕ್ಕದ ವಾರ್ಡ್ ವೈಸ್ ಸ್ವಚ್ಛತೆ ಒಂದೇ ತರಹ ಇರಲ್ಲ. ಇದು ಅಧಿಕಾರಿಗಳ ಅಥವಾ ಕಾಂಟ್ರಾಕ್ಟರ್ ನಿರ್ಲಕ್ಷ್ಯ ಇರುತ್ತದೆ. ಕಸದ ವಿಚಾರದಲ್ಲಿ ರಾಜಕೀಯ ಮಾಡಿದ್ರೇ ಅದು ಕ್ಷುಲ್ಲಕ. ಆಶೋಕ್ ಅವರಿಗೆ ಅವರ ರಾಜಕೀಯ ಅನುಭವದ ಆಧಾರದ ಮೇಲೆ ಖಂಡಿತಾ ಅವರ ಸಲಹೆಗೆ ಗೌರವ ಕೊಡುತ್ತೇವೆ. ರಾಜಕೀಯ ಬೆರೆಸೋದು ಬೇಡ ಎಂದರು.

ಇನ್ನೂ ಕಸದ ರೀ ಟೆಂಡರ್ ಕರೆಯೋಕೆ ಸಜ್ಜಾಗಿದ್ದೇವೆ. ಈಗಾಗಲೇ 21 ಪ್ಯಾಕೇಜ್ ಟೆಂಡರ್‌ಗೆ ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ಏಳು ಟೆಂಡರ್‌ಗೆ ಇನ್ನು ಜನ ಬಂದಿಲ್ಲ. ಹೀಗಾಗಿ ರೀ ಟೆಂಡರ್ ಕರೆಯುವ ಪ್ಲ್ಯಾನ್‌ನಲ್ಲಿದ್ದೇವೆ. ಜೊತೆಗೆ ಕಸದ ಗಾಡಿ ಬಹುತೇಕ ಗುಜರಿಯಾಗಿದೆ. ಗುಜರಿ ಗಾಡಿಗಳಿಂದ ಒಂದು ಟನ್ ಕಸ ತೆಗೆದುಕೊಂಡು ಹೋಗುವ ಕೆಪಾಸಿಟಿಯೇ ಇಲ್ಲ. ಹೀಗಾಗಿಯೇ ಸಮಸ್ಯೆಯಾಗುತ್ತಿದೆ. ತುಂಬಾ ಕಡೆ ಕಸದ ಗಾಡಿಗಳೇ ಹೋಗುತ್ತಿಲ್ಲ. ಆದ್ರೇ ಕೆಲ ಕಡೆ ಪ್ರಾಮಾಣಿಕವಾಗಿ ಕೆಲ್ಸ ಮಾಡುವ ಸಿಬ್ಬಂದಿ ಇದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ವಿಪಕ್ಷಗಳು: ಸಂಸತ್ತಿನ ಉಭಯ ಸದನಗಳಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸಲು ಮುಂದು!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 160 ಬಾಂಗ್ಲಾದೇಶಿಗರ ಗಡೀಪಾರು!

'ಈ ದೇಶವನ್ನು ದೇವರೇ ಕಾಪಾಡಬೇಕು; 5 ಗಂಟೆಯ ಪ್ರಯಾಣ ನರಕ': ರೈಲಿನಲ್ಲಾದ ಕಹಿ ಅನುಭವ ಬಿಚ್ಚಿಟ್ಟ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ!

ಲೇಟ್ ಆದರೂ, ಸರಿಯಾದ ನಿರ್ಧಾರ: ರಾಜ್ಯ BJP ಉಸ್ತುವಾರಿ ರಾಧಾ ಮೋಹನದಾಸ್ ಬದಲಾವಣೆಗೆ 2 ಕಾರಣ ನೀಡಿದ ಯತ್ನಾಳ್