ತೊಗರಿಬೇಳೆ (ಸಂಗ್ರಹ ಚಿತ್ರ) 
ರಾಜ್ಯ

ವಿದೇಶಿ ಮಾರುಕಟ್ಟೆಗೆ ಕಲಬುರಗಿ ತೊಗರಿಬೇಳೆ ಎಂಟ್ರಿ: ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್ ರಫ್ತು, ರೈತರಿಗೆ ಶೇ.30ಕ್ಕೂ ಅಧಿಕ ಲಾಭ..!

ಭಾರತದ ಜಿಐ ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸುವುದರ ಜೊತೆಗೆ, ರೈತ ಉತ್ಪಾದಕ ಸಂಸ್ಥೆಗಳ ನೇತೃತ್ವದ ಬ್ರ್ಯಾಂಡ್‌ಗಳ ಕೃಷಿ ಉತ್ಪನ್ನ ರಫ್ತಿನಲ್ಲಿನ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶವೂ ಇದಾಗಿದೆ.

ಕಲಬುರಗಿ: ಜಿಐ (ಭೌಗೋಳಿಕ ಸೂಚಕ) ಮಾನ್ಯತೆ ಪಡೆದ ಕಲಬುರಗಿ ತೊಗರಿಬೇಳೆ ಇದೀಗ ಮಾಲ್ಡೀವ್ಸ್‌ಗೂ ರಫ್ತಾಗಿದೆ.

ಸೆಪ್ಟೆಂಬರ್ 24ರಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ವತಿಯಿಂದ ಒಂದು ಮೆಟ್ರಿಕ್ ಟನ್ ಕಲಬುರಗಿ ತೊಗರಿಬೇಳೆಯ ರಫ್ತು ಸರಕನ್ನು ಮಾಲ್ಡೀವ್ಸ್‌ಗೆ ಕಳುಹಿಸಲಾಯಿತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾರ ತಿಳಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಜಿಐ ಮಾನ್ಯತೆ ಪಡೆದ ಕಲಬುರಗಿ ತೊಗರಿಬೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ರಫ್ತು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಭಾರತದ ಜಿಐ ಮಾನ್ಯತೆ ಪಡೆದ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಸ್ತರಿಸುವುದರ ಜೊತೆಗೆ, ರೈತ ಉತ್ಪಾದಕ ಸಂಸ್ಥೆಗಳ ನೇತೃತ್ವದ ಬ್ರ್ಯಾಂಡ್‌ಗಳ ಕೃಷಿ ಉತ್ಪನ್ನ ರಫ್ತಿನಲ್ಲಿನ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶವೂ ಇದಾಗಿದೆ ಎಂದು ತಿಳಿಸಿದ್ದಾರೆ.

ಈ ರಫ್ತು ಪ್ರಕ್ರಿಯೆಯ ಪ್ರಮುಖ ಅಂಶವೆಂದರೆ ರೈತರಿಗೆ ದೊರೆತ ಹೆಚ್ಚಿನ ಬೆಲೆ. ಸದ್ಯ ಮಾರುಕಟ್ಟೆಯಲ್ಲಿ ತೊಗರಿಬೇಳೆಯ ಬೆಲೆ ಕೆಜಿಗೆ 60 ರೂ.ಗಳಷ್ಟಿದ್ದರೆ, ರಫ್ತು ಆಧಾರಿತ ಮಾರಾಟ ವ್ಯವಸ್ಥೆಯ ಮೂಲಕ ರೈತರಿಗೆ ಕೆಜಿಗೆ 82 ರೂ. ದೊರೆತಿದೆ. ಇದರಿಂದ ರೈತರಿಗೆ ಶೇ.30ಕ್ಕೂ ಹೆಚ್ಚು ಲಾಭ ದೊರೆತಿದೆ ಎಂದು ಎಪಿಇಡಿಎ ತಿಳಿಸಿದೆ.

ಈ ಉಪಕ್ರಮದ ಮೂಲಕ ರೈತ ಉತ್ಪಾದಕ ಸಂಸ್ಥೆಗಳು ರಫ್ತು ಆಧಾರಿತ ಮೌಲ್ಯ ಸರಪಳಿಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಅಲ್ಲದೆ, ಉತ್ಪಾದಕರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಸಂಪರ್ಕಿಸಲು ಸಹಕಾರಿಯಾಗಲಿದೆ. ಸಂಘಟಿತ ರಫ್ತು ವ್ಯವಸ್ಥೆಗಳ ಮೂಲಕ ರೈತರಿಗೆ ಮಾರುಕಟ್ಟೆ ಪ್ರವೇಶ ಮತ್ತು ಉತ್ಪನ್ನದ ಮೌಲ್ಯಕ್ಕೆ ತಕ್ಕ ಪ್ರತಿಫಲ ದೊರಕಿಸುವ ಸಾಧ್ಯತೆಯನ್ನು ಈ ಕ್ರಮ ತೋರಿಸಿಕೊಟ್ಟಿದೆ ಎಂದು ಎಪಿಇಡಿಎ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

ಮತ್ತಷ್ಟು ಜಾಗತಿಕ ಬೆಂಬಲ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತದ ಬೆನ್ನಿಗೆ ನಿಂತ ಪೋರ್ಚುಗಲ್, ಮಾರಿಷಸ್!

ಇಸ್ರೇಲ್ ಮೇಲಿನ ಅಕ್ಟೋಬರ್ 7ರ ದಾಳಿ 16 ಬಾರಿ ಸಂಭವಿಸಿದ 9/11ರ ದಾಳಿಗೆ ಸಮಾನ- ನೆತನ್ಯಾಹು

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಗೋವಾದಲ್ಲಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ; ನಟ ವಿಶಾಲ್ ಗೆ ಗಾಯ! Video