ಶಾಸಕ ಅಭಯ್ ಪಾಟೀಲ್ 
ರಾಜ್ಯ

ಮೊದಲು ಕನ್ನಡ ಕಲಿತು ಪತ್ರ ಓದಲಿ: ವಯಸ್ಸಾದಂತೆ ಹರಿಪ್ರಸಾದ್ ಮಾನಸಿಕ ಸಮತೋಲನ ತಪ್ಪಿದೆ; ಅಭಯ್ ಪಾಟೀಲ್

ಹರಿಪ್ರಸಾದ್ ಸಚಿವರಾಗಲು ಬಯಸಿದ್ದರು. ಆದರೆ, ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಯಿತು. ಅವರಿಗೆ ಮಾನಸಿಕ ಸಮತೋಲನ ತಪ್ಪಿದಂತಿದೆ. ಹಾಗಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಬೆಳಗಾವಿ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ 2,500ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತೆ ಕೋರಿ, ತಾವು ಚುನಾವಣಾಧಿಕಾರಿಗೆ ಪತ್ರ ನೀಡಿದ್ದಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಮಾಡಿರುವ ಆರೋಪವನ್ನು ಶಾಸಕ ಅಭಯ ಪಾಟೀಲ ನಿರಾಕರಿಸಿದರು.

ಹರಿಪ್ರಸಾದ ಅವರಿಗೆ ಕನ್ನಡ ಓದಲು ಬರುವುದಿಲ್ಲ ಎಂದೆನಿಸುತ್ತದೆ. ನಾನು ಬರೆದ ಪತ್ರಕ್ಕೆ ಅವರು ತಮ್ಮದೇಯಾದ ರೀತಿಯಲ್ಲಿ ಅರ್ಥ ಕಲ್ಪಿಸಿದ್ದಾರೆ. ಎಸ್‌ಐಆರ್‌ ನಂತರ ಪ್ರಕಟಿಸಿದ ಕರಡು ಮತದಾರರ ಪಟ್ಟಿ ಪರಿಶೀಲನೆ ವೇಳೆ, ಮತಗಟ್ಟೆ ಮಟ್ಟದ ಸಹಾಯಕರು-2 ಸಂಶಯಾಸ್ಪದ ನಕಲಿ ಮತದಾರರ ಕುರಿತು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದ್ದರು.

ಅವುಗಳನ್ನು ಪರಿಶೀಲಿಸಿ, ನಕಲಿ ಮತದಾರರು ಎಂದು ಕಂಡುಬಂದಲ್ಲಿ ಪಟ್ಟಿಯಿಂದ ತೆಗೆದುಹಾಕುವಂತೆ ಕೋರಿದ್ದೇನೆಯೇ ಹೊರತು, ನಾನು ಯಾವುದೇ ಸಮುದಾಯದ ಹೆಸರನ್ನು ಅದರಲ್ಲಿ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ 260 ಮತಗಟ್ಟೆಗಳಲ್ಲಿ ಅನುಮಾನಾಸ್ಪದ ಮತದಾರರು ಕಂಡುಬಂದಿದ್ದಾರೆ. ಸತ್ತವರ ಹೆಸರುಗಳೂ ಪಟ್ಟಿಯಲ್ಲಿವೆ. ಅಲ್ಲದೆ, ಕರಡು ಮತದಾರರ ಪಟ್ಟಿ ಪರಿಶೀಲನೆ ವೇಳೆ ಕ್ಷೇತ್ರವೊಂದರ ಮನೆಯಲ್ಲಿ 50 ಮತದಾರರು ಕಂಡುಬಂದಿರುವುದು ಸ್ವೀಕಾರಾರ್ಹವಲ್ಲದ ವಿಷಯ. ಅದನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದರು.

ಹರಿಪ್ರಸಾದ್ ಸಚಿವರಾಗಲು ಬಯಸಿದ್ದರು. ಆದರೆ, ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಯಿತು. ಅವರಿಗೆ ಮಾನಸಿಕ ಸಮತೋಲನ ತಪ್ಪಿದಂತಿದೆ. ಹಾಗಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಮತಗಟ್ಟೆ ಮಟ್ಟದ ಸಹಾಯಕರು–2 ಸಲ್ಲಿಸಿದ ಆಕ್ಷೇಪಣೆಗಳ ಪ್ರಕಾರ ಹೆಸರುಗಳನ್ನು ಪರಿಶೀಲಿಸುವಂತೆ ನಾವು ಚುನಾವಣಾಧಿಕಾರಿಯನ್ನು ಕೋರಿದ್ದೇವೆಯೇ ಹೊರತು, ನೇರವಾಗಿ ಹೆಸರುಗಳನ್ನು ಅಳಿಸುವಂತೆ ಕೇಳಿಲ್ಲ ಎಂದು ಪುನರುಚ್ಚರಿಸಿದರು.

ಮತಗಟ್ಟೆ ಮಟ್ಟದ ಸಹಾಯಕ–1 ಆಗಿರುವ ನಾನು ಚುನಾವಣಾಧಿಕಾರಿಗೆ ಪತ್ರ ಬರೆದು ಎಲ್ಲ ಮತದಾರರ ಪರಿಶೀಲನೆ ನಡೆಸುವಂತೆ ಕೋರಿದ್ದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರೂ ಆಗಿರುವ ಚುನಾವಣಾಧಿಕಾರಿ ಕಾರ್ತಿಕ ಎಂ. ಅವರು ಪತ್ರವನ್ನು ಸರಿಯಾಗಿ ಓದದೆ, ಸಾಮೂಹಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. ವಾಸ್ತವವಾಗಿ, ನಾನು ಮತಗಟ್ಟೆ ಮಟ್ಟದ ಸಹಾಯಕರು–2 ನೀಡಿದ ಆಕ್ಷೇಪಣೆಗಳ ಕ್ರೋಢಿಕೃತ ವರದಿಯನ್ನಷ್ಟೇ ಸಲ್ಲಿಸಿದ್ದೆ ಎಂದರು.

ಬಿ.ಕೆ.ಹರಿಪ್ರಸಾದ ಮಾಡಿರುವ ಬೆದರಿಕೆಗೆ ನಾನು ಹೆದರಲಾರೆ. ಇಂಥ ಬಹಳಷ್ಟು ಬೆದರಿಕೆ ನೋಡಿದ್ದೇನೆ. ಕಾನೂನಿನಲ್ಲಿ ಅವಕಾಶ ಇರುವ ಪ್ರಕಾರ ಪತ್ರ ಕೊಟ್ಟಿದ್ದೇನೆ. ಕಾನೂನು ಪ್ರಕಾರ ಕ್ರಮ ವಹಿಸುವಂತೆ ಹೇಳಿದ್ದೇನೆ ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯದವರ ಹೆಸರು ತೆಗೆದುಹಾಕುವಂತೆ ಹೇಳಿದ್ದೇನೆ ಎಂದು ಹರಿಪ್ರಸಾದ ಹೇಳಿದ್ದಾರೆ. ಹಾಗೆ ಮಾತನಾಡಲು ನಾಲ್ಕು ಬಾರಿ ಶಾಸಕನಾಗಿರುವ ನಾನೇನೂ ಮೂರ್ಖನಿದ್ದೇನೆಯೇ ಅಥವಾ ಅವರು ಮೂರ್ಖರಿದ್ದಾರಾ ಎಂದು ಪ್ರಶ್ನಿಸಿದರು.

ಹರಿಪ್ರಸಾದ ಮೊದಲು ನಾನು ಕೊಟ್ಟಿರುವ ಪತ್ರವನ್ನು ಸರಿಯಾಗಿ ಓದಿ, ಆಮೇಲೆ ಮತ್ತೊಮ್ಮೆ ಸುದ್ದಿಗೋಷ್ಠಿ ಮಾಡಲಿ. ಹಿರಿಯ ರಾಜಕಾರಣಿಯಾದ ಅವರ ಬಗ್ಗೆ ಗೌರವ ಇದೆ. ಆದರೆ, ವಯಸ್ಸಾದ ನಂತರ ಅವರಿಗೆ ಮರೆವು ಹೆಚ್ಚಾಗಿದೆ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕೃತ

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ಪ್ರತಿಭಟನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ: ಸಚಿವ ಹೆಚ್.ಸಿ. ಬಾಲಕೃಷ್ಣ ಪೊಲೀಸರನ್ನು ಛೂಬಿಟ್ರಾ? ಜೆಡಿಎಸ್ ಆರೋಪ Video

ಭಜನಾ ಕಾರ್ಯಕ್ರಮ: 'ಹನುಮಾನ್ ಅಂಶ್'ನ 'ಪಾರ್ವತಿ' ಹಾಡಿಗೆ ದನಿಗೂಡಿಸಿ, ಕಂಜೀರಾ ನುಡಿಸಿದ ಪ್ರಧಾನಿ ಮೋದಿ! Video

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ