ರಾಜ್ಯ

ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಾಕಿ; ಗುತ್ತಿಗೆದಾರರಿಂದ ನಿತ್ಯ ಕಿರುಕುಳ: ಪತ್ರ ಬರೆದು ಕೆಆರ್‌ಐಡಿಎಲ್ AEE ನಾಪತ್ತೆ!

ಪತ್ರದಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ತಾವು ತೀವ್ರವಾಗಿ ನೊಂದಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ಗದಗ: ರಾಜ್ಯ ಸರ್ಕಾರದ ಅನುದಾನ ಬಾರದಕ್ಕೆ ಪತ್ರ ಬರೆದು KRIDL ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಅಧಿಕಾರಿ ನಾಪತ್ತೆಯಾಗಿದ್ದಾರೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಉಂಟಾದ ಆರ್ಥಿಕ ಸಂಕಷ್ಟವೇ ಅಧಿಕಾರಿಯ ನಾಪತ್ತೆಗೆ ಕಾರಣ ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ.

ಕೆಆರ್‌ಐಡಿಎಲ್‌ನ ಇಇ ಅವರಿಗೆ ಪತ್ರ ಬರೆದು ಫರ್ವೀಜ್ ನಾಪತ್ತೆಯಾಗಿದ್ದಾರೆ. ಪತ್ರದಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ತಾವು ತೀವ್ರವಾಗಿ ನೊಂದಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅನುದಾನ ಬಿಡುಗಡೆಯಾಗದ ಹಿನ್ನೆಲೆ ಮನೆಯ ಮುಂದೆ ಉಪ-ಗುತ್ತಿಗೆದಾರರು ಬಂದು ಗಲಾಟೆ ಮಾಡುತ್ತಿದ್ದರು. ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಪ್ರತಿದಿನ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ಫರ್ವೀಜ್ ಉಲ್ಲೇಖಿಸಿದ್ದಾರೆ.

ನನ್ನ ಜೀವನವನ್ನೇ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಪರಿಸ್ಥಿತಿಯನ್ನ ನಿಭಾಯಿಸುವಲ್ಲಿ ನಾನು ಸೋತಿದ್ದೇನೆ. ಸದರಿ ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ. ಬೇರೆ ಎಇಇಯನ್ನ ನಿಯೋಜಿಸಿ. ದಯವಿಟ್ಟು ನನ್ನ ಕುಟುಂಬದವರಿಗೆ ಕಿರುಕುಳ ನೀಡಬೇಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

2026ರ ಸೆಪ್ಟೆಂಬರ್ 12ರಂದು ಇಇ ಅವರಿಗೆ ಪತ್ರ ಬರೆದಿದ್ದ ಫರ್ವೀಜ್, ಮರುದಿನ ಅಂದರೆ ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೇಳಿ ತೆರಳಿದ್ದರು. ಬಳಿಕ ಸೆಪ್ಟೆಂಬರ್ 16ರಂದು ಅವರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಪತ್ನಿ, ಓರ್ವ ಮಗಳು, ತಂದೆ-ತಾಯಿ ಹಾಗೂ ಸಹೋದರರನ್ನ ಬಿಟ್ಟು ಫರ್ವೀಜ್ ನಾಪತ್ತೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಮ್ಮಿ, ಪಾಪಾ ಭೇಟಿ ಮಾಡಿದ ರೆಸ್ಟೋರೆಂಟ್‌ಗೆ ಗೆಳತಿ ಜತೆ ಹೋಗಿದ್ದೆ: ಮೊದಲ ಬಾರಿ ಗರ್ಲ್​ಫ್ರೆಂಡ್​​ ಬಗ್ಗೆ ರಾಹುಲ್ ಗಾಂಧಿ ಮಾತು!

'Belonging - A Journey of Love' ಬಿಡುಗಡೆ: ಆತ್ಮಚರಿತ್ರೆ ಬರೆಯಲು ಕಾರಣ ಬಿಚ್ಚಿಟ್ಟ ಸೋನಿಯಾ ಗಾಂಧಿ; Video

'ನಿಖಿಲ್​​ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ? ದಲಿತರಿಗೆ ನಿತ್ಯ ದೇಗುಲ ಪ್ರವೇಶ ನಿರಾಕರಿಸುವುದು ಕಾಣುತ್ತಿಲವೇ?'

ಸಂಸದೆ ಪ್ರಿಯಾ ಜತೆ ರಿಂಕು ಸಿಂಗ್ ಮದುವೆ: ಪ್ರಧಾನಿ ಮೋದಿ ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ ಕ್ರಿಕೆಟರ್!

ಅಜಿತ್ ಪವಾರ್ ವಿಮಾನ ಅಪಘಾತ: ಫಡ್ನವೀಸ್‌ರಿಂದ VSR ಕಂಪನಿ ಮತ್ತು ಅದರ ಮಾಲೀಕರ ರಕ್ಷಣೆ; ರೋಹಿತ್ ಪವಾರ್ ಆರೋಪ